ಶ್ರೀ ಕೃಷ್ಣ ಗೊಲ್ಲ ಸೇವಾ ಟ್ರಸ್ಟ್ ಪುತ್ತೂರು ವಲಯಾಧ್ಯಕ್ಷರಾಗಿ ವಾಸುದೇವ ಇಡ್ಯಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಧರ ಇಡ್ಯಾಡಿ

0

ಪುತ್ತೂರು: ಕಡಬ ತಾಲೂಕು ಪುತ್ತೂರು ವಲಯದ ಶ್ರೀ ಕೃಷ್ಣ ಗೊಲ್ಲ ಸೇವಾ ಟ್ರಸ್ಟ್ ಇದರ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಗಿದ್ದು, ಅಧ್ಯಕ್ಷರಾಗಿ ಇ.ಎಸ್ ವಾಸುದೇವ ಇಡ್ಯಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಧರ ಇಡ್ಯಾಡಿ, ಉಪಾಧ್ಯಕ್ಷರಾಗಿ ಟಿ.ಆರ್ ಮಂಜುನಾಥ್, ಜೊತೆ ಕಾರ್ಯದರ್ಶಿಯಾಗಿ ಆಶಾ ಬೆಳ್ಳಾರೆ ಮತ್ತು ಬಾಲಕೃಷ್ಣ ಇಚ್ಲಂಪಾಡಿ, ಖಜಾಂಜಿಯಾಗಿ ಬಾಲಕೃಷ್ಣ ಬಸ್ತಿ ಆಯ್ಕೆಯಾದರು.

ಸದಸ್ಯರುಗಳಾಗಿ ಆನಂದ ಇಡ್ಯಾಡಿ, ಪರಮೇಶ್ವರ ಇಡ್ಯಾಡಿ, ಸರಸ್ವತಿ ಪೂವ, ಗಣೇಶ್ ಪೂವ, ಸುಂದರ ಬೆದ್ರಾಜೆ, ಪುರುಷೋತ್ತಮ ನೆಲ್ಯಾಡಿ, ಚಂದ್ರಶೇಖರ ಇಡ್ಯಾಡಿ, ವೆಂಕಟೇಶ್ ಇಡ್ಯಾಡಿ, ಶಾಂತರಾಮ ಇಚ್ಲಂಪಾಡಿ, ಸುರೇಖಾ ಬಸ್ತಿ, ದಿವಾಕರ ಬಸ್ತಿ, ಜಗದೀಶ್ ಇಡ್ಯಾಡಿ ಆಯ್ಕೆಯಾದರು.

LEAVE A REPLY

Please enter your comment!
Please enter your name here