ನಮ್ಮೂರು ನಮ್ಮವರು ಮೈಂದಡ್ಕ ಸಂಘಟನೆಯಿಂದ ಗಣರಾಜ್ಯೋತ್ಸವ ಆಚರಣೆ

0

ಪುತ್ತೂರು: ನಮ್ಮೂರು ನಮ್ಮವರು ಮೈಂದಡ್ಕ ಸಂಘಟನೆಯ ವತಿಯಿಂದ ಮೈಂದಡ್ಕ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.

ನಮ್ಮೂರು ನಮ್ಮವರು ಸಂಘಟನೆಯ ಹಿರಿಯ ಸಲಹೆಗಾರರಾದ ರಾಜೀವ ರೈ ಅಲಿಮಾರ ಧ್ವಜಾರೋಹಣ ನೆರವೇರಿಸಿದರು. ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್ ರೈ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಅಧ್ಯಕ್ಷ ಪುರುಷೋತ್ತಮ ನಾಯ್ಕ, ಪದಾಧಿಕಾರಿಗಳು, ಸದಸ್ಯರು, ಊರಿನ ನಾಗರಿಕರು, ಪುಟಾಣಿಗಳು ಉಪಸ್ಥಿತರಿದ್ದರು.

ಧ್ವಜಾರೋಹಣದ ನಂತರ ‘ನಮ್ಮ ಸಂಸ್ಕೃತಿ ಸ್ವಚ್ಛ ಸಂಸ್ಕೃತಿ” ಎಂಬ ಧ್ಯೇಯ ವಾಕ್ಯದೊಂದಿಗೆ ಗ್ರಾಮ ಪಂಚಾಯತ್ ಸಹಭಾಗಿತ್ವದಲ್ಲಿ ಮೈಂದಡ್ಕ ಮೈದಾನದಿಂದ ಆದರ್ಶ ನಗರದ ವರೆಗಿನ ರಸ್ತೆ ಬದಿಯ ಕಸವನ್ನು ಸಂಘಟನೆಯ ವತಿಯಿಂದ ತೆರವು ಗೊಳಿಸಲಾಯಿತು.

LEAVE A REPLY

Please enter your comment!
Please enter your name here