ಪುತ್ತೂರು: ಕಳೆದ ಹಲವು ವರ್ಷಗಳಿಂದ ಕಲ್ಲೇಗ ಕಲ್ಕುಡ ದೈವಸ್ಥಾನದ ಬಳಿಯಿರುವ ಅಶ್ವಿನಿ ಕಾಂಪ್ಲೆಕ್ಸ್’ನಲ್ಲಿ ವ್ಯವಹರಿಸುತ್ತಿದ್ದ ಹೋಟೆಲ್ ‘ಶ್ರೀಕೃಷ್ಣ ಭವನ’ ಶುದ್ದ ಸಸ್ಯಹಾರಿ ಫಲಾಹಾರ ಮಂದಿರವು ಜ.24ರಂದು ಕಲ್ಲೇಗ ದೈವಸ್ಥಾನದ ಮುಂಭಾದಲ್ಲಿರುವ ‘ಪಟ್ಲ ಕಾಂಪ್ಲೆಕ್ಸ್’ಗೆ ಸ್ಥಳಾಂತರಗೊಂಡು ಶುಭಾರಂಭಗೊಳ್ಳಲಿದೆ.
ಹೋಟೆಲ್ ಉದ್ಯಮದಲ್ಲಿ ಸುಮಾರು 32 ವರ್ಷಗಳ ಇತಿಹಾಸ ಹೊಂದಿರುವ ಶುದ್ದ ಸಸ್ಯಹಾರಿ ಹೋಟೆಲ್ ಶ್ರೀಕೃಷ್ಣ ಭವನ ಪ್ರಾರಂಭದಲ್ಲಿ ನೆಹರುನಗರ ಮಾಸ್ಟರ್ ಪ್ಲಾನರಿಯವರ ಕಟ್ಟಡದಲ್ಲಿ ವ್ಯವಹರಿಸುತ್ತಿದ್ದ ಹೋಟೆಲ್ ಜನರ ಹಸಿವು ನೀಗಿಸುವಲ್ಲಿ ಹೆಸರು ಪಡೆದುಕೊಂಡಿತ್ತು. ತನ್ನ ವ್ಯವಹಾರವನ್ನು ವಿಸ್ತರಿಸುತ್ತಾ ಗ್ರಾಹಕರಿಗೆ ಇನ್ನಷ್ಟು ಅನುಕೂಲವಾಗುವ ನಿಟ್ಟಿನಲ್ಲಿ 2006ರಲ್ಲಿ ಕಲ್ಲೇಗ ದೈವಸ್ಥಾನದ ಬಳಿಯಿರುವ ಅಶ್ವಿನಿ ಕಾಂಪ್ಲೆಕ್ಸ್ ಸ್ಥಳಾಂತರಗೊಂಡು ತನ್ನದೇ ಶೈಲಿಯ ವಿಶಿಷ್ಠ ಖಾದ್ಯಗಳ ಮೂಲಕ ಮನೆ ಮಾತಾಗಿ ಖ್ಯಾತಿಯನ್ನು ಪಡೆದುಕೊಂಡು ಇಂದು ನೆಹರುನಗರದಲ್ಲಿ ಹಲವರ ಹಸಿವು ತಣಿಸುವ ಆಹಾರ ಮಳಿಗೆಯಾಗಿ ಪ್ರಸಿದ್ಧಿಯನ್ನು ಪಡೆದಿದೆ.
ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿರುವ ಹೋಟೆಲ್ ಶ್ರೀಕೃಷ್ಣ ಭವನ ಲಕ್ಷ್ಮೀ ಪೂಜೆಯೊಂದಿಗೆ ಶುಭಾರಂಭಗೊಂಡು ಮತ್ತೆ ಬಿಸಿ ಬಿಸಿಯಾದ, ಶುಚಿ, ರುಚಿಯಾದ ವಿಭಿನ್ನ ಬಗೆಯ ಖಾದ್ಯಗಳ ತಯಾರಿಕೆಯೊಂದಿಗೆ ಗ್ರಾಹಕರನ್ನು ತನ್ನತ್ತ ಸೆಳೆಯಲು ಶ್ರೀಕೃಷ್ಣ ಭವನ ಸಿದ್ಧಗೊಂಡಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.