ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿಗೆ ರಾಜೇಶ್ ಕೆ.ಮಯೂರ ಆಯ್ಕೆ

0

ಪುತ್ತೂರು: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಹಾಗೂ ಬೆಳಗಾವಿ ಜಿಲ್ಲಾ ಘಟಕ ಸಂಯುಕ್ತ ಆಶ್ರಯದಲ್ಲಿ ಜ.27ರಂದು ಇಟ್ಟಪ್ಪ ದೇವರ ರಂಗವೇದಿಕೆ ಹಳ್ಳೂರ ಮೂಡಲಗಿ ತಾಲೂಕು ಬೆಳಗಾವಿ ಜಿಲ್ಲೆ, ಇಲ್ಲಿ ನಡೆಯುವ ರಾಜ್ಯಮಟ್ಟದ ಜಾನಪದ ಯುವ ಕಲಾ ಸಮ್ಮೇಳನ ಹಾಗೂ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಈ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಅರಿಯಡ್ಕ ಗ್ರಾಮದ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ಸಂಘಟನಾ ಕಾರ್ಯದರ್ಶಿ ತಾಲೂಕು ಯುವ ಪ್ರಶಸ್ತಿ ಪುರಸ್ಕೃತ ರಾಜೇಶ್ ಮಯೂರ ಗೋಳ್ತಿಲರವರು ಆಯ್ಕೆಯಾಗಿದ್ದಾರೆ.

ಅರಿಯಡ್ಕ ಗ್ರಾಮದ ಗೋಳ್ತಿಲ ನಿವಾಸಿಯಾದ ರಾಜೇಶ್ ಕೆ ಮಯೂರರವರು ದಿ. ಕೊರಗಪ್ಪ ರೈ ಮತ್ತು ಶ್ಯಾಮಲರವರ ಪುತ್ರರಾಗಿದ್ದಾರೆ. 10 ನೇ ತರಗತಿ ವಿದ್ಯಾಭ್ಯಾಸ ಮಾಡಿರುವ ಇವರು ಪ್ರಾರಂಭದ ದಿನದಲ್ಲಿ ಕೂಲಿ ಕೆಲಸ ಬಳಿಕ ಡ್ರಾಯಿಂಗ್ ನಲ್ಲಿ ಒಲವು ಇದ್ದ ಕಾರಣ ಬ್ಯಾನ‌ರ್ ಬೋರ್ಡ್ ಬರೆಯುವ ಮೂಲಕ ಚಿರಪರಿಚಿತರಾಗಿದ್ದರು. ಪತ್ನಿ ಜಯಲಕ್ಷ್ಮಿ ಹಾಗೂ ಓರ್ವ ಪುತ್ರಿ ಮತ್ತು ಪುತ್ರನನ್ನು ಹೊಂದಿದ್ದಾರೆ. ತನ್ನ ದೇಹವನ್ನು ಮರಣದ ನಂತರ ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇಲ್ಲಿಗೆ ದಾನ ಮಾಡುವ ವಾಗ್ದಾನ ಮಾಡಿದ್ದಾರೆ. ಪತ್ನಿ ಜಯಲಕ್ಷ್ಮಿಯವರು ತನ್ನ ಕಣ್ಣುಗಳನ್ನು ದಾನ ಮಾಡುವ ವಾಗ್ದಾನ ಮಾಡಿರುತ್ತಾರೆ. ಬಡ ಮಕ್ಕಳಿಗೆ ಪ್ರತಿ ವರ್ಷ ಪುಸ್ತಕ ವಿತರಣೆ, ಧನ ಸಹಾಯ, ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಯುವ ಪ್ರಶಸ್ತಿ ಮತ್ತು ಪ್ರೋತ್ಸಾಹ ಧನ ಕೊಟ್ಟು ಗೌರವಿಸುವ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆಗೆ ಉತ್ತೇಜನ ನೀಡುವ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಧಾರ್ಮಿಕ, ರಾಜಕೀಯ ಅಲ್ಲದೆ ಸಾಮಾಜಿಕ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.

ಸುಮಾರು 50 ಸದಸ್ಯರನ್ನೊಳಗೊಂಡು ಶ್ರೀ ವಿಷ್ಣು ಯುವ ಶಕ್ತಿ ಬಳಗ ಮಚ್ಚಾರಡ್ಕ ಸಂಘಟನೆ ಶ್ರಮ..ಸೇವೆ.ಸಹಾಯ ಎಂಬ ಧೈಯ ವಾಕ್ಯದೊಂದಿಗೆ ಸ್ಥಾಪಕಾಧ್ಯಕ್ಷರಾಗಿ ರಾಜೇಶ್ ಕೆ. ಮಯೂರ ಇವರ ನೇತೃತ್ವದಲ್ಲಿ ಆರಂಭವಾಯಿತು.

ರಾಜೇಶ್ ಮಯೂರ ಅವರಿಗೆ ಈಗಾಗಲೇ ತಾಲೂಕು ಯುವ ಪ್ರಶಸ್ತಿ, ಜಿಲ್ಲಾ ಯುವಪ್ರಶಸ್ತಿ ದೊರಕಿದ್ದು,ಇದೀಗ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here