30 ದಿನಗಳ ಕರಸೇವೆ ಪೂರ್ಣ
ಪುತ್ತೂರು: ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆ ಸಂಪನ್ನಗೊಂಡಿದ್ದು ಈ ಹಿನ್ನೆಲೆಯಲ್ಲಿ ರಥಬೀದಿಯ ಇಕ್ಕೆಲಗಳಲ್ಲಿ ಅಳವಡಿಸಿದ ಬಂಟಿಂಗ್ಸ್,ಕಂಬಗಳ ತೆರವು ಕಾರ್ಯವೂ ಶ್ರೀ ಉಳ್ಳಾಲ್ತಿ ಭಕ್ತವೃಂದ ಮುಕ್ಕೂರು ವತಿಯಿಂದ ಜ.23 ರಂದು ರಾತ್ರಿ ಕರಸೇವೆ ಮೂಲಕ ನಡೆಸಿದರು.
ಕಳೆದ 30 ದಿನಗಳಿಂದ ಕ್ಷೇತ್ರದಲ್ಲಿ ಮುಕ್ಕೂರು ಶ್ರೀ ಉಳ್ಳಾಲ್ತಿ ಭಕ್ತವೃಂದದ ವತಿಯಿಂದ ನಿರಂತರ ಕರಸೇವೆ ಹಮ್ಮಿಕೊಂಡಿದ್ದು, ಸರಿಸುಮಾರು 40 ಮಂದಿ ಭಾಗವಹಿಸಿದರು.
ಕ್ಷೇತ್ರದಲ್ಲಿ ಕರಸೇವೆ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ದೇವಾಲಯದ ಮ್ಯಾನೇಜರ್ ವಸಂತ ಆಚಾರ್ಯ ಪೆರುವಾಜೆ ಹಾಗೂ ತಂಡ ಸಹಕರಿಸಿದರು.