ಬೆಟ್ಟಂಪಾಡಿ: ಶಿವಾಜಿ ಫ್ರೆಂಡ್ಸ್ ಬೆಂದ್ರ್ ತೀರ್ಥ ಇರ್ದೆ ಸಂಘಟನೆಯು ಕಳೆದ 8 ವರ್ಷದ ಆರಂಭದಿಂದ ಇರ್ದೆ ಪರಿಸರದ ಹಲವಾರು ಯುವಕರನ್ನು ಒಗ್ಗೂಡಿಸಿ ಊರಿನ ಧಾರ್ಮಿಕ, ಸಾಮಾಜಿಕ ಹತ್ತು ಹಲವು ವಿಚಾರಗಳನ್ನು ಮುಂದಿಟ್ಟು ಧರ್ಮ ರಕ್ಷಣೆಯ ಜೊತೆಗೆ ಸಾಮಾಜಿಕವಾಗಿಯೂ ಗುರುತಿಸುತ್ತಾ-ಸಂಘಟನೆಯು ಬೆಳೆದು ಬಂದಿದೆ. ಸಂಘಟನೆಯ ಹೊಸ ಕಾರ್ಯಚಟುವಟಿಕೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕಾ ಇಲಾಖಾ ನೌಕರರ ವಿವಿಧೋದ್ಧೇಶ ಸಹಕಾರ ಸಂಘ ನಿ. ದಲ್ಲಿ ದ. 18 ರಂದು ಅಧಿಕೃತವಾಗಿ ನೋಂದಾಯಿಸಲ್ಪಟ್ಟಿದೆ. ಸಂಘವು ಮುಂದಕ್ಕೆ ʻಶಿವಾಜಿ ಯುವಸೇನೆ ಬೆಂದ್ರ್ ತೀರ್ಥ-ಇರ್ದೆ ಸೇವಾ ಟ್ರಸ್ಟ್ʼ ಹೆಸರಿನಲ್ಲಿ ನಾಮಕರಣಗೊಂಡಿದೆ.
ಸಂಘದ ಗೌರವಾಧ್ಯಕ್ಷರಾಗಿ ಚಂದ್ರಹಾಸ ಮುರೂರು, ಅಧ್ಯಕ್ಷರಾಗಿ ಧನ್ಯರಾಜ್ ಬಾಳೆಹಿತ್ಳು,ಉಪಾಧ್ಯಕ್ಷರಾಗಿ ಗಣೇಶ್ ಬೀಡು, ಪ್ರಧಾನ ಕಾರ್ಯದರ್ಶಿಗಳಾಗಿ ಮನೋಹರ ಬಾಳೆಹಿತ್ಳು, ಸತೀಶ್ ಆಚಾರ್ಯ ಪೈಂತಿಮೊಗೇರ್, ಕಾರ್ಯದರ್ಶಿಗಳಾಗಿ ಹರೀಶ್ ಕೆ. ಇರ್ದೆ, ಬಾಲಕೃಷ್ಣ ದೂಮಡ್ಕ, ಪ್ರಮುಖ ಜೊತೆ ಕಾರ್ಯದರ್ಶಿಗಳಾಗಿ ಹರೀಶ್ ಬಾಳೆಗುಳಿ, ವೀಕ್ಷಿತ್ ಅಗರ್ ಮೈಲ್, ಖಜಾಂಚಿಗಳಾಗಿ ಸುನಿಲ್ ಬಾಲ್ಯೊಟ್ಟು, ಪುರುಷೋತ್ತಮ ಇರ್ದೆ, ಶ್ರೀ ನಿಧಿ ಕೈಕಾರ, ಮನ್ವಿತ್ ಬಾಲ್ಯೊಟ್ಟು, ಬರಹ ಮತ್ತು ಎಡಿಟಿಂಗ್ ಜವಾಬ್ದಾರಿ ರಿತೇಶ್ ಪಾಪನಡ್ಕ , ಅನಿಲ್ ಇರ್ದೆ, ಧನ್ಯರಾಜ್ ಬಾಳೆಹಿತ್ಳು, ಸಾಮಾಜಿಕ ಮತ್ತು ಮಾಧ್ಯಮ ಪ್ರಚಾರ ಜವಾಬ್ದಾರಿ ಅಶ್ವಥ್ ಶೆಟ್ಟಿ ದೂಮಡ್ಕ, ಸಂಘ ಶಿಕ್ಷಕ ಶಶಿಧರ್ ಮೇರ್ವೆ, ವಿಶೇಷ ಗೌರವ ಸಲಹೆಗಾರರು ಚಂದ್ರಶೇಖರ ಮೊದೆಲ್ಕಾಡಿ, ಮಹೇಶ್ ಭಟ್ ಸುಧನಡ್ಕ, ಪುಷ್ಪರಾಜ್ ಶೆಟ್ಟಿ ಬೈರಮಜಲು, ರವಿಪ್ರಕಾಶ್ ಬಾಳೆಹಿತ್ಳು, ಪುಷ್ಪರಾಜ್ ಮೇರ್ವೆ ಹಾಗೂ ಅರುಣ್ ಕುಮಾರ್ ಮೇರ್ವೆ ಜವಾಬ್ದಾರಿಯಲ್ಲಿದ್ದಾರೆ.