ಅಧ್ಯಕ್ಷರಾಗಿ ಪುರುಷೋತ್ತಮ ಶೆಟ್ಟಿ ನುಳಿಯಾಲು
ಕಡೇಶಿವಾಲಯ: ಬಂಟ್ವಾಳ ತಾಲೂಕಿನ ಕಡೇಶಿವಾಲಯ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ರಚನೆ ಇತ್ತೀಚೆಗೆ ನಡೆಯಿತು.
ಗ್ರಾಮಕರಣಿಕ ಕರಿಬಸಪ್ಪ,ಕಂದಾಯ ನಿರೀಕ್ಷಕ ವಿಜಯ್, ಧಾರ್ಮಿಕ ಇಲಾಖೆಯ ಸದಸ್ಯರಾದ ಜಗನ್ನಾಥ ಚೌಟ ಬದಿಗುಡ್ಡೆ ಮಾಣಿ, ದೇವಪ್ಪ ಕುಲಾಲ್ ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೇ ನಡೆಯಿತು.
ನೂತನ ಸಮಿತಿಯ ಅಧ್ಯಕ್ಷರಾಗಿ ಪುರುಷೋತ್ತಮ ಶೆಟ್ಟಿ ನುಳಿಯಾಲು ಆಯ್ಕೆಯಾಗಿದ್ದಾರೆ.ಸದಸ್ಯರಾಗಿ ಸಂಜೀವ ಪೂಜಾರಿ ದಾಸಕೋಡಿ, ಪ್ರೇಮ ಶಿವಪ್ರಸಾದ್ ಶೆಟ್ಟಿ ಮಿತ್ತಿಮಾರ್,ಚಿದಾನಂದ ಪೂಜಾರಿ ಕಡೇಶಿವಾಲಯ, ಈಶ್ವರ ಪೂಜಾರಿ ಹಿರ್ತಡ್ಕ, ಸತೀಶ್ಚಂದ್ರ ಶೆಟ್ಟಿ ಅಮೈ ಬಾವಗುತ್ತು,ಶೃತಿ ಹರೀಶ್ಚಂದ್ರ ಭಂಡಾರಿ ಕಾಡಬೆಟ್ಟು, ಶೀನ ನಾಯ್ಕ ನೆಕ್ಕಿಲಾಡಿ ಆಯ್ಕೆಯಾದರು.