ಕಾಣಿಯೂರು: ಟೈಲರ್ ಬಳಿಗೆಂದು ಮನೆಯಿಂದ ಹೋದ ಯುವತಿ ನಾಪತ್ತೆ-ಸ್ಕೂಟಿ ಪತ್ತೆ

0

ಕಾಣಿಯೂರು: ಟೈಲರ್ ಬಳಿ ಹೋಗಿ ಬಟ್ಟೆ ಹೊಲಿಯಲು ಕೊಟ್ಟು ಬರುವುದಾಗಿ ಹೇಳಿ ಹೋದ ಯುವತಿಯೋರ್ವರು ತನ್ನ ಸ್ಕೂಟಿಯನ್ನು ಅರ್ಧದಲ್ಲೇ ನಿಲ್ಲಿಸಿ ನಾಪತ್ತೆಯಾಗಿರುವ ಕುರಿತು ಆಕೆಯ ತಂದೆ ಕಡಬ ಠಾಣೆಯಲ್ಲಿ ದೂರು ನೀಡಿದ್ದಾರೆ.


ಚಾರ್ವಾಕ ಗ್ರಾಮದ ಅಂಬುಲ ನಿವಾಸಿ ದೀಕ್ಷಾ (24ವ) ನಾಪತ್ತೆಯಾದವರು.

ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದ ದೀಕ್ಷಾ ರಜೆ ಮಾಡಿ ಜ.1 ರಂದು ಊರಿಗೆ ಬಂದು ಮನೆಯಲ್ಲೇ ಉಳಿದುಕೊಂಡಿದ್ದರು. ಜ.14 ರಂದು ಸಂಜೆ ಬಟ್ಟೆ ಹೊಲಿಸಲು ಟೈಲರ್ ಅಂಗಡಿಗೆ ಹೋಗಿ ಬರುವುದಾಗಿ ಹೋದಾಕೆ ಕತ್ತಲಾದರೂ ಮನೆಗೆ ಬಂದಿರಲಿಲ್ಲ. ಮನೆ ಮಂದಿ ಹುಡುಕಾಡಿದ ಸಂದರ್ಭದಲ್ಲಿ ಸುಮಾರು 1 ಕಿ.ಮೀ ದೂರದ ರಸ್ತೆಯೊಂದರಲ್ಲಿ ಆಕೆಯ ಸ್ಕೂಟಿ ಪತ್ತೆಯಾಗಿದೆ.


ದೀಕ್ಷಾ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಬರುತ್ತಿತ್ತು. ಪರಿಚಯಸ್ಥರಲ್ಲಿ ವಿಚಾರಿಸಿದಾಗ ದೊರೆತ ಮಾಹಿತಿಯನ್ವಯ ಆಕೆ ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಅಂಬರೀಶ್ ಮತ್ತು ಗೆಳೆಯರ ಬಗ್ಗೆ ಸಂಶಯ ವ್ಯಕ್ತಪಡಿಸಿ ಯುವತಿಯ ತಂದೆ ಚಂದ್ರಶೇಖರ ಅವರು ಕಡಬ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here