ಪುತ್ತೂರು: ಕೆದಿಲ ಗ್ರಾಮದ ಪೇರಮೊಗ್ರು ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಜ.17ರಂದು ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು.
ಬೆಳಿಗ್ಗೆ ದೇವರ ಬಲಿ ಹೊರಟು ಉತ್ಸವ, ಪಲ್ಲಕಿ ಉತ್ಸವ, ಕೆದಿಲದಿಂದ ಕ್ಷೇತ್ರಕ್ಕೆ ಮಹಾದೈವಗಳ ಭಂಡಾರ ಆಗಮನ, ದೇವರ ಭೇಟಿ, ಕಟ್ಟೆಪೂಜೆ, ದೇವರ ದರ್ಶನ ಬಲಿ, ರಾಜಾಂಗಣದಲ್ಲಿ ಬಟ್ಟಲು ಕಾಣಿಕೆ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀದೇವರ ಬಲಿ ಹೊರಟು ಉತ್ಸವ, ಪಲ್ಲಕಿ ಉತ್ಸವ, ಉಯ್ಯಾಲೋತ್ಸವ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ ಕಿಶೋರ್ ಕುಮಾರ್ ಪೆರ್ಲ ಮತ್ತು ಬಳಗದವರಿಂದ ಭಕ್ತಿ ರಸಂಜರಿ ಕಾರ್ಯಕ್ರಮ ನಡೆಯಲಿದೆ.
ದೇವಸ್ಥಾನದ ಶ್ರೀ ವನದುರ್ಗಾ ಸೇವಾ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಜತ್ತನಕೋಡಿ ಸುಂದರ ಭಟ್, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಗಿರಿಶಂಕರ ಕೈಲಾರು, ದೇವತಾ ಸಮಿತಿ ಅಧ್ಯಕ್ಷ ಶ್ಯಾಮ ನಾರಾಯಣ ಜೆ.ಎಸ್., ಟ್ರಸ್ಟಿಗಳಾದ ಗಿರಿಶಂಕರ ಕೈಲಾರು, ವಿ.ಎಸ್ ಭಟ್, ಅನಂತಕೃಷ್ಣ ಭಟ್ ಮುರ್ಗಜೆ, ರಘು ಅಜಿಲ ಮಿತ್ತಿಲ, ಈಶ್ವರ ಮೂಲ್ಯ ಪೇರಮೊಗ್ರು, ತಿಮ್ಮಪ್ಪ ಮೂಲ್ಯ ಕುದುಮಾನು, ವಸಂತ ಕುಮಾರ್ ಅಮೈ, ಕೃಷ್ಣಾನಂದಾ ಬರೆಂಗಾ, ಜೆ.ಶಂಕರ ಭಟ್ ಜತ್ತನಕೋಡಿ, ಈಶ್ವರ ಜೋಯಿಷ ಅಂಗರಾಜೆ, ರಾಮಕೃಷ್ಣ ಭಟ್ ಪುಜಂತ್ತೋಡಿ, ಕರುಣಾಕರ ಶೆಟ್ಟಿ ಪೇರಮೊಗ್ರು, ಬಾಬು ಮೂಲ್ಯ ಕಜೆ, ಶ್ರೀಶ ಮುದ್ರಜೆ ಸೇರಿದಂತೆ ಸಾವಿರಾರು ಮಂದಿ ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
ಜ.18;ರಥೋತ್ಸವ, ಜ.19;ಅವಭೃತ ಸ್ನಾನ, ಧ್ವಜಾವರೋಹಣ:
ದೇವರ ಜಾತ್ರೋತ್ಸವದಲ್ಲಿ ಜ.18ರಂದು ಬೆಳಿಗ್ಗೆ ಶ್ರೀದೇವರ ಬಲಿ ಹೊರಟು ಉತ್ಸವ, ಕಲಶಾಭಿಷೇಕ, ಸಂಜೆ ಭಜನ್ ಸಂಧ್ಯಾ, ದೀಪೋತ್ಸವ, ಕ್ಷೇತ್ರದ ಮಹಾದೈವ ರಕ್ತೇಶ್ವರಿಯ ಭೇಟಿ, ರಾತ್ರಿ ರಥೋತ್ಸವ, ಜ.19ರಂದು ಬೆಳಿಗ್ಗೆ ಕವಾಟೋದ್ಘಾಟನೆ, ತೈಲಾಭಿಷೇಕ, ಸಂಜೆ ದೇವರ ಬಲಿ ಹೊರಟು ಮೆರವಣಿಗೆ, ಅವಭೃತ ಸ್ನಾನ, ಧ್ವಜಾವರೋಹಣ, ಕಲ್ಲಾಜೆ ಪಂಚವಟಿ ದೇವರ ಮಂಟಪದಲ್ಲಿ ಕಟ್ಟೆಪೂಜೆ, ಜ.20ರಂದು ಬೆಳಿಗ್ಗೆ ಗಣಪತಿ ಹೋಮ, ಸಂಪ್ರೋಕ್ಷಣೆ, ಕಲಶಾಭಿಷೇಕ, ಸೀಯಾಳಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಅನ್ನಸಂತರ್ಪಣೆ, ರಾತ್ರಿ ಮಹಾರಂಗಪೂಜೆ, ಕ್ಷೇತ್ರದ ಗುಳಿಗ ದೈವದ ನೇಮೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.