ಕಾಣಿಯೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಂಡಾಡಿಕೊಪ್ಪದಲ್ಲಿ 76 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಹರೀಶ್ ಏಂತಡ್ಕ ಧ್ವಜಾರೋಹಣ ನೆರವೇರಿಸಿದರು.
ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಪ್ರೇಮಾವತಿ ಕೊಂಡಾಡಿಕೊಪ್ಪ ರತ್ನಾವತಿ ಹಿರಿಯ ವಿದ್ಯಾರ್ಥಿಗಳಾದ ವೀಕ್ಷ ಶಿವನ್ ಕೀರ್ತನ್ ಅಂಕಿತ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಗುರು ಜಯಂತ್ ವೈ ಸ್ವಾಗತಿಸಿ, ಸಹಶಿಕ್ಷಕಿ ಸೌಮ್ಯ ವಂದಿಸಿದರು. ಸಹಶಿಕ್ಷಕಿ ದಿವ್ಯಾ ವಿ ನಿರೂಪಿಸಿದರು.