ಪುತ್ತೂರು: ಪಡೀಲ್ ನಲ್ಲಿರುವ ಜೈ ಮಾತಾ ಇಂಡಸ್ಟ್ರಿಯಲ್ ಸಮೀಪದ ಜಂಕ್ಷನ್ನಲ್ಲಿ ರಸ್ತೆ ಬದಿಯಲ್ಲಿರುವ ಮೋರಿ ಹಾಗೂ ಕಲ್ಲುಗಳಿಂದ ವಾಹನ ಸಂಚಾರಕ್ಕೆ ತೊಂದರೆಯುಂಟಾಗುತ್ತಿದ್ದು ಅಪಘಾತಕ್ಕೆ ಕಾರಣವಾಗುತ್ತಿದೆ.
ಪುತ್ತೂರು ನಗರಸಭೆಯ ವ್ಯಾಪ್ತಿಯಲ್ಲಿ, ಪಡೀಲ್ ಜೈ ಮಾತಾ ಇಂಡಸ್ಟ್ರಿಯಲ್ ಹತ್ತಿರ ನಾಲ್ಕು ರಸ್ತೆ ಸೇರುವ ಜಂಕ್ಷನ್ನಲ್ಲಿ ನಗರಸಭೆ ವತಿಯಿಂದ ರಸ್ತೆ ದುರಸ್ಥಿ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಚರಂಡಿಗೆ ಅಳವಡಿಸಲಾದ ಮೋರಿಯನ್ನು ರಸ್ತೆಯ ಬದಿಯೇ ಎಸೆದು ಹಾಕಲಾಗಿದೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸಲು ತೊಂದರೆಯಾಗಿದ್ದು, ಮೋರಿಯನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.