ಜೇಸಿಐ ಆಲಂಕಾರು 2025ನೇ ಘಟಕಾಡಳಿತ ಮಂಡಳಿಯ ಪದಗ್ರಹಣ ಸಮಾರಂಭ

0

ಆಲಂಕಾರು: ಜೇಸಿಐ ಭಾರತದ ಪ್ರತಿಷ್ಠಿತ ಜೇಸಿಐ ಆಲಂಕಾರು ಘಟಕದ 2025 ನೇ ಸಾಲಿನ ಘಟಕಾಡಳಿತ ಮಂಡಳಿಯ ಪದಗ್ರಹಣ ಸಮಾರಂಭವು ಜನವರಿ 18ರಂದು ಆಲಂಕಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷರಾಗಿ ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಗುರುರಾಜ್ ರೈ ಪದ ಸ್ವೀಕಾರ ಮಾಡಿದರು. ನಿಕಟ ಪೂರ್ವ ಅಧ್ಯಕ್ಷೆ ಮಮತ ಕಮಲಾಕ್ಷಿ ಶೆಟ್ಟಿ, ಕಾರ್ಯದರ್ಶಿಯಾಗಿ ಮಹೇಶ್ ಪಾಟಾಳಿ,ಲೇಡಿ ಜೇಸಿ ಅಧ್ಯಕ್ಷೆಯಾಗಿ ಸುನಿತಾ ಗುರುರಾಜ್ ರೈ, ಜೂನಿಯರ್ ಜೇಸಿ ಅಧ್ಯಕ್ಷರಾಗಿ ಕೃತಿ ಕೆ ಎಸ್, ಉಪಾಧ್ಯಕ್ಷರಾಗಿ ವಸಂತಿ ಕನೆಮಾರು, ಚೇತನ್ ಮೊಗ್ರಾಲ್, ರಾಧಾಕೃಷ್ಣ ಆನ, ಧನ್ಯ ಪ್ರಶಾಂತ್ ರೈ ,ನಾರಾಯಣ ನೆಕ್ಕರೆ, ಜೊತೆ ಕಾರ್ಯದರ್ಶಿಯಾಗಿ ಪುರಂದರ ಕೆ, ಕೋಶಾಧಿಕಾರಿಯಾಗಿ ದೇವಕಿ ಹಿರಿಂಜ ಹಾಗೂ ಸಂಯೋಜಕರಾಗಿ ವಿತೇಶ್, ನವೀನ್ ರೈ ,ಲತನ್ ರೈ,ಪೂರ್ಣೇಶ್ ಬಲ್ಯ, ಪ್ರೇಮ್ ಕುಮಾರ್, ಶೃತಿ ಗುರುಪ್ರಸಾದ್ ರೈ, ಪ್ರತಿಮಾ ರೈ, ಚೇತನ್ ಕುಕ್ಕೇರಿ ಹಾಗೂ ಪವನ್ ಕುಮಾರ್ ಪದ ಸ್ವೀಕಾರ ಮಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಚೇತನ್ ಆನೆಗುಂಡಿ, ಆಲಂಕಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮಾಧವ ಪೂಜಾರಿ ಕಯ್ಯಪೆ,ಜೇಸಿಐ ವಲಯ 15ರ ವಲಯ ಉಪಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ,ವಲಯ 15ರ ಮ್ಯಾನೇಜ್ಮೆಂಟ್ ವಿಭಾಗದ ಡೈರೆಕ್ಟರ್ ಅಜಿತ್ ಕುಮಾರ್ ರೈ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಭತ್ತ ಬೆಳೆಗಾರ ಕುಶಾಲಪ್ಪ ಗೌಡ ಕೇವಳ ಇವರಿಗೆ ಸೆಲ್ಯೂಟ್ ದ ಸೈಲೆಂಟ್ ಸ್ಟಾರ್ ಅವಾರ್ಡ್ ನೀಡಿ ಸನ್ಮಾನಿಸಲಾಯಿತು. ಲತನ್ ರೈ ಸನ್ಮಾನಿತರನ್ನು ಪರಿಚಯಿಸಿದರು.ಚೇತನ್ ಮೊಗ್ರಾಲ್,ಶೃತಿ ಗುರುಪ್ರಸಾದ್ ರೈ, ಗಣೇಶ್ ಕಟ್ಟಪುಣಿ ಅತಿಥಿಗಳ ಪರಿಚಯವನ್ನು ಮಾಡಿದರು. ಕಾರ್ಯದರ್ಶಿ ಮಹೇಶ್ ಪಾಟಾಳಿ ವಂದಿಸಿದರು.

LEAVE A REPLY

Please enter your comment!
Please enter your name here