ಪುತ್ತೂರಿನಲ್ಲಿ ಹಿಂದೂ ಧರ್ಮ ಶಿಕ್ಷಣ ಯೋಜನೆ: ಕೆಯ್ಯೂರು ಗ್ರಾಮ ಸಮಿತಿ ರಚನೆ

0

ಪುತ್ತೂರು: ಶ್ರೀ ಆದಿ ಶಂಕರಾಚಾರ್ಯರಿಂದ ಸ್ಥಾಪಿತವಾದ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಮತ್ತು ಶ್ರೀ ವಿಧುಶೇಖರ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆಯುವ ಹಿಂದೂ ಧಾರ್ಮಿಕ ಶಿಕ್ಷಣವು ಪುತ್ತೂರು ತಾಲೂಕಿನಲ್ಲಿ ಶಾಲಾ ಮಕ್ಕಳಿಗೆ ಮೂರು ಹಂತದಲ್ಲಿ ನೀಡಲು ಉದ್ದೇಶಿಸಿರುವ ಹಿಂದೂ ಧಾರ್ಮಿಕ ಶಿಕ್ಷಣ ಯೋಜನೆಯಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಲಾಗಿದ್ದು ಈಗಾಗಲೇ ಗ್ರಾಮ ಮಟ್ಟದಲ್ಲಿ ಸಮಿತಿಗಳು ರಚನೆಯಾಗುತ್ತಿದೆ. ಅದರಂತೆ ಕೆಯ್ಯೂರು ಗ್ರಾಮದಲ್ಲಿ ಜ.28 ರಂದು ಸಮಿತಿ ರಚನೆ ಮಾಡಲಾಯಿತು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ, ಸಮಿತಿ ರಚನೆಯ ತಾಲೂಕು ಸಂಯೋಜಕರಾದ ಸುಬ್ರಹ್ಮಣ್ಯ ನಟ್ಟೋಜರವರ ಉಪಸ್ಥಿತಿಯಲ್ಲಿ ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಲರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಿತಿಗಳನ್ನು ರಚಿಸಲಾಯಿತು.


ಗ್ರಾಮ ಸಮಿತಿಯ ಮಹಾಪೋಷಕರಾಗಿ ದಂಬೆಕ್ಕಾನ ಸದಾಶಿವ ರೈ, ಅಧ್ಯಕ್ಷರಾಗಿ ರಿತೇಶ್ ಪಾಟಾಳಿ ಮೇರ್ಲ, ಕಾರ್ಯಾಧ್ಯಕ್ಷರಾಗಿ ಚರಣ್ ಸಣಂಗಳ, ಗೌರವ ಅಧ್ಯಕ್ಷರಾಗಿ ರಮೇಶ್ ರೈ ಅಬ್ಬೆಜಾಲು ಬೊಳಿಕ್ಕಲ, ಸಂಚಾಲಕರಾಗಿ ಶಿವಶ್ರೀ ರಂಜನ್ ರೈ ದೇರ್ಲ, ಸಂಯೋಜಕರಾಗಿ ಆನಂದ ರೈ ದೇವಿನಗರ, ಉಪಾಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿ ಸಾಗು, ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೀತ್‌ರಾಜ್ ಕಟ್ಟತ್ತಾರು, ಕಾರ್ಯದರ್ಶಿಯಾಗಿ ಚೇತನ್ ಕುಮಾರ್ ದೇರ್ಲ, ಕೋಶಾಧಿಕಾರಿಯಾಗಿ ವಿಶ್ವೇಶ್ವರ ಭಟ್ ಪಲ್ಲತ್ತಡ್ಕ, ಗೌರವ ಸಲಹೆಗಾರರಾಗಿ ಶಶಿಧರ ರಾವ್ ಬೊಳಿಕ್ಕಲ, ದೇರ್ಲ ಚೆನ್ನಪ್ಪ ರೈ, ಮೋಹನ ರೈ ಓಲೆಮುಂಡೋವು, ಎಸ್.ಬಿ ಜಯರಾಮ ರೈ ಬಳಜ್ಜ, ಎ.ಕೆ ಜಯರಾಮ ರೈ ಕೆಯ್ಯೂರುರವರುಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳಾಗಿ ರವಿಕುಮಾರ್ ಕೈತಡ್ಕ, ಬೇಬಿ ಪೂಜಾರಿ ದೇರ್ಲ, ಬಾಲಕೃಷ್ಣ ರೈ ನೆಟ್ಟಾಳ, ದಿವಾಕರ ರೈ ಸಣಂಗಳ, ವೇಣುಗೋಪಾಲ ರೈ ನೂಜಿ, ಶರತ್ ಕುಮಾರ್ ರೈ ದೇರ್ಲ, ಪ್ರಸನ್ನ ಕುಮಾರ್ ಮಾರ್ತ ಇಳಂತಾಜೆ, ಹರೀಶ್ ನ್ಯಾಕ್ ಕಣಿಯಾರು, ಬಾಬು ಪಾಟಾಳಿದೇರ್ಲ, ವಿಷ್ಣು ಗೌಡ ಅಂಬುಲ, ಸದಾನಂದ ಗೌಡ, ಶರತ್ ಕುಮಾರ್ ಮಾಡಾವು, ವಸಂತ ರೈ ಮಾಡಾವು, ಅಶೋಕ್ ರೈ ದೇರ್ಲ, ಶಿವರಮ ರೈ ಕಜೆ, ದಿನೇಶ್ ಪೂಜಾರಿ ವಾಸುಕಿ, ರಮಾನಾಥ ರೈ ಕೋಡಂಬು, ಗುಡ್ಡಪ್ಪ ರೈ ಕೋರಿಕ್ಕಾರು, ಜೊತೆ ಕಾರ್ಯದರ್ಶಿಗಳಾಗಿ ಶ್ರೀಧರ ಪೂಜಾರಿ ಕೋಡಂಬು, ಸುರೇಂದ್ರ ರೈ ಇಳಂತಾಜೆ, ಭಾಸ್ಕರ ಐ ಮಠ, ದಿನೇಶ್ ಪೂಜಾರಿ ಕಣಿಯಾರೋಡಿ, ಅಮರನಾಥ ರೈ ನೂಜಿ, ಸುಕುಮರ ರೈ ಇಳಂತಾಜೆ, ರಾಜೇಶ್ ಭಟ್ ಮಾಡಾವು, ಚಂದ್ರಶೇಖರ ಪೂಜಾರಿ ಕೋಡಂಬು, ದೇವಣ್ಣ ನಾಯ್ಕ ಶಾಲಾ ಬಳಿ, ರಂಜಿತ್ ಗೌಡ ಕೈತಡ್ಕ, ರಾಧಾಕೃಷ್ಣ ಗೌಡ ಕೆಯ್ಯೂರು, ಪ್ರವೀಣ್ ಕಣಿಯಾರು, ರಾಜೇಶ್ ಸಂಪಾಜೆ, ಗೋಪಾಲಕೃಷ್ಣ ಎಂ ಸಂತೋಷ್‌ನಗರ, ಗಾವಸ್ಕರ್ ಕುಲಾಲ್ ಇಳಂತಾಜೆ, ಸತೀಶ್ ರೈ ದೇವಿನಗರ, ಪವನ್ ಕುಲಾಲ್ ಕೆಯ್ಯೂರು ಹಾಗೇ ಗ್ರಾಮದ ಸಮಿತಿ ಕಾಯಕಾರಿ ಸಮಿತಿ ಸದಸ್ಯರುಗಳಾಗಿ ಮೋಹನ ಅಜಲಾಯ,ಕೃಷ್ಣ ಸಾಮಾನಿ ದೇವಿನಗರ, ಪದ್ಮನಾಭ ಪೂಜಾರಿ ಪಲ್ಲತ್ತಡ್ಕ, ದಿನೇಶ್ ಆಚಾರ್ಯ ಕೆಯ್ಯೂರು, ಶ್ರೀಧರ ಗೌಡ ಎರಕ್ಕಳ, ಚಂದ್ರಶೇಖರ ಗೌಡ ಬಾಕ್ತಿಮಾರ್, ಸತ್ಯನಾರಾಯಣ ಮಾಡಾವು, ಮನೋಜ್ ರೈ ಮಾಡಾವು, ತಾರಾನಾಥ ಪೂಜಾರಿ ಕಂಪ, ಬಟ್ಯಪ್ಪ ರೈ ದೇರ್ಲ, ಶಿವರಾಮ ರೈ ಕಜೆ, ಭಾಸ್ಕರ ರೈ ಮಠ, ಮೋಹನ್ ರೈ ಬೇರಿಕೆ, ಜಯಂತ ಪೂಜಾರಿ ಕೆಂಗುಡೇಲು, ಸತೀಶ್ ರೈ ದೇರ್ಲ, ಡಾ.ಶ್ಯಾಮ್ ಭಟ್ ಪಲ್ಲತ್ತಡ್ಕ, ಮಧುಸೂಧನ ಭಟ್ ಕಜೆಮೂಲೆ, ಪಿ.ಮೋನಪ್ಪ ಪೂಜಾರಿ ದೇವಿನಗರರವರುಗಳನ್ನು ಆಯ್ಕೆ ಮಾಡಲಾಯಿತು. ಗೌರವ ಸದಸ್ಯರುಗಳಾಗಿ ರಾಮಣ್ಣ ಗೌಡ ಜ್ಯೋತಿ ನಿಲಯ, ವಿಶ್ವನಾಥ ಪೂಜಾರಿ ಕೆಂಗುಡೇಲು, ಕೃಷ್ಣ ಪ್ರಸಾದ್ ರೈ ಕಣಿಯಾರು, ರಾಮಯ್ಯ ರೈ ತೆಗ್ಗು, ರಘುರಾಮ ಭಟ್ ಪಲ್ಲತ್ತಡ್ಕ, ಶ್ರೀಪತಿ ಭಟ್ ಕೆಯ್ಯೂರು, ಬಾಲಕೃಷ್ಣ ರೈ ಮಾಡಾವು, ನಾರಾಯಣ ಪೂಜಾರಿ ಕೆಯ್ಯೂರು, ಎ.ಕೆ ಭಾಗ್ಯೇಶ್ ರೈ ಕೆಯ್ಯೂರು, ಸದಾಶಿವ ಭ್ ಅರ್ತ್ಯಡ್ಕ, ಡಾ.ಶಿವಪ್ರಸಾದ್ ಶೆಟ್ಟಿ, ಹರೀಶ್ ರೈ ದೇರ್ಲ, ಕೋಟಿ ಪರವ ಮಾಡಾವು, ಬಾಲಕೃಷ್ಣ ಪೂಜಾರಿ ಸರ್ವೆಯರ್, ಗೋಪಿನಾಥ ರೈ ಬೈಲಮೂಲೆ, ಡಾ.ಹರ್ಷ ಕುಮಾರ್ ರೈ ಮಾಡಾವು ಮತ್ತು ತಿಮ್ಮಪ್ಪ ಪೂಜಾರಿ ಕಣಿಯಾರುರವರನ್ನು ಆಯ್ಕೆ ಮಾಡಲಾಯಿತು.


ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಶಿಧರ ರಾವ್ ಬೊಳಿಕ್ಕಲರವರು, ಧಾರ್ಮಿಕ ಶಿಕ್ಷಣದ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ಅದನ್ನು ಶೃಂಗೇರಿ ಪೀಠದಿಂದ ಮಾಡುತ್ತಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ. ನಾವೆಲ್ಲರೂ ಧರ್ಮ ಶಿಕ್ಷಣವನ್ನು ಪಡೆದುಕೊಂಡು ಉತ್ತಮ ವ್ಯಕ್ತಿಗಳಾಗಿ ಬದುಕೋಣ ಎಂದು ಹೇಳಿ ಶುಭ ಹಾರೈಸಿದರು.

ಅತಿಥಿಯಾಗಿದ್ದ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ, ರಾಜಕೀಯ ರಹಿತವಾಗಿ ನೋಡಿದರೆ ನಾನೊಬ್ಬ ಕಾಂಗ್ರೆಸ್ಸಿಗನಾಗಿದ್ದರೂ ಒಬ್ಬ ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ಹಿಂದೂ ಧರ್ಮಕ್ಕೆ ಯಾವುದೇ ತೊಂದರೆ ಬಂದರೂ ನಾನು ಪಕ್ಷ ನೋಡುವುದಿಲ್ಲ ಬದಲಾಗಿ ಧರ್ಮ ನೋಡುತ್ತೇನೆ. ಧರ್ಮಕ್ಕಾಗಿ ಪಕ್ಷ ಬಿಟ್ಟು ಬರಲು ಸಿದ್ದನಿದ್ದೇನೆ ಏಕೆಂದರೆ ನಾವೆಲ್ಲರೂ ಅತ್ಯಂತ ಶ್ರೇಷ್ಠವಾದ ಹಿಂದೂ ಧರ್ಮದಲ್ಲಿ ಹುಟ್ಟಿರುವುದೇ ನಮಗೆ ಹೆಮ್ಮೆ ಎಂದು ಹೇಳಿ ಶುಭ ಹಾರೈಸಿದರು.

ತಾಲೂಕು ಸಮಿತಿ ಸಂಯೋಜಕರಾದ ಸುಬ್ರಹ್ಮಣ್ಯ ನಟ್ಟೋಜರವರು ಮಾತನಾಡಿ, ಧರ್ಮ ಶಿಕ್ಷಣ ಯೋಜನೆಯ ಬಗ್ಗೆ ಈಗಾಗಲೇ ತಾಲೂಕಿನಾದ್ಯಂತ ಸಮಿತಿಗಳು ರಚನೆಯಾಗುತ್ತಿದೆ ಅದರಲ್ಲೂ ಕೆಯ್ಯೂರಿನಲ್ಲಿ ರಚನೆಗೊಂಡ ಈ ಸಮಿತಿ ತಾಲೂಕಿನಲ್ಲೇ ಅತ್ಯಂತ ಬಲಿಷ್ಠ ಸಮಿತಿಯಾಗಿದೆ.ನನಗೆ ಅತ್ಯಂತ ಖುಷಿ ಆಗಿದೆ ಎಂದು ಹೇಳಿ ಶುಭ ಹಾರೈಸಿದರು.

ಎ.ಕೆ ಜಯರಾಮ ರೈ ಮಾತನಾಡಿ, ಇಂತಹ ಧರ್ಮ ಶಿಕ್ಷಣದ ಅಗತ್ಯ ನಮಗೆಲ್ಲರಿಗೂ ಬೇಕಾಗಿದೆ. ನಾವೆಲ್ಲರೂ ಈ ಬಗ್ಗೆ ಪ್ರಯತ್ನಪಡೋಣ ಎಂದು ಹೇಳಿ ಶುಭ ಹಾರೈಸಿದರು. ನೂತನ ಪದಾಧಿಕಾರಿಗಳಿಗೆ ಶಾಲು ಹಾಕಿ ಸ್ವಾಗತಿಸಲಾಯಿತು. ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಧಾರ್ಮಿಕ ಶಿಕ್ಷಣದ ಬಗ್ಗೆ ಸಮಿತಿ ರಚನೆ ಮಾಡಲು ಇದೆ ಎಂದು ನಾನು ಪ್ರತಿ ಮನೆಗೆ ಹೋಗಿ ಕರೆದವರು ಅತ್ಯಂತ ಪ್ರೀತಿ ಇಟ್ಟು ಸಭೆಗೆ ಬಂದಿರುವುದು ನನಗೆ ಖುಷಿ ಕೊಟ್ಟಿದೆ. ನಾವೆಲ್ಲರೂ ಒಟ್ಟಾಗಿ ಸೇರಿಕೊಂಡು ಈ ಧರ್ಮ ಶಿಕ್ಷಣದ ಅರಿವು ಮೂಡಿಸುವ ಕೆಲಸವನ್ನು ಮಾಡೋಣ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ಭವಾನಿ ಪಲ್ಲತ್ತಡ್ಕ ಉಪಸ್ಥಿತರಿದ್ದರು. ಆನಂದ ರೈ ದೇನಿಗರ ಸ್ವಾಗತಿಸಿ, ದಾಮೋದರ ಪೂಜಾರಿ ಕೆಂಗುಡೇಲು ವಂದಿಸಿದರು. ರವಿ ಕುಮಾರ್ ಕೈತಡ್ಕ ಕಾರ್ಯಕ್ರಮನಿರೂಪಿಸಿದರು.


ಮಹಿಳಾ ಸಮಿತಿ ರಚನೆ
ಮಹಿಳಾ ಸಮಿತಿ ಗೌರವ ಅಧ್ಯಕ್ಷರಾಗಿ ಭವಾನಿ ಚಿದಾನಂದ್ ದೇವಿನಗರ, ಅಧ್ಯಕ್ಷರಗಿ ಮೀನಾಕ್ಷಿ ವಿ.ರೈ ಮಾಡಾವು, ಕಾರ್ಯಾಧ್ಯಕ್ಷರಾಗಿ ಸುಚಿತ್ರಾ ಜೆ.ರೈ, ಸಂಚಾಲಕರಾಗಿ ಭವಾನಿ ಪಲ್ಲತ್ತಡ್ಕ, ಸಂಯೋಜಕರಾಗಿ ನಳಿನಿ ಸತ್ಯನಾರಾಯಣ್, ಉಪಾಧ್ಯಕ್ಷರಾಗಿ ರೂಪ ಎಸ್.ರೈ ಸಣಂಗಳ, ಪ್ರಧಾನ ಕಾರ್ಯದರ್ಶಿಯಾಗಿ ಶರಣ್ಯ ಆರ್.ಗೌಡ ಉದ್ದೋಳೆ, ಕಾರ್ಯದರ್ಶಿಯಾಗಿ ನಯನಾ ಶರತ್ ಗೌಡ ಜ್ಯೋತಿ ನಿಲಯ, ಕೋಶಾಧಿಕಾರಿಯಾಗಿ ವಿಶಾಲಾಕ್ಷಿ ಹರೀಶ್ ರೈ ದೇವಿನಗರ ಆಯ್ಕೆಯಾಗಿದ್ದಾರೆ. ಇದಲ್ಲದೆ ಉಪಾಧ್ಯಕ್ಷರುಗಳಾಗಿ ಮಮತಾ ಎಸ್.ರೈ, ವನಿತಾ ಅಂಬುಲ, ಸುಮಿತಾ ಎ.ರೈ, ಸುಚಿತ್ರಾ ಗೌಡ ಬೊಳಿಕ್ಕಲ, ಸುಜಯ ಪೂಜಾರಿ, ಸುಶೀಲ ಚಂದ್ರಶೇಖರ ಶೆಟ್ಟಿ, ರೇಖಾ ಮೋಹನ್ ಗೌಡ ಎರಕ್ಕಳ, ಲತ ರವಿ ಕುಮಾರ್ ಕೈತಡ್ಕ, ಲೀಲಾವತಿ ರೈ ಕೋಡಂಬು, ಗೌರವ ಸದಸ್ಯರುಗಳಾಗಿ ಪ್ರಭಾ ಎಸ್.ರೈ ನೂಜಿ, ಹರ್ಷಿತಾ ರಿತೇಶ್ ಮೇರ್ಲ, ಶ್ರೀಮತಿ ದೇವಣ್ಣ ಶಾಲಾಬಳಿ, ಶೋಭಾ ಕೋಡಂಬು, ಕಲಾವತಿ, ಯಶಸ್ವಿನಿ ಬಿ.ಎಚ್.ಸಣಂಗಳ, ಸುಭಾಷಿಣಿ ಚರಣ್ ಸಣಂಗಳ, ಗಿರಿಜ ಬಾಬು ಕಣಿಯಾರು, ಸುಮಿತ್ರಾ ದಿವಾಕರ್ ಪಲ್ಲತ್ತಡ್ಕ, ಸ್ಪಂದನ ಕೋಡಂಬು, ಸರೋಜಿನಿ, ಭಾಗೀರಥಿ ದೇವಿನಗರರವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here