ಎ.13: ಕಟಪಾಡಿಯಲ್ಲಿ ಮೊದಲ ಆವೃತ್ತಿಯ ತುಳು ಸಮಾವೇಶ “ತುಳುನಾಡ್ ಕಾನ್ಕ್ಲೇವ್ – 2025”

0

ಪುತ್ತೂರು: ತುಳು ಭಾಷೆಯ ಉಳಿವು-ಅಳಿವು, ಮುಂದಿನ ಪೀಳಿಗೆಗೆ ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಚಯ ಪಸರಬೇಕೆಂಬ ಉದ್ದೇಶದಿಂದ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ ಆಯೋಜಿಸುತ್ತಿರುವ “ತುಳುನಾಡ್ ಕಾನ್ಕ್ಲೇವ್ -2025″ರ ಮೊದಲ ಸಮಾವೇಶ ಕಟಪಾಡಿ ವಿಶ್ವನಾಥ ಕ್ಷೇತ್ರದ ಶ್ರೀ ನಾರಾಯಣಗುರು ಸಭಾಗೃಹದಲ್ಲಿ ಎಪ್ರೀಲ್ 13ರಂದು ನಡೆಯಲಿದೆ.

ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ನಡೆಯಲಿರುವ ಈ ಸಮಾವೇಶದಲ್ಲಿ ತುಳುನಾಡಿನ ಕಾಸರಗೋಡಿನಿಂದ ಉಡುಪಿಯವರೆಗೆನ ಅನೇಕ ವಿದ್ವಾಂಸರು ತುಳು ಭಾಷೆ, ಸಂಸ್ಕೃತಿ, ಜನಪದ, ಹೋರಾಟ, ಸಾಹಿತ್ಯ ಮತ್ತು ಲಿಪಿಯ ಬಗೆಗೆ ತಮ್ಮ ವಿಚಾರವನ್ನು ಮಂಡಿಸಲಿದ್ದಾರೆ. ತುಳುವಿನ ಸಾಹಿತ್ಯಕ್ಕೆ ಸತತ ಕೊಡುಗೆ ನೀಡುತ್ತಾ ಕಳೆದ ವರ್ಷ 6 ತುಳು ಪುಸ್ತಕಗಳನ್ನು ತುಳು ಲಿಪಿಯಲ್ಲಿ ಬಿಡುಗಡೆ ಮಾಡಿರುವ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ ಸಂಸ್ಥೆ, ಈ ಬಾರಿ ಸಮಾವೇಶದಲ್ಲಿ 5 ಹೊಸ ತುಳು ಪುಸ್ತಕಗಳನ್ನು ಬಿಡುಗಡೆ ಮಾಡಲಿದೆ.

ಫ್ರಹ್ಲಾದ್ ಪಿ. ತಂತ್ರಿಯವರು ಅಭಿವೃದ್ದಿ ಪಡಿಸಿರುವ ಯುನಿಕೋಡ್ ಸಹ್ಯ ತುಳುವಿನ ಆಸ್ಕಿ ಫಾಂಟ್ “ಮಲ್ಲಿಗೆ” ಹಾಗೆಯೇ ತುಳು ಯುನಿಕೋಡ್ ಕೀಬೋರ್ಡ್ ಲೇಔಟ್ ಕೂಡಾ ಈ ಸಮಾವೇಶದಲ್ಲಿ ಬಿಡುಗಡೆಗೊಳ್ಳಲಿದೆ. ತುಳು ಪುಸ್ತಕಮೇಳ ಮತ್ತು ಸಾಂಸ್ಕೃತಿ ಕಾರ್ಯಕ್ರಮಗಳ ಆಯೋಜನೆ ನಡೆಯಲಿದೆ.

ಈ ಸಮಾವೇಶದಲ್ಲಿ ರಾಜಕೀಯ,ಸಾಂಸ್ಕೃತಿಕ ಮತ್ತು ಭಾಷಾ ಹೋರಾಟಗಾರರನ್ನು ಒಂದೇ ವೇದಿಕೆಯಲ್ಲಿ ಕೂರಿಸಿ ವಿಚಾರ ವಿನಮಯ ಘೋಷ್ಠಿ ನಡೆಸಿ ರಾಜಕೀಯ ಮತ್ತು ಸಂಘಟನಾ ನೆಲೆಯಲ್ಲಿ ತುಳುವಿನ ಅಸ್ಮಿತೆಯನ್ನು ಕಾಯ್ದುಕೊಳ್ಳಲು ಕಾರ್ಯರೂಪ ಗೊಳಿಸುವ ಕಾರ್ಯಕ್ರಮ ನಡೆಯುವುದು ಎಂದು ಆಯೋಜಕರು ತಿಳಿಸಿದರು. ತುಳು ಭಾಷೆ ಮತ್ತು ಸಂಸ್ಕೃತಿಗೆ ಅಗಣಿತ ಸೇವೆ ಮಾಡಿಕುವ ಸಾಧಕರಿಗೆ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ ನೀಡುವ ವಾರ್ಷಿಕ ಜೀವಮಾನದ ಸಾಧನಾ ಪುರಸ್ಕಾರ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ : ಸುಕೇಶ್ ಪುತ್ತೂರು – 9632588459 ನಿಶ್ಚಿತ್ ರಾಮಕುಂಜ – 8722229750 ಸಂಪರ್ಕಿಸುವಂತೆ ಆಯೋಜಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here