ಹಲವು ವಿಶೇಷತೆಗಳಿಗೆ ಸಾಕ್ಷಿಯಾದ ರಾಧಾ’ಸ್‌ನ ಆಫರ್‌ಗಳ ಬಿಗ್‌ಬಾಸ್ ರಾಧಾ’ಸ್ ಉತ್ಸವ
ಪುತ್ತೂರು: ಪ್ರತಿಷ್ಠಿತ ಜವುಳಿ ಮಳಿಗೆ ಕೋರ್ಟ್ ರಸ್ತೆಯ ರಾಧಾ’ಸ್‌ನಲ್ಲಿ ಆಫರ್‌ಗಳ ಬಿಗ್ ಬಾಸ್ ರಾಧಾ’ಸ್ ಉತ್ಸವದ ಲಕ್ಕೀ ಡ್ರಾದಲ್ಲಿ ದೊರೆತ ಪ್ರಥಮ ಬಹುಮಾನ ರೆಫ್ರೀಜರೇಟರ್‌ನ್ನು ಗ್ರಾಹಕರೋರ್ವರು ಅದೇ ಸಂಸ್ಥೆಯಲ್ಲಿರುವ ತನ್ನ ಅಚ್ಚು ಮೆಚ್ಚಿನ ಸಿಬ್ಬಂದಿಯೋರ್ವರಿಗೆ ಹಸ್ತಾಂತರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಉಪ್ಪಿನಂಗಡಿಯ ಕವಿತಾರವರು ಬಹುಮಾನವನ್ನು ಮಳಿಗೆಯ ಸಿಬ್ಬಂದಿಗೆ ಹಸ್ತಾಂತರಿಸಿದವರು. ಕವಿತಾರವರು ಹಲವು ವರ್ಷಗಳಿಂದ ರಾಧಾ’ಸ್ ಜವುಳಿ ಮಳಿಗೆಯ ಗ್ರಾಹಕರಾಗಿದ್ದು, ಅವರು ಪ್ರತಿ ಬಾರಿಯೂ ಜವುಳಿ ಖರೀದಿಗೆ ಮಳಿಗೆಗೆ ಬರುವ ಸಂದರ್ಭದಲ್ಲಿ ಮಳಿಗೆಯ ಹಿರಿಯ ಸಿಬ್ಬಂದಿ ಸೌಮ್ಯ ಶೆಟ್ಟಿಯವರು ಕವಿತಾರವರನ್ನು ಆದರದಿಂದ ಸ್ವಾಗತಿಸಿ, ಅವರಿಗೆ ಒಪ್ಪುಗೆಯಾಗುವ ಉಡುಪುಗಳನ್ನು ಖರೀದಿಸುವಲ್ಲಿ ಸಹಕರಿಸುತ್ತಿದ್ದರು. ಮಳಿಗೆಯಲ್ಲಿ ನಡೆದ ಆಫರ್‌ಗ ಬಿಗ್‌ಬಾಸ್ ರಾಧಾ’ಸ್ ಉತ್ಸವದ ಕೊನೆಯ ವಾರದಲ್ಲಿ ಮಳಿಗೆಗೆ ಆಗಮಿಸಿದ ಕವಿತಾರವರನ್ನು ಹಿರಿಯ ಸಿಬ್ಬಂದಿ ಸೌಮ್ಯರವರು ಎಂದಿನಂತೆ ಆದರದಿಂದ ಸ್ವಾಗತಿಸಿದ್ದರು. ಉಡುಪುಗಳನ್ನು ಖರೀದಿಸಿ ಹಿಂತಿರುಗುವಾಗ ಲಕ್ಕೀ ಕೂಪನ್‌ನ್ನು ಕವಿತಾರವರಿಗೆ ನೀಡಿದಾಗ ಇದರಲ್ಲಿ ವಿಜೇತರಾದರೆ ಬರುವ ಬಹುಮಾನವನ್ನು ನಿಮಗೆ ನೀಡುವುದಾಗಿ ಸೌಮ್ಯರವರಲ್ಲಿ ತಿಳಿಸಿದ್ದರು.
12ನೇ ವಾರದ ಡ್ರಾ.ದಲ್ಲಿ ಗ್ರಾಹಕಿ ಕವಿತಾರವರು ಪ್ರಥಮ ಬಹುಮಾನ ರೆಫ್ರೀಜರೇಟರನ್ನು ವಿಜೇತರಾಗಿದ್ದರು. ಬಹುಮಾನ ವಿಜೇತರಾಗಿರುವ ಬಗ್ಗೆ ಮಳಿಗೆಯವರು ಕವಿತರವರಿಗೆ ಮಾಹಿತಿ ನೀಡಿದ್ದರು. ಕೆಲ ದಿನಗಳ ಹಿಂದೆ ಮಳಿಗೆಗೆ ಆಗಮಿಸಿದ ಕವಿತಾರವರು ತನಗೆ ದೊರೆತ ಬಹುಮಾನವನ್ನು ಹಿರಿಯ ಸಿಬ್ಬಂದಿ ಸೌಮ್ಯರವರು ಹಸ್ತಾಂತರಿಸುವ ಮೂಲಕ ತನ್ನ ಅಚ್ಚು ಮೆಚ್ಚಿನ ಸಿಬ್ಬಂದಿಗೆ ನೀಡಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ.
ರಾಧಾ’ಸ್ ಉತ್ಸವದ ಅಕ್ಟೋಬರ್‌ನಲ್ಲಿ ನಡೆದ ಪ್ರಥಮ ವಾರದ ಡ್ರಾ.ದಲ್ಲಿ ಡಿಸೆಂಬರ್‌ನಲ್ಲಿ ವಿವಾಹವಾಗಬೇಕಿದ್ದ ವರ ದ್ವಿತೀಯ ಹಾಗೂ ವಧು ತೃತೀಯ ಬಹುಮಾನಗಳ ವಿಜೇತರಾದರೆ ಕೊನೆಯ ಬಂಪರ್ ಡ್ರಾ.ದಲ್ಲಿ ಜ.22ರಂದು ವಿವಾಹವಾಗಲಿರುವ ಕಡಬದ ವಧು ಟಿವಿಎಸ್ ಜುಪಿಟರ್ ದ್ವಿಚಕ್ರ ವಾಹನದ ವಿಜೇತರಾಗಿದ್ದರು. ಇದೀಗ ಗ್ರಾಹಕರಿಗೆ ದೊರೆತ ಪ್ರಥಮ ಬಹುಮಾನವನ್ನು ಅದೇ ಮಳಿಗೆ ಸಿಬ್ಬಂದಿಯೋರ್ವರಿಗೆ ಹಸ್ತಾಂತರಿಸುವ ಮೂಲಕ ಮಳಿಗೆಯಲ್ಲಿ ಪ್ರಥಮ ಬಾರಿಗೆ ನಡೆದ ರಾಧಾ’ಸ್ ಉತ್ಸವವು ಹಲವು ವಿಶೇಷತೆಗಳಿಗೆ ಸಾಕ್ಷಿಯಾದಂತಾಗಿದೆ.
ರಾಧಾ’ಸ್‌ನಲ್ಲಿ ಆಫರ್‌ಗಳ ಬಿಗ್‌ಬಾಸ್ ರಾಧಾ’ಸ್ ಉತ್ಸವವನ್ನು ಮೂರು ತಿಂಗಳುಗಳ ನಡೆಸಲಾಗಿತ್ತು. ಇದರಲ್ಲಿ ಪ್ರತಿ ಖರೀದಿಗೆ ಲಕ್ಕಿ ಕೂಪನ್‌ನ್ನು ಗ್ರಾಹಕರಿಗೆ ನೀಡಲಾಗಿತ್ತು. ಪ್ರತಿ ತಿಂಗಳಿಗೊಂದು ಬಂಪರ್ ಡ್ರಾ ಹಾಗೂ ಪ್ರತಿ ಸೋಮವಾರ ಡ್ರಾಗಳನ್ನು ನಡೆಸಲಾಗಿತ್ತು. ಪ್ರತಿ ತಿಂಗಳ ಬಂಪರ್ ಡ್ರಾ.ದಲ್ಲಿ ವಿಜೇತರಿಗೆ ಟಿವಿಎಸ್ ಜ್ಯುಪಿಟರ್ ದ್ವಿಚಕ್ರ ವಾಹನ ಹಾಗೂ ಪ್ರತಿ ವಾರದ ಡ್ರಾ.ದಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ 9 ಸಮಾಧಾನಕರ ಬಹುಮಾನಗಳನ್ನು ನೀಡಲಾಗಿತ್ತು.