ಪುತ್ತೂರು:ಒಬ್ಬ ಮನುಷ್ಯನಿಗೆ ಹೇಗೆ ಮೂಲಭೂತ ಸೌಕರ್ಯಗಳು ಮುಖ್ಯವಾಗಿರುತ್ತವೆಯೋ ಹಾಗೆಯೇ ಮಾನಸಿಕ ಆರೋಗ್ಯವು ಮಹತ್ವದಾಗಿರುತ್ತದೆ. ಸಮಯವನ್ನು ಎಲ್ಲಿ,ಹೇಗೆ ಬಳಸಿಕೊಳ್ಳಬೇಕೆಂಬುದನ್ನು ತಿಳಿದುಕೊಳ್ಳುವುದರಿಂದ ಮಾನಸಿಕ ಆರೋಗ್ಯವನ್ನು ಅಭಿವೃದ್ಧಿಪಡಿಸಬಹುದು , ಹಾಗೂ ಮಾನಸಿಕ ಅಸ್ವಸ್ಥತೆಯೂ ಒತ್ತಡ ಮತ್ತು ಹವಾಮಾನ ಬದಲಾವಣೆಯಿಂದ ಉಂಟಾಗುತ್ತದೆ, ಹಾಗೆಯೇ ಮನೋವಿಜ್ಞಾನದ ಮುಖ್ಯ ಗುರಿ ಹಾನಿಯನ್ನು ಸರಿಪಡಿಸುವುದಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯ ಮನೋವಿಜ್ಞಾನ ವಿಭಾಗ,ಡಾ. ರೋಹಿಣಿ ಶಿವಾನಂದ ಹೇಳಿದರು.
ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ( ಸ್ವಾಯತ್ತ ) ಮನೋವಿಜ್ಞಾನ ಮತ್ತು ಐಕ್ಯೂಎಸಿ ಜಂಟಿ ಆಶ್ರಯದಲ್ಲಿ ನಡೆದ ಉತ್ತಮ ನಾಳೆಗಳಿಗಾಗಿ ಮನೋವಿಜ್ಞಾನ: ಮಾನಸಿಕ ಆರೋಗ್ಯ ಮತ್ತು ಕ್ಷೇತ್ರದಲ್ಲಿ ವೃತ್ತಿಜೀವನದ ಅಗತ್ಯವನ್ನು ಅನ್ವೇಷಿಸುವುದು ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ವಿಷ್ಣುಗಣಪತಿ ಭಟ್, ಪರೀಕ್ಷಾಂಗ ಕುಲ ಸಚಿವ ಹಾಗೂ ವಿಶ್ರಾಂತ ಅಧ್ಯಾಪಕ ಶ್ರೀಧರ್ ಹೆಚ್. ಜಿ, ಐಕ್ಯೂಎಸಿ ಸಂಯೋಜಕ ಹಾಗೂ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಶಿವಪ್ರಸಾದ್ ಕೆ.ಎಸ್, ಮನೋವಿಜ್ಞಾನ ವಿಭಾಗದ ಉಪನ್ಯಾಸಕಿ ಅನುಷಾ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿ ಜೀವಿತ ಸ್ವಾಗತಿಸಿ, ಸವಿತಾ ದ್ವಿತೀಯ ಬಿಎ ವಂದಿಸಿ, ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ತೃಪ್ತಿ ನಿರ್ವಹಿಸಿದರು.