ಮಹಿಳಾ ಜೇಸಿ ಅಧ್ಯಕ್ಷೆ-ಸುನೀತ ಜಿ.ರೈ, ಜೆಜೆಸಿ ಅಧ್ಯಕ್ಷೆ-ಕೃತಿ ಕೆ.ಎಸ್.
ಆಲಂಕಾರು: ಆಲಂಕಾರು ಜೇಸಿಐನ 2025ನೇ ಸಾಲಿನ ಅಧ್ಯಕ್ಷರಾಗಿ ಗುರುರಾಜ್ ರೈ ಕೇವಳ, ಕಾರ್ಯದರ್ಶಿಯಾಗಿ ಮಹೇಶ್ ಪಾಟಾಳಿ, ಮಹಿಳಾ ಜೇಸಿ ಅಧ್ಯಕ್ಷೆಯಾಗಿ ಸುನೀತ ಜಿ.ರೈ ಹಾಗೂ ಜೆಜೆಸಿ ಅಧ್ಯಕ್ಷೆಯಾಗಿ ಕೃತಿ ಕೆ.ಎಸ್.ಆಯ್ಕೆಯಾಗಿದ್ದಾರೆ.
ಐಪಿಪಿ ಮಮತಾ ಕಮಲಾಕ್ಷ ಶೆಟ್ಟಿ, ಉಪಾಧ್ಯಕ್ಷರಾಗಿ ವಸಂತಿ ಕನೆಮಾರು, ಧನ್ಯಾಪ್ರಶಾಂತ್ ರೈ, ಚೇತನ್ ಮೊಗ್ರಾಲ್, ರಾಧಾಕೃಷ್ಣ ಆನ, ನಾರಾಯಣ ನೆಕ್ಕರೆ, ಜೊತೆ ಕಾರ್ಯದರ್ಶಿ ಪುರಂದರ, ಕೋಶಾಧಿಕಾರಿ ದೇವಕಿ ಹಿರಿಂಜ ಹಾಗೂ ವಿತೇಶ್, ನವೀನ್ ರೈ, ಲತನ್ ರೈ, ಪೂರ್ಣೇಶ್ ಬಲ್ಯ, ಪ್ರೇಮ್ಕುಮಾರ್, ಚೇತನ್ ಕುಕ್ಕೇರಿ, ಶ್ರುತಿಗುರುಪ್ರಸಾದ್ ರೈ, ಪ್ರತಿಮಾ ರೈ, ಪವನ್ಕುಮಾರ್ ಅವರು ಸಮಿತಿಗೆ ನೇಮಕಗೊಂಡಿದ್ದಾರೆ. ನೂತನ ಸಮಿತಿಯ ಪದಗ್ರಹಣ ಸಮಾರಂಭ ಜ.18ರಂದು ಸಂಜೆ ಆಲಂಕಾರು ಗ್ರಾ.ಪಂ.ಹಾಲ್ನಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.