ಪುತ್ತೂರು: ಬಂಟರ ಸಂಘ ಬೆಂಗಳೂರು ಇದರ ವತಿಯಿಂದ ನಡೆದ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸ್ಮಾರಕ ವಾರ್ಷಿಕ ಕ್ರೀಡಾ ಮತ್ತು ಸಾಂಸೃತಿಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಪುತ್ತೂರಿನ ಇರ್ದೆ ನಿವಾಸಿ ರಜತ್ ರೈ ಇವರಿಗೆ ಕ್ರೀಡಾ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇವರು ವೆಯಿಟ್ಲಿಫ್ಟಿಂಗ್ ನಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿದ ಬಂಟರ ಸಂಘ ಬೆಂಗಳೂರು ಕ್ರೀಡಾ ಸಾಧನ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಿದ್ದಾರೆ.
ಕಾರ್ಯಕ್ರಮದಲ್ಲಿ ಬಂಟರ ಸಂಘ ಬೆಂಗಳೂರು ಇದರ ಗೌರವ ಕಾರ್ಯದರ್ಶಿಗಳಾದ ವಿಜಯ್ ಜೆ. ಶೆಟ್ಟಿ ಹಾಲಾಡಿ,ಅಧ್ಯಕ್ಷರು ಸಿಎ.ಅಶೋಕ್ ಶೆಟ್ಟಿ, ರೆಸ್ಟ್ಲಿಂಗ್ ಅಸೋಸಿಯೇಷನ್ ಇಂಡಿಯಾ ಇದರ ಜಂಟಿ ಕಾರ್ಯದರ್ಶಿ ಬಿ. ಗುಣರಂಜನ್ ಶೆಟ್ಟಿ ಮತ್ತು ಬಿಗ್ ಬಾಸ್ 7ರ ವಿನ್ನರ್, ಖ್ಯಾತ ಸಿನಿಮಾ ನಟ ಶೈನ್ ಶೆಟ್ಟಿ ಉಪಸ್ಥಿತರಿದ್ದರು.