ಪುತ್ತೂರು : ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಜ. 26 ರಂದು ಆಚರಿಸಲಾಯಿತು. ದ್ವಜಾರೋಹಣವನ್ನು ಎಸ್ ಡಿ ಎಂ ಸಿ ಅಧ್ಯಕ್ಷ ರವಿಚಂದ್ರ ನೆರವೇರಿಸಿದರು. ಸ್ಕೌಟ್ ಗೈಡ್ ಮಕ್ಕಳಿಂದ ಸ್ಕೌಟ್ ಧ್ವಜವಂದನೆ,ಸೇವಾದಳ ಮಕ್ಕಳಿಂದ ಡಂಬಲ್ಸ್ ಲೇಜಿಂ ಪ್ರದರ್ಶನ ನಡೆಯಿತು. ಡಾ. ಬಿ ಆರ್ ಅಂಬೇಡ್ಕರ್ ಇವರ ಭಾವಚಿತ್ರಕ್ಕೆ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ನವ್ಯ ಇವರು ಪುಷ್ಪಾರ್ಚನೆ ಗೈದರು.
ಈ ಸಂದರ್ಭದಲ್ಲಿ ಕಿರಣ್ ಎಂಟರ್ಪ್ರೈಸಸ್ ಪುತ್ತೂರು ಇದರ ಮ್ಹಾಲಕ ಕೇಶವ ನಾಯಕ್ ಪುತ್ತೂರು 50,000 ವೆಚ್ಚದಲ್ಲಿ ಇಂಟರ್ಲಾಕ್ ಅಳವಡಿಸಿಕೊಟ್ಟು ಲೋಕಾರ್ಪಣೆ ಮಾಡಿದರು.
ಗ್ರಾಮ ಪಂಚಾಯತ್ ನರಿಮೊಗರು ಇವರು ಕೊಡಮಾಡಿದ ಕೈ ತೊಳೆಯುವ ನೀರಿನ ತೊಟ್ಟಿಯನ್ನು ಗ್ರಾಮ ಪಂಚಾಯತ್ ಸದಸ್ಯ ಬಾಬು ಶೆಟ್ಟಿ ಇವರು ಉದ್ಘಾಟಿಸಿದರು.
ಶಾಲಾ ಎಸ್ ಡಿ ಎಂ ಸಿ ನೇತ್ರತ್ವದಲ್ಲಿ ನಿರ್ಮಾಣವಾದ ಸುಂದರವಾದ ಹೂತೋಟವನ್ನು ಉದ್ಘಾಟಿಸಿದರು. ಸ್ವಚ್ಛ ವೀರಮಂಗಲ ಕಾರ್ಯಕಮ ಪ್ರಮಾಣ ಸ್ವೀಕರಿಸಲಾಯಿತು. ಮಕ್ಕಳು ಸಂವಿದಾನದ ಪೀಠಿಕೆಯನ್ನು ಹೇಳಿದರು. ಬಳಿಕ ನಡೆದ ಸಭಾ ಕಾರ್ಯಕ್ರಮ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ರವಿಚಂದ್ರ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯ ಬಾಬು ಶೆಟ್ಟಿ , ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಸಂತ ವೀರಮಂಗಲ, ಎಸ್ ಡಿ ಎಂ ಸಿ ಸದಸ್ಯರಾದ ಸಂದೀಪ್ ಕಾಂತಿಲ, ಹರೀಶ ಮಣ್ಣಗುಂಡಿ, ರಮೇಶ ಪಲಸಡ್ಕ, ಸುರೇಶ್ ಗಂಡಿ, ಯೋಗೀಶ್ ,ರಝಾಕ್, ನವ್ಯಾ, ಅರ್ಚನಾ,ಭವ್ಯ,ವಿನುತಾ, ಅನುಪಮ,ಉಪಸ್ಥಿತರಿದ್ದರು ಕಿರಣ್ ಎಂಟರ್ ಪ್ರೈಸಸ್ ನ ಕೇಶವ ನಾಯಕ್ ಇವರನ್ನು ಸನ್ಮಾನಿಸಲಾಯಿತು.
ಶಾಲಾ ಮಕ್ಕಳಿಂದ ಭಾಷಣ,ದೇಶಭಕ್ತಿಗೀತೆ, ನಾಟಕ ಪ್ರದರ್ಶನ ನಡೆಯಿತು. ಶಾಲಾ ಶಿಕ್ಷಕರಾದ ಶೋಭಾ,ಶ್ರೀಲತಾ ಹೇಮಾವತಿ,ಕವಿತಾ, ಶಿಲ್ಪರಾಣಿ,ಮಧುಶ್ರೀ,ಸುಮಿತ್ರಾ ಸವಿತಾ, ಸಂಚನಾ ,ಅಡುಗೆ ಸಿಬ್ಬಂಧಿಗಳಾದ ಪಾರ್ವತಿ,ಸುಶೀಲಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಶಾಲಾ ಮುಖ್ಯಗುರು ತಾರಾನಾಥ ಸವಣೂರು ಸರ್ವರನ್ನು ಸ್ವಾಗತಿಸಿದರು.ಶಿಕ್ಷಕಿ ಹರಿಣಾಕ್ಷಿ ವಂದಿಸಿದರು ಶಿಕ್ಷಕಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ನೂರಾರು ಪೋಷಕರು ಹಿರಿಯ ವಿದ್ಯಾರ್ಥಿಗಳು,ಉಪಸ್ಥಿತರಿದ್ದರು. ನೂತನ ಎಸ್ ಡಿ ಎಂ ಸಿ ಯವರು ಸಿಹಿಭೋಜನದ ವ್ಯವಸ್ಥೆ ಮಾಡಿದ್ದರು.