ಪುತ್ತೂರು:ನೆಟ್ಟಣಿಗೆ ಮೂಡ್ನೂರು ಸರಕಾರಿ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವ ನಡೆಯಿತು.
ಧ್ವಜಾರೋಹಣವನ್ನು ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಕಾರ್ಯಾಧ್ಯಕ್ಷ ಶ್ರೀರಾಮ್ ಪಕ್ಕಳ ನೆರವೇರಿಸಿ, ಮಾತನಾಡಿ, ದೇಶದ ಸಂವಿಧಾನವನ್ನು ಗೌರವಿಸುವುದರ
ಮುಖಾಂತರ ಎಲ್ಲರೂ ಕಾನೂನನ್ನು ಪಾಲನೆ ಮಾಡಬೇಕು ಎಂದರು.
ಶಾಲಾ ಹಿರಿಯ ಶಿಕ್ಷಕ ಪುರುಷೋತ್ತಮ ಬಿ ಸ್ವಾಗತಿಸಿ ಮಹತ್ವದ ಬಗ್ಗೆ ಮಾತನಾಡಿದರು. ಅತಿಥಿ ಶಿಕ್ಷಕರಾದ ದಮಯಂತಿ ವಂದಿಸಿದರು. ಶಿಕ್ಷಕರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ದೇವಿ ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.