ಗ್ರಾಹಕರಿಂದ ಉತ್ತಮ ಸ್ಪಂದನೆ, ಕೊನೆಯ ಒಂದು ವಾರ ಬಾಕಿ
ಪುತ್ತೂರು: ಇಲ್ಲಿನ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ನಲ್ಲಿ ಆಯೋಜಿಸಲಾದ ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟದ ಗ್ಲೋ ಫೆಸ್ಟ್ ಜನವರಿ 26ರವರೆಗೆ ನಡೆಯಲಿದ್ದು ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಎಲ್ಲಾ ವಯೋಮಾನದವರಿಗಾಗಿ ಕೈಗೆಟಕುವ ದರದಲ್ಲಿ ನಿಮ್ಮಿಷ್ಟದ ವಜ್ರಾಭರಣಗಳನ್ನು ನಿಮ್ಮದಾಗಿಸಿಕೊಳ್ಳುವ ‘ಡೈಮಂಡ್ ಅಪರ್ಚುನಿಟಿ’ ನಿಮ್ಮ ಪಾಲಿಗಿದೆ.
ವಜ್ರದ ಆಭರಣಗಳು ತಮ್ಮ ಅಸಾಧಾರಣ ಸೌಂದರ್ಯ ಹಾಗೂ ದೀರ್ಘಕಾಲ ಬಾಳಿಕೆಯಿಂದ ಬಹಳ ಅಮೂಲ್ಯ ಆಭರಣಗಳು ಎಂದು ಪರಿಗಣಿಸಲ್ಪಟ್ಟಿವೆ. ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ನಲ್ಲಿ ಸುಮಾರು 3,000ಕ್ಕೂ ಮಿಕ್ಕಿದ ಡಿಸೈನ್ಗಳಲ್ಲಿ ಕಣ್ಮನ ಸೆಳೆಯುವ ವಜ್ರಾಭರಣಗಳ ಅಮೋಘ ಸಂಗ್ರಹವಿದ್ದು, ಎಲ್ಲಾ ವಯೋಮಿತಿಯ ಗ್ರಾಹಕರಿಗೆ ತಕ್ಕಂತೆ ವಜ್ರಾಭರಣಗಳ ಆಯ್ಕೆ ಲಭ್ಯವಿದೆ. ಮಕ್ಕಳ, ಮಹಿಳೆಯರ ಹಾಗೂ ಪುರುಷರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿರುವ ವಜ್ರಾಭರಣಗಳು ಸಂಗ್ರಹವಿದ್ದು ಗ್ರಾಹಕರಿಗೆ ಆಹ್ಲಾದಕರ ಖರೀದಿಯ ವಾತಾವರಣ ಕಲ್ಪಿಸಲಾಗಿದೆ.
ಗ್ಲೋ ಫೆಸ್ಟ್ನಲ್ಲಿ ವಜ್ರಾಭರಣ ಖರೀದಿ ಮೇಲೆ ಪ್ರತಿ ಕ್ಯಾರೆಟ್ ಗೆ ರೂ.8,000/- ವರೆಗೆ ರಿಯಾಯಿತಿ, 25,೦೦೦/- ಮತ್ತು ಅದಕ್ಕಿಂತ ಮೇಲ್ಪಟ್ಟ ಖರೀದಿಗೆ ವಿಶೇಷ ಮತ್ತು ಆಕರ್ಷಕ ಉಡಗೊರೆ ಪಡೆಯುವ ಸುವರ್ಣಾವಕಾಶವಿದೆ. ವಜ್ರಾಭರಣಗಳು ದುಬಾರಿ ಎಂದೇ ಭಾವನೆಯಲ್ಲಿರುವ ಜನರಿಗೆ ಕೈಗೆಟಕುವ ದರದಲ್ಲೂ ವಜ್ರಾಭರಣಗಳು ಲಭ್ಯವಿದೆ.
ರೂ.3,500ರಿಂದ ವಜ್ರಾಭರಣದ ಬೆಲೆಗಳು ಪ್ರಾರಂಭವಾಗುತ್ತದೆ. ಮೂಗುತಿ, ಪೆಂಡೆಂಟ್, ಉಂಗುರ, ಕಿವಿಯೋಲೆ ನೆಕ್ಲೆಸ್, ಬಳೆಗಳ ವಿವಿಧ ವಿನ್ಯಾಸಗಳ ಅಮೋಘ ಸಂಗ್ರಹವಿದೆ ಹಾಗೂ ಗ್ಲೋ ವಜ್ರಾಭರಣಗಳು ಅಂತರಾಷ್ಟ್ರೀಯ ಪ್ರಯೋಗಾಲಯದಿಂದ ಪ್ರಮಾಣಿಕರಿಸಲ್ಪಟ್ಟ, ಉತ್ಕೃಷ ಶ್ರೇಣಿಯ ಗುಣಮಟ್ಟದ ವಜ್ರಗಳಾಗಿದ್ದು, ಇದು ಮಾರುಕಟ್ಟೆಯಲ್ಲಿ ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ.
ಗ್ಲೋ ಫೆಸ್ಟ್ನಲ್ಲಿ ಗ್ರಾಹಕರಿಗೆ ವಜ್ರಾಭರಣಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು. ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆಯು ಸುಳ್ಯ, ಮೂಡಬಿದ್ರೆ, ಹಾಸನ ಹಾಗೂ ಕುಶಾಲನಗರದಲ್ಲಿ ತಮ್ಮ ಮಳಿಗೆಗಳನ್ನು ಹೊಂದಿದೆ. ಷರತ್ತುಗಳು ಅನ್ವಯದೊಂದಿಗೆ ಈ ಆಫರ್ ಪುತ್ತೂರು ಹಾಗೂ ಸುಳ್ಯ ಮಳಿಗೆಗಳಲ್ಲಿ ಮಾತ್ರ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.