ಅಧ್ಯಕ್ಷರಾಗಿ ಅಮೀನ್ ಅಳಕೆಮಜಲು, ಉಪಾಧ್ಯಕ್ಷರಾಗಿ ಮುಝಮ್ಮಿಲ್ ಕೊರಿಂಗಿಲ, ಪ್ರ.ಕಾರ್ಯದರ್ಶಿ ಸಿನಾನ್
ಪುತ್ತೂರು: ಸುಮಾರು ಐದು ವರ್ಷಗಳಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅಲ್ ಇಕ್ವಾನ್ ಚಾರಿಟಿ ಫೌಂಡೇಶನ್ ಇದರ 2025-26 ನೇ ಸಾಲಿನ ನೂತನ ನೂತನ ಅಧ್ಯಕ್ಷರಾಗಿ ಅಮೀನ್ ಅಳಕೆಮಜಲು, ಉಪಾಧ್ಯಕ್ಷರಾಗಿ ಮುಝಮ್ಮಿಲ್ ಕೊರಿಂಗಿಲ, ಪ್ರಧಾನ ಕಾರ್ಯದರ್ಶಿಯಾಗಿ ಸಿನಾನ್ ನರಿಮೊಗರು, ಕೋಶಾಧಿಕಾರಿಯಾಗಿ ಮುಸ್ತಫಾ ಕೊಡಿಪ್ಪಾಡಿ ಜೊತೆ ಕಾರ್ಯದರ್ಶಿಯಾಗಿ ಖಾದರ್ ಫಾಝಿಲ್ ಬನ್ನೂರು ಹಾಗೂಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಸಿಫ್ ಕಲ್ಲರ್ಪೆ, ಫಾಹಿಝ್ ಬಪ್ಪಳಿಗೆ, ಅರ್ಝಾನ್ ಪರ್ಲಡ್ಕ, ಹಾರಿಸ್ ಸಂಟ್ಯಾರ್, ಸಮ್ಮಾಸ್ ಮಿತ್ತೂರು, ಶಾಹಿದ್ ವಿಟ್ಲ, ಸಹಲ್ ಉಪ್ಪಿನಂಗಡಿ, ರಮೀಝ್ ಸಂಪ್ಯ, ಬುಖಾರಿ ಕೊಡಿಪ್ಪಾಡಿ, ಯಾಸೀನ್ ಪಾಟ್ರಕೋಡಿ, ಆರಿಫ್ ಬಡಕ್ಕೋಡಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿದ್ದ ಸವಾದ್ ಕಲ್ಲರ್ಪೆ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.