ಕೂರೇಲು ಶ್ರೀ ಉಳ್ಳಾಕುಲು ಉಳ್ಳಾಲ್ತಿ ದೈವಸ್ಥಾನದಲ್ಲಿ ತಂಬಿಲ ಸೇವೆ, ಅನ್ನಸಂತರ್ಪಣೆ

0

ಪುತ್ತೂರು: ಆರ್ಯಾಪು ಗ್ರಾಮದ ಕೂರೇಲು ಮಣ್ಣಿನಲ್ಲಿ ಆರಾಧನೆ ಪಡೆಯುತ್ತಿರುವ ಶ್ರೀ ಉಳ್ಳಾಕುಲು ಉಳ್ಳಾಲ್ತಿ ಸಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ದೈವಗಳಿಗೆ ತಂಬಿಲ ಸೇವೆಯು ಜ.30 ರಂದು ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.

ಬೆಳಿಗ್ಗೆ ಗಣಪತಿ ಹೋಮ ನಡೆದು ಕಲಶ ಪೂಜೆ, ಕಲಶಾಭಿಷೇಕದ ಬಳಿಕ ತಂಬಿಲ ಸೇವೆ ನಡೆದು ಮಹಾಪೂಜೆ, ಮಹಾಮಂಗಳಾರತಿ ನಡೆಯಿತು. ಭಕ್ತಾಧಿಗಳಿಗೆ ಪ್ರಸಾದ ವಿತರಣೆಯ ಬಳಿಕ ಅನ್ನಸಂತರ್ಪಣೆ ನಡೆಯಿತು. ಕೂರೇಲು ಶ್ರೀ ಉಳ್ಳಾಕುಲು ಉಳ್ಳಾಲ್ತಿ ದೈವಸ್ಥಾನಕ್ಕೆ ಭಕ್ತಾಧಿಗಳಿಂದ ಗಂಟೆ ಅರ್ಪಣೆ ಸೇರಿದಂತೆ ಹಲವು ಸರ್ವ ಸೇವೆಗಳು ನಡೆಯಿತು. ಕೂರೇಲು ಕುಟುಂಬಸ್ಥರು, ಬಂಧುಮಿತ್ರರು, ಭಕ್ತಾಧಿಗಳು ಉಪಸ್ಥಿತರಿದ್ದು ಶ್ರೀ ದೈವಗಳ ಗಂಧ ಪ್ರಸಾದ, ಅನ್ನಪ್ರಸಾದ ಸ್ವೀಕರಿಸಿದರು. ಶ್ರೀ ದೈವಸ್ಥಾನದ ಅಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು ಭಕ್ತಾಧಿಗಳನ್ನು ಸ್ವಾಗತಿಸಿ, ಪ್ರಸಾದ ನೀಡಿ ಸತ್ಕರಿಸಿದರು. ಸರಸ್ವತಿ ಸಂಜೀವ ಪೂಜಾರಿ, ಹರ್ಷಿತ್ ಕುಮಾರ್ ಕೂರೇಲು ಸಹಕರಿಸಿದ್ದರು.


ವಿಶೇಷ ಕಾರಣಿಕ ಶಕ್ತಿಯನ್ನು ಹೊಂದಿರುವ ಕೂರೇಲು ಶ್ರೀ ಉಳ್ಳಾಕುಲು ಉಳ್ಳಾಲ್ತಿ ದೈವಸ್ಥಾನವು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಪುತ್ತೂರಿನಿಂದ 8 ಕಿ.ಮೀ ದೂರದ ಸಂಟ್ಯಾರ್‌ನಲ್ಲಿ ಇದೆ. ರಸ್ತೆಯ ಅನತಿ ದೂರದಲ್ಲಿ ಕಂಗೊಳಿಸುವ ಶ್ರೀ ದೈವಸ್ಥಾನದಲ್ಲಿ ಉಳ್ಳಾಕುಲು ಉಳ್ಳಾಲ್ತಿ ಸೇರಿದಂತೆ ಪರಿವಾರ ದೈವಗಳ ಆರಾಧನೆ ನಡೆಯುತ್ತದೆ. ಕೂರೇಲು ಶ್ರೀ ಮಲರಾಯ ದೈವಸ್ಥಾನ ಸೇರಿದಂತೆ ಕೂರೇಲು ಮಣ್ಣಿನಲ್ಲಿ ಬಹಳಷ್ಟು ದೈವಗಳ ಆರಾಧನೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here