ಪುತ್ತೂರು: ಡಾ.ಗಂಗೂಬಾಯಿ ಹಾನಗಲ್ ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ನಡೆಸಿದ ಜೂನಿಯರ್ ಹಾಗೂ ಸೀನಿಯರ್ ವಿಭಾಗದ ಭರತನಾಟ್ಯ ಪರೀಕ್ಷೆಯಲ್ಲಿ ವೀರಮಂಗಲ ಶ್ರೀಕೃಷ್ಣ ಕಲಾ ಕೇಂದ್ರ ಭಕ್ತಕೋಡಿ ಶಾಖೆಯ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.100 ಫಲಿತಾಂಶ ಪಡೆದುಕೊಂಡಿದೆ.
ಸೀನಿಯರ್ ವಿಭಾಗದಲ್ಲಿ ವೀರಮಂಗಲ ರಘುಚಂದ್ರ ಪೂಜಾರಿ ಮತ್ತು ಯಮುನಾ ದಂಪತಿ ಪುತ್ರಿ ಪ್ರಿಯಾಶ್ರೀ ಎಚ್., ಪುರುಷರಕಟ್ಟೆ ನೀಲಯ್ಯ ಆಚಾರ್ಯ ಮತ್ತು ಮೋಹನಾಂಗಿ ದಂಪತಿ ಪುತ್ರಿ ಸ್ವಾತಿ ಎಸ್., ಸವಣೂರು ಪೂವಪ್ಪ ನಾಕ್ ಮತ್ತು ಗಾಯಂತ್ರಿ ದಂಪತಿ ಪುತ್ರಿ ನವ್ಯಶ್ರೀ ಬಿ., ಸವಣೂರು ಕೊಂಬಕೆರೆ ವೆಂಕಪ್ಪ ನಾಕ್ ಮತ್ತು ಸುಶೀಲ ದಂಪತಿ ಪುತ್ರಿ ದಿವ್ಯ ಕೆ., ಭಕ್ತಕೋಡಿ ಅಜಿತ್ ಪ್ರಸಾದ್ ಮತ್ತು ಬೇಬಿ ದಂಪತಿ ಪುತ್ರಿ ಮಧುಶ್ರೀ ಬಿ.ಎ., ಜೂನಿಯರ್ ವಿಭಾಗದಲ್ಲಿ ಭಕ್ತಕೋಡಿ ಕೃಷ್ಣಪ್ಪ ಗೌಡ ಮತ್ತು ಪುಷ್ಪರವರ ಪತ್ರಿ ಸಿಂಚಿತಾ, ಪುರುಷರಕಟ್ಟೆ ಸಂತೋಷ್ ಮತ್ತು ನಮಿತಾ ದಂಪತಿ ಪುತ್ರಿ ಚಿಂತನಾ, ವೀರಮಂಗಲ ಆನಾಜೆ ಹರೀಶ್ ಆಚಾರ್ಯ ಮತ್ತು ಜಯಂತಿಯವರ ಪುತ್ರಿ ಸಿಂಚನಾ, ಸರ್ವೆ ರೆಂಜಲಾಡಿಯ ವಿನಯ ರೈ ಮತ್ತು ಶಿಕ್ಷಕಿ ಶೃತಿಯವರ ಪುತ್ರಿ ಸುವಿಜ್ಞಾ, ಸರ್ವೆ ಲೋಕೇಶ್ ಗೌಡ ಮತ್ತು ಕವಿತಾಯಾರವರ ಪುತ್ರಿ ಕೃಪಾ ಎಲ್.ಎಸ್., ಕೆದ್ಕಾರು ಗಿರೀಶ್ ಆಚಾರ್ಯ ಮತ್ತು ಪುಷ್ಪಾರವರ ಪುತ್ರಿ ಎ.ಜೆ ಕೃತಿಕಾ, ಸವಣೂರು ದಯಾನಂದ ಗೌಡ ಮತ್ತು ವೇದಾವತಿಯವರ ಪುತ್ರಿ ಕೃಪಾಲಿ ಎಸ್.ಡಿ., ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.
ಎಲ್ಲಾ ವಿದ್ಯಾರ್ಥಿಗಳು ಶ್ರೀಕೃಷ್ಣ ಕಲಾಕೇಂದ್ರದ ನೃತ್ಯಗುರು ವಿದ್ವಾನ್ ಗೋಪಾಲಕೃಷ್ಣ ವೀರಮಂಗಲರವರಲ್ಲಿ ತರಬೇತಿ ಪಡೆದಿರುತ್ತಾರೆ.