ಕುಮಾರ್ ಪೆರ್ನಾಜೆ, ಸೌಮ್ಯ ಪೆರ್ನಾಜೆ, ಸವಿತಾ ಕೊಡಂದೂರು “ಸರಸ್ವತಿ ಸಾಧಕ ಸಿರಿ “ರಾಷ್ಟ್ರ ಪ್ರಶಸ್ತಿಗೆ ಆಯ್ಕೆ

0

ಪೆರ್ನಾಜೆ: ದಾವಣಗೆರೆಯ ಸಾಲಿಗ್ರಾಮ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ವತಿಯಿಂದ ದಾವಣಗೆರೆ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆ ಯ ಸಹಯೋಗದಲ್ಲಿ 70ನೇ ಕನ್ನಡ ನಿತ್ಯೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಾದ ಸರಸ್ವತಿ ಸಾಧಕ ಸಿರಿ 2025 ನೇ ಸಾಲಿನ ರಾಷ್ಟ್ರಪ್ರಶಸ್ತಿಗೆ ಕನ್ನಡ ನಾಡು ನುಡಿ ಕಲೆ ಸಾಹಿತ್ಯ ,ಸಂಗೀತ ,ಸಂಸ್ಕೃತಿ ಹೀಗೆ ಲಲಿತ ಕಲೆಗಳ ಎಲ್ಲಾ ಪ್ರಕಾರ ಪ್ರಕಾರಗಳಲ್ಲಿ ಸಾಧನೆಗೈದ ಬರಗಾರ ಚಿಂತಕ, ಸಂಶೋಧಕ, ಜೇನು ಗಡ್ಡದಾರಿಯಾಗಿರುವ ಕುಮಾರ್ ಪೆರ್ನಾಜೆ ಬರಹ ಲೇಖನ ಗಳಿಂದಲೇ ಹೆಸರಾದವರು. ಶಿವಮೊಗ್ಗದಲ್ಲಿನ ಕೃಷಿ ಮೇಳದಲ್ಲಿ ದಕ ಜಿಲ್ಲೆಯ ಉತ್ತಮ ಕೃಷಿಕ ಪ್ರಶಸ್ತಿ ಗಳಿಸಿದವರು.

ಹವ್ಯಕ ಕೃಷಿ ರತ್ನ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕಲಾ ಪೋಷಕ ಕಲಾ ನಿರ್ದೇಶಕ ಶಿಕ್ಷಣ ಪ್ರೇಮಿಯಾಗಿ ಸಾಮಾಜಿಕವಾಗಿ ಗುರುತಿಸಿ ಕೊಂಡವರು ಹಾಗೆ ಇತ್ತೀಚೆಗೆ ತೃತೀಯ ವಿಶ್ವ ಹವ್ಯಕ ಸಮ್ಮೇಳನ ದಲ್ಲಿ ಕೃಷಿಕ ರತ್ನ ಪ್ರಶಸ್ತಿಗೆ ಸೌಮ್ಯ ಪೆರ್ನಾಜೆ ಅವರನ್ನು ಸಂಗೀತದ ವಿಶೇಷ ಬರಹಕ್ಕೆ. ಅಲ್ಲದೆ ಸವಿತಾ ಕೊಡಂದೂರು ಪೆರ್ನಾಜೆ ಪ್ರಶಸ್ತಿ , ಕೃಷಿ ರತ್ನ,ಗಡಿನಾಡ ಧ್ವನಿ ಮುಂತಾದ ವಿಶೇಷ ಹಾಡುಗಾರಿಕೆಯಲ್ಲಿ ಅದರಲ್ಲೂ ಸೆಕ್ಸೋಫೋನ್ ಜೊತೆ ಸಂಗೀತ ಕಲಾವಿದೆ ಯಾಗಿದ್ದು ಕಲಾ ಸೇವೆಯ ಸಾಧನೆ ಮೆಚ್ಚ ತಕ್ಕದ್ದು . ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಕೈ ಆಡಿಸಿ ಮೆರುಗನ್ನು
ಉಣಬಡಿಸುವ ಈ ಮೂವರು ಸಾಧಕರು ಆಯ್ಕೆಯಾಗಿದ್ದಾರೆ.


ದಾವಣಗೆರೆ ಚೆನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲ ಕಲ್ಯಾಣ ಮಂಟಪದಲ್ಲಿ ಏ 27ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ ಎಂದು ಪ್ರತಿಷ್ಠಾನದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here