ಪಾಪೆಮಜಲು: ಮಗ್ಗಿ ತಪ್ಪಿದಕ್ಕೆ ವಿದ್ಯಾರ್ಥಿಗೆ ಪೆಟ್ಟು :ಎಡ ಕೈ ಮೂಳೆಗೆ ಗಾಯ-ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ

0

ಪುತ್ತೂರು: ಮಗ್ಗಿ ಹೇಳುವಾಗ ತಪ್ಪಿದಕ್ಕೆ ವಿದ್ಯಾರ್ಥಿಗೆ ಶಿಕ್ಷಕರೋರ್ವರು ನಾಗರಬೆತ್ತದಿಂದ ಹೊಡೆದಿರುವ ಆರೋಪ ಕೇಳಿಬಂದಿದ್ದು, ಹೊಡೆತದಿಂದ ವಿದ್ಯಾರ್ಥಿಯ ಎಡ ಕೈ ಮೂಳೆಗೆ ಗಾಯವಾಗಿದ್ದು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.


ಪಾಪೆಮಜಲು ಸರಕಾರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಅತೀಶ್ ಗಾಯಗೊಂಡವರು. ಶಾಲೆಯಲ್ಲಿ ಗಣಿತ ಶಿಕ್ಷಕರ ಮುಂದೆ ಅತೀಶ್ ಮಗ್ಗಿ ಹೇಳುವಾಗ ತಪ್ಪಿದಕ್ಕೆ ಅವರು ನಾಗರಬೆತ್ತದಿಂದ ಹೊಡೆದಿದ್ದಾರೆ ಎನ್ನಲಾಗಿದೆ. ಸಂಜೆ ಅತೀಶ್ ಮನೆಯಲ್ಲಿ ತಾಯಿ ಅನಿತಾ ಮತ್ತು ಅಜ್ಜ ರವಿ ಅವರಲ್ಲಿ ಈ ವಿಚಾರ ತಿಳಿಸಿ ಕೈ ನೋವು ಆಗುತ್ತಿರುವುದಾಗಿ ಹೇಳಿದ್ದರು. ಬಳಿಕ ಅಜ್ಜ ರವಿ ಅವರು ಮೊಮ್ಮಗನನ್ನು ಸರಕಾರಿ ಅಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ. ಕೈ ಮೂಳೆಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಕೈ ಊನಗೊಂಡಿದೆ ಎಂದು ಅತೀಶ್‌ನ ಅಜ್ಜ ರವಿ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here