ಕಟ್ಟಪುಣಿ ದಿ| ಗಿರಿಜಾ ಕೆ.ಬಿ.ಅವರ ಉತ್ತರಕ್ರಿಯೆ, ಶ್ರದ್ಧಾಂಜಲಿ ಸಭೆ

0

ಉಪ್ಪಿನಂಗಡಿ: ನಿವೃತ್ತ ಡಿವೈಎಸ್‌ಪಿ ದಿ| ಬಾಲಕೃಷ್ಣ ಗೌಡರವರ ಪತ್ನಿ, ಜ.13ರಂದು ನಿಧನರಾದ ಹಳೆನೇರೆಂಕಿ ಗ್ರಾಮದ ಕಟ್ಟಪುಣಿ ದಿ| ಗಿರಿಜಾ ಕೆ.ಬಿ.,(82ವ.) ಅವರ ಉತ್ತರಕ್ರಿಯೆ, ಶ್ರದ್ಧಾಂಜಲಿ ಕಾರ್ಯಕ್ರಮ ಜ.29ರಂದು ಮಧ್ಯಾಹ್ನ ಉಪ್ಪಿನಂಗಡಿ ಶ್ರೀ ಗುರು ಸುಧೀಂದ್ರ ಕಲಾಮಂದಿರದಲ್ಲಿ ನಡೆಯಿತು.


ಯಶೋಚಂದ್ರ ಪರಮಳೆ ಅವರು ನುಡಿನಮನ ಸಲ್ಲಿಸಿ, ಗಿರಿಜಾ ಕೆ.ಬಿ.,ಅವರು ಆದರ್ಶ ಗೃಹಿಣಿಯಾಗಿ ಸರಳ, ಸಜ್ಜನಿಕೆ, ಶಿಸ್ತು, ಗೌರವದಿಂದ ಬದುಕಿದವರು. ಪತಿಗೆ ಆದರ್ಶ ಪತ್ನಿಯಾಗಿದ್ದರು. ಮೂವರು ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಿ ಬೆಳೆಸಿದ ಸಾಕಾರಮೂರ್ತಿಯಾಗಿದ್ದರು. ಅಗಲಿದ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ ಎಂದು ಹೇಳಿ ಪ್ರಾರ್ಥಿಸಿದರು. ಸದಾನಂದ ಡಿ.ಪಿ.,ಅವರು ಮಾತನಾಡಿ, ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಹುಟ್ಟು ಮತ್ತು ಸಾವಿನ ನಡುವೆ ನಾವು ಹೇಗೆ ಜೀವನ ನಡೆಸಿದ್ದೇವೆ ಎಂಬುದು ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ಗಿರಿಜಾ ಕೆ.ಬಿ.,ಅವರು 82 ವರ್ಷ ಸಾರ್ಥಕ ಜೀವನ ನಡೆಸಿದವರು. ಪತಿಯ ಕಷ್ಟ,ಸುಖದಲ್ಲಿ ಪಾಲು ಪಡೆದಿದ್ದಾರೆ. ಮಕ್ಕಳಿಗೆ ಉತ್ತಮ ಸಂಸ್ಕಾರ, ವಿದ್ಯಾಭ್ಯಾಸ ನೀಡಿ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲರ ಅಭಿವೃದ್ಧಿಯಲ್ಲಿಯೂ ಸಂತೋಷ ಪಡುವ ಮನೋಭಾವ ಹೊಂದಿದ್ದ ಅವರು ಕೃಷಿಯಲ್ಲೂ ಯಶಸ್ವಿಯಾಗಿದ್ದರು. ಅವರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು.


ಮೃತರ ಸದ್ಗತಿಗಾಗಿ 1 ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಾಜಿ ಶಾಸಕ ಸಂಜೀವ ಮಠಂದೂರು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಮೃತರ ಪುತ್ರ ಡಾ.ರಾಜೇಶ್ ಕೆ.ಬಿ., ಸೊಸೆ ಡಾ.ಅರುಣರಾಜೇಶ್, ಪುತ್ರಿಯರಾದ ಆಶಾಜನಾರ್ದನ್, ಉಷಾಪ್ರಕಾಶ್, ಅಳಿಯಂದಿರಾದ ಡಾ.ಜಿ.ಜನಾರ್ದನ್, ಪ್ರಕಾಶ್ ಎಂ.ಎಸ್., ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here