ನೆಲ್ಯಾಡಿ: ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ಪ್ರಸ್ತುತ ಪಡಿಸುವ 71ನೇ ವರ್ಷದ ಕಲಾಸೇವೆಯ ’ಕಾಂಚನೋತ್ಸವ-2025’ ಜ.25 ಮತ್ತು 26ರಂದು ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾ ಶಾಲೆಯಲ್ಲಿ ನಡೆಯಲಿದೆ.
ಜ.25ರಂದು ಬೆಳಿಗ್ಗೆ 9.30ಕ್ಕೆ ಗಣಹೋಮ, 10ರಿಂದ ಅಭಿಷೇಕ್ ಎನ್.ಎಸ್. ಮತ್ತು ದಿ ಕರ್ನಾಟಿಕ್ ಅಡ್ಡ ಇವರ ತಂಡದಿಂದ ನಾಮ ಸಂಕೀರ್ತನೆ, ಬೆಳಿಗ್ಗೆ ೧೦.೩೦ರಿಂದ ಅತಿಥಿ ಕಲಾವಿದರು ಮತ್ತು ವಿದ್ಯಾರ್ಥಿಗಳಿಂದ ಸಂಗೀತ ಸೇವೆ ನಡೆಯಲಿದೆ. ಸಂಜೆ ೬ ಗಂಟೆಯಿಂದ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರುಗಳಿಂದ ವಿಶೇಷ ಅಮೋಘ ಕರ್ನಾಟಕ ಸಂಗೀತ ಕಚೇರಿ ನಡೆಯಲಿದ್ದು ಗಾಯನದಲ್ಲಿ ವಿ.ಕೆ.ಎಸ್.ವಿಷ್ಣುದೇವ್ ನಂಬೂತಿರಿ, ಪಿಟೀಲಿನಲ್ಲಿ ವಿ.ಚಾರುಲತಾ ರಾಮಾನುಜಂ, ಮೃದಂಗದಲ್ಲಿ ವಿ.ಕೆ.ಯು.ಜಯಚಂದ್ರ ರಾವ್, ಖಂಜಿರದಲ್ಲಿ ವಿ.ಉಡುಪಿ ಶ್ರೀಕಾಂತ್‌ರವರು ಕಚೇರಿ ನಡೆಸಿಕೊಡಲಿದ್ದಾರೆ.
ಜ.೨೬ ರಂದು ಬೆಳಿಗ್ಗೆ ೮.೩೦ರಿಂದ ಕಾಂಚನ ಮನೆಯಿಂದ ಸಂಗೀತ ಶಾಲೆಯವರೆಗೆ ಸಂಗೀತ ಸಂತ ಶ್ರೀ ತ್ಯಾಗರಾಜರ ಉತ್ಸವ ಸಂಪ್ರದಾಯ ಕೃತಿಗಳು ಹಾಗೂ ದಿವ್ಯನಾಮ ಸಂಕೀರ್ತನ ಕೀರ್ತನೆಗಳ ಗಾಯನ-ವಾದನಗಳೊಂದಿಗೆ ಸಂಗೀತ ನಡಿಗೆ ಉಂಛವೃತ್ತಿ ನಡೆಯಲಿದೆ. ಬೆಳಿಗ್ಗೆ ೧೦ರಿಂದ ಪಿಳ್ಳಾರಿ ಗೀತೆಗಳು ಮತ್ತು ಪಂಚರತ್ನ ಕೃತಿಗಳ ಗೋಷ್ಠಿ ಗಾಯನ, ೧೧.೩೦ರಿಂದ ಅತಿಥಿ ಕಲಾವಿದರು ಮತ್ತು ವಿದ್ಯಾರ್ಥಿಗಳಿಂದ ಸಂಗೀತ ಸೇವೆ ನಡೆಯಲಿದೆ.
ಸಂಜೆ ೪ ಗಂಟೆಯಿಂದ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರುಗಳಿಂದ ವಿಶೇಷ ಅಮೋಘ ಕರ್ನಾಟಕ ಸಂಗೀತ ಕಚೇರಿ ನಡೆಯಲಿದ್ದು ವಿ.ಡಾ.ಜಿ.ಬೇಬಿ ಶ್ರೀರಾಮ್ (ಗಾಯನ), ವಿ.ವಾಲ್ಘಾಟ್ ಕೆ.ಎಲ್.ಶ್ರೀರಾಮ್(ಕೊಳಲು), ವಿ.ಅನಿರುದ್ಧ ಎಸ್.ಭಟ್(ಮೃದಂಗ) ಹಾಗೂ ವಿ.ದಾಶರಥಿ ಕಶ್ಯಪ್(ಮೃದಂಗ)ಅವರು ಕಚೇರಿ ನಡೆಸಿಕೊಡಲಿದ್ದಾರೆ ಎಂದು ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.