ಪುತ್ತೂರು ನಗರ ಸಭೆ, ತಾಲೂಕು ಪಂಚಾಯತ್ನ ಸಹಯೋಗದೊಂದಿಗೆ ನಗರ ಸಭೆ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ‘ನಮ್ಮ ಸಂಸ್ಕೃತಿ-ಸ್ವಚ್ಛ ಸಂಸ್ಕೃತಿ’ ಧ್ಯೇಯವಾಕ್ಯದೊಂದಿಗೆ ಸ್ವಚ್ಛತಾ ಶ್ರಮದಾನ ಅಭಿಯಾನ
ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಪ್ರಧಾನ ಕಚೇರಿಯಲ್ಲಿ ಬೆಳಿಗ್ಗೆ ೧೦ರಿಂದ ಆಡಳಿತ ಮಂಡಳಿ ನಿರ್ದೇಶಕರ ಸಾಮಾನ್ಯ ಚುನಾವಣೆಯ ನಾಮಪತ್ರ ಸಲ್ಲಿಕೆ
ಪುತ್ತೂರು ಚೇತನಾ ಆಸ್ಪತ್ರೆಯಲ್ಲಿ ಬೆಳಿಗ್ಗೆ ೧೦ರಿಂದ ಮೂಳೆ ಸಾಂದ್ರತೆ ಉಚಿತ ತಪಾಸಣಾ ಶಿಬಿರ
ಕುಂಜೂರುಪಂಜ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಆರ್ಯಾಪು ೧ನೇ ವಾರ್ಡ್, ೧೧ಕ್ಕೆ ಆರ್ಯಾಪು ೨ನೇ ವಾರ್ಡ್, ಕಾರ್ಪಾಡಿ ಸುಬ್ರಹ್ಮಣ್ಯೇಶ್ವರ ಯುವಕ ಮಂಡಲದಲ್ಲಿ ಮಧ್ಯಾಹ್ನ ೨ಕ್ಕೆ ಆರ್ಯಾಪು ೩ನೇ ವಾರ್ಡ್, ಹಂಟ್ಯಾರು ಹಿ.ಪ್ರಾ. ಶಾಲೆಯಲ್ಲಿ ಸಂಜೆ ೪ಕ್ಕೆ ಆರ್ಯಾಪು ೪ನೇ ವಾರ್ಡ್ನ ವಾರ್ಡುಸಭೆ
ಬೆಟ್ಟಂಪಾಡಿ ಗ್ರಾ.ಪಂ ಸಮುದಾಯ ಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಮಕ್ಕಳ ಗ್ರಾಮಸಭೆ
ನೂಜಿಬಾಳ್ತಿಲ ಗ್ರಾ.ಪಂ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಬನ್ನೂರು ಬನ್ನೂರುಗುತ್ತು ಬಳಿ ಶ್ರೀ ಮಹಾಲಕ್ಷ್ಮೀ ಮಂದಿರದಲ್ಲಿ ಬೆಳಿಗ್ಗೆ ೯ರಿಂದ ಗಣಹೋಮ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಮಹಾಪೂಜೆ
ಬನ್ನೂರು ಗ್ರಾಮದ ಆಲುಂಬುಡ ಅನುಗ್ರಹ ನಿಲಯದಲ್ಲಿ ಬೆಳಿಗ್ಗೆ ೮ಕ್ಕೆ ಶ್ರೀ ಗಣಪತಿ ಹೋಮ, ಆಶ್ಲೇಷ ಬಲಿ, ನಾಗತಂಬಿಲ, ದೈವಗಳಿಗೆ ತಂಬಿಲ, ರಾತ್ರಿ ೬.೩೦ಕ್ಕೆ ಶ್ರೀ ಕಲ್ಲುರ್ಟಿ, ಶ್ರೀ ರಕ್ತೇಶ್ವರಿ, ಗುಳಿಗ ದೈವಗಳ ನೇಮೋತ್ಸವ
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಬೆಳಿಗ್ಗೆ ೬ರಿಂದ ಶ್ರೀ ಉಳ್ಳಾಕುಲು, ಮೈಷಂತಾಯ ದೈವಗಳ ನೇಮೋತ್ಸವ, ೭ರಿಂದ ಮಹಾಗಣಪತಿ ಹೋಮ, ಕಲಶ ಪೂಜೆ, ಮಧ್ಯಾಹ್ನ ೧೨.೧೫ರಿಂದ ಶ್ರೀ ವ್ಯಾಘ್ರಚಾಮುಂಡಿ ದೈವ (ಪಿಲಿಭೂತ)ದ ನೇಮೋತ್ಸವ, ಸಂಜೆ ೭ರಿಂದ ಶ್ರೀ ಕಲ್ಲುರ್ಟಿ, ಕಲ್ಕುಡ ದೈವದ ನೇಮ
ಕೊಳ್ತಿಗೆ ಗ್ರಾಮ ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದಲ್ಲಿ ಬೆಳಿಗ್ಗೆ ೯ರಿಂದ ಆಶ್ಲೇಷ ಬಲಿಪೂಜೆ, ನಾಗನಕಟ್ಟೆಯಲ್ಲಿ ಕಲಶಾಭಿಷೇಕ, ತಂಬಿಲ ಸೇವೆ, ಶ್ರೀ ಮಹಾವಿಷ್ಣು ಆರಾಧನೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ೬ಕ್ಕೆ ದುಗ್ಗಳದಿಂದ ಶ್ರೀ ಇರ್ವೆರು ಉಳ್ಳಾಕ್ಲು ದೈವದ ಭಂಡಾರವು, ನಾಲಕದಿಂದ ರಾಜನ್ ದೈವದ ಭಂಡಾರ ಆಗಮನ, ಸಂಜೆ ೬.೩೦ರಿಂದ ಯೋಗ ಪ್ರದರ್ಶನ, ೭ರಿಂದ ನೃತ್ಯಾರ್ಪಣಂ, ರಾತ್ರಿ ೮ರಿಂದ ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ, ಪಲ್ಲಕ್ಕಿ ಉತ್ಸವ, ರಥೋತ್ಸವ, ಕಟ್ಟೆಪೂಜೆ, ರಾತ್ರಿ ೧೦.೩೦ರಿಂದ ಬಂಗಾರ್ದ ಬದ್ಕ್….!(ನಮ ಎನ್ನಿಲೆಕ್ಕ ಅತ್ತ್)-ತುಳು ನಾಟಕ
ನಿಡ್ಪಳ್ಳಿ ಶ್ರೀ ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಸ್ಥಾನದಲ್ಲಿ ಬೆಳಿಗ್ಗೆ ೯ರಿಂದ ಕಿನ್ನಿಮಾಣಿ ದೈವಗಳ ನೇಮೋತ್ಸವ, ಮಧ್ಯಾಹ್ನ ಅನ್ನಸತರ್ಪಣೆ, ಸಂಜೆ ೬ರಿಂದ ತೋರಣ ಒಪ್ಪಿಸುವುದು, ದೈವಗಳಿಗೆ ತಂಬಿಲಗಳು
ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ಸಂಜೆ ಅವಭೃತ ಸ್ನಾನ, ರಾತ್ರಿ ಯಕ್ಷಗಾನ ಬಯಲಾಟ
ಕೋಡಿಂಬಾಡಿ ಅಶ್ವತ್ಥಕಟ್ಟೆ ಧರ್ಮಶ್ರೀ ಭಜನಾ ಮಂದಿರದ ೧೮ನೇ ವರ್ಷದ ನಗರ ಭಜನೆ ಪ್ರಯುಕ್ತ ನಿಡ್ಯ, ಮರ್ದನಳಿಕೆ, ನಿಡ್ಯ ದರ್ಖಾಸುವಿನಲ್ಲಿ ಬೈಲುವಾರು ಭಜನೆ
ಮುಕ್ವೆ ರಹ್ಮಾನಿಯಾ ಜುಮಾ ಮಸೀದಿ ವಲಿಯುಲ್ಲಾಹಿ ದರ್ಗಾ ಶರೀಫ್ ಮರ್ಹೂಂ ಸಯ್ಯಿದ್ ಪಾಣಕ್ಕಾಡ್ ಪಿ.ಎಂ.ಎಸ್.ಎ ಪೂಕೋಯ ತಂಙಳ್ ನಗರದಲ್ಲಿ ಮುಕ್ವೆ ಮಖಾಂ ಉರೂಸ್, ಮುಖ್ಯ ಪ್ರಭಾಷಣ
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೯.೩೦ರಿಂದ ದರ್ಶನ ಬಲಿ, ಬಟ್ಲು ಕಾಣಿಕೆ, ಸಂಜೆ ೪.೩೦ಕ್ಕೆ ಕಡಂಬುವಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಆಗಮನ, ಸ್ವರ ತರಂಗ, (ಸುಗಮ ಸಂಗೀತ), ನೃತ್ಯಾರ್ಪಣಂ, ರಾತ್ರಿ ೯ರಿಂದ ಮಹಾರಥೋತ್ಸವ, ಬೀದಿ ಮೆರವಣಿಗೆ, ಶಯನೋತ್ಸವ, ಬಂಟನ ಬಲಿ ಸುತ್ತು-ಯಕ್ಷಗಾನ ಬಯಲಾಟ
ಉಪ್ಪಿನಂಗಡಿ ವಲಯ ಅರಣ್ಯ ಇಲಾಖಾ ಕಛೇರಿ ಬಳಿ ಬೆಳಿಗ್ಗೆ ೧೦.೩೦ರಿಂದ ಮಲೆನಾಡು ಜನಹಿತ ರಕ್ಷಣಾ ವೇದಿಕೆಯಿಂದ ಕಸ್ತೂರಿ ರಂಗನ್ ವರದಿ ಜಾರಿ ವಿರುದ್ದ ಪ್ರತಿಭಟನೆ
ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಪುತ್ತೂರು ತಾಲೂಕು ಘಟಕದಿಂದ ಬೆಳಿಗ್ಗೆ ೯.೩೦ರಿಂದ ಗಮಕ ಕಾರ್ಯಕ್ರಮ
ಹಿರೇಬಂಡಾಡಿ ಸರೋಳಿ ನಾಗದೇವರು, ನಾಗಕನ್ನಿಕೆ, ರಕ್ತೇಶ್ವರಿ, ಗುಳಿಗ, ಬೈರವ ಸಾನಿಧ್ಯದಲ್ಲಿ ಸಂಜೆ ೫ರಿಂದ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, ೬ರಿಂದ ರಾಕ್ಷೋಘ್ನ ಹೋಮ, ವಾಸ್ತು ಬಲಿ
ಬಂಟ್ವಾಳ ಬಿ.ಸಿ.ರೋಡು ಡಾ| ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ ೧೦ಕ್ಕೆ ತೋಟಗಾರಿಕೆ ಇಲಾಖೆ ಬಂಟ್ವಾಳ, ಬಂಟ್ವಾಳ ಸಂಜೀವಿನಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪೆನಿಯಿಂದ ಸಾರ್ವಜನಿಕ ಉಚಿತ ಜೇನು ತರಬೇತಿ