ವಿಟ್ಲ, ಉಪ್ಪಿನಂಗಡಿ ನಾಡಕಚೇರಿ ನವೀಕರಣಕ್ಕೆ 11 ಲಕ್ಷ.ರೂ ಅನುದಾನ ಬಿಡುಗಡೆ

0

ಪುತ್ತೂರು: ವಿಟ್ಲ ಮತ್ತು ಉಪ್ಪಿನಂಗಡಿ ನಾಡಕಚೇರಿ ನವೀಕರಣಕ್ಕೆ ರಾಜ್ಯ ಕಂದಾಯ ಇಲಾಖೆಯಿಂದ ಒಟ್ಟು 11 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಅವರು ತಿಳಿಸಿದ್ದಾರೆ.


ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ ವಿಟ್ಲ ಮತ್ತು ಉಪ್ಪಿನಂಗಡಿ ನಾಡಕಚೇರಿಗೆ ಕಟ್ಟಡ ಸೌಲಭ್ಯ ಇದ್ದರೂ ಮೂಲಭೂತ ಸೌಲಭ್ಯಗಳಿರಲಿಲ್ಲ. ಕಳೆದ ಬಾರಿ ಶಾಸಕರಿಗೆ ಈ ಎರಡೂ ನಾಡಕಚೇರಿಗೆ ಭೇಟಿ ನೀಡಿದಾಗ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಗಮನಕ್ಕೆ ಬಂದಿತ್ತು. ಕಂದಾಯ ಇಲಾಖೆಯ ವ್ಯಾಪ್ತಿಗೊಳಪಡುವ ಪ್ರಮುಖ ಕಚೇರಿಯಾದ ನಾಡಕಚೇರಿಯಲ್ಲಿ ಮುಲಭೂತ ಸೌಕರ್ಯವನ್ನು ಕಲ್ಪಿಸುವ ಸಲುವಾಗಿ ಅನುದಾನ ಬಿಡುಗಡೆ ಮಾಡುವಂತೆ ಶಾಸಕರು ಕಂದಾಯ ಸಚಿವರಿಗೆ ಮನವಿ ಮಾಡಿದ್ದರು. ಶಾಸಕರ ಮನವಿಗೆ ಸ್ಪಂದಿಸಿದ ಕಂದಾಯ ಇಲಾಖೆ ಒಟ್ಟು 11 ಲಕ್ಷ ಅನುದಾನ ಒದಗಿಸುವ ಮೂಲಕ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿದೆ.

ವಿಟ್ಲ ಮತ್ತು ಉಪ್ಪಿನಂಗಡಿ ನಾಡಕಚೇರಿಗೆ ಕಟ್ಟಡ ಇದ್ದರೂ ಮೂಲಭೂತ ಸೌಕರ್ಯ ಇರಲಿಲ್ಲ. ಇದರಿಂದಾಗಿ ಕಚೇರಿಗೆ ಬರುವ ಸಾರ್ವಜನಿಕರಿಗೂ ಅಲ್ಲಿನ ಅಧಿಕಾರಿಗಳೂ ಸಂಕಷ್ಟ ಎದುರಿಸುವಂತಾಗಿತ್ತು. ಹಲವು ವರ್ಷಗಳಿಂದ ಇದರ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಎಂಬ ದೂರನ್ನು ಸಲ್ಲಿಸಿದ್ದರು. ಕಂದಾಯ ಇಲಾಖೆಗೆ ಈ ಬಗ್ಗೆ ಮನವರಿಕೆ ಮಾಡುವ ಮೂಲಕ ಕಟ್ಟಡ ನವೀಕರಣ ಹಾಗೂ ಮೂಲಭೂತ ಸೌಕರ್ಯಕ್ಕೆ ಒಟ್ಟು 11 ಲಕ್ಷ ಅನುದಾನ ಬಿಡುಗಡೆ ಮಾಡಿದೆ.
ಅಶೋಕ್ ರೈ ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here