- ಕುಟ್ರುಪಾಡಿ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಗ್ರಾಮಸಭೆ
- ಕಬಕ ಗ್ರಾ.ಪಂ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ ೧೧ಕ್ಕೆ ಗ್ರಾಮಸಭೆ
- ಕೆಮ್ಮಾಯಿ ಶ್ರೀ ಮಹಾವಿಷುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ೯ಕ್ಕೆ ತೋರಣ ಮುಹೂರ್ತ, ೧೦ಕ್ಕೆ ಉಗ್ರಾಣ ಮುಹೂರ್ತ, ಹಸಿರು ಹೊರೆ ಕಾಣಿಕೆ ಸಮರ್ಪಣೆ, ೧೨ಕ್ಕೆ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ, ಸ್ವಾಗತ ಗೋಪುರ ಉದ್ಘಾಟನೆ, ೧೨.೧೫ಕ್ಕೆ ವಿಷ್ಣು ಸಹಸ್ರನಾಮ ಹೋಮದ ಪೂರ್ಣಾಹುತಿ, ಆಶೀರ್ವಚನ, ಮಹಾಪೂಜೆ, ರಾತ್ರಿ ೮ಕ್ಕೆ ಶ್ರೀ ದೇವರ ಬಲಿ ಹೊರಟು, ಶ್ರೀ ಭೂತ ಬಲಿ ಉತ್ಸವ, ವಸಂತ ಕಟ್ಟೆ ಪೂಜೆ
- ಒಳಮೊಗ್ರು ಗ್ರಾಮದ ಶ್ರೀ ಕುಕ್ಕುಮುಗೇರು ಉಳ್ಳಾಕುಲು ದೈವಸ್ಥಾನದಲ್ಲಿ ಬೆಳಿಗ್ಗೆ ೧೦ಕ್ಕೆ ಮುಗೇರು ಕಾಯರ್ ಮಜಲಿನಲ್ಲಿ ಇಷ್ಟದೇವತೆ, ಪರಿವಾರ ದೈವಗಳಿಗೆ ತಂಬಿಲ ಸೇವೆ, ಮಧ್ಯಾಹ್ನ ೧೧ಕ್ಕೆ ಹೊಸಮಾರು ರಕೇಶ್ವರಿ ಕಟ್ಟೆಯಲ್ಲಿ ತಂಬಿಲ ಸೇವೆ
- ಇರ್ದೆ ವಿಷ್ಣುಮೂರ್ತಿ ದೇವಾಲಯ ಗೋಪಾಲಕ್ಷೇತ್ರ, ಪೂಮಾಣಿ -ಕಿನ್ನಿಮಾಣಿ, ರಾಜನ್ ದೈವಗಳ ಕದಿಕೆ ಚಾವಡಿಯಲ್ಲಿ ಬೆಳಿಗ್ಗೆ ೯ರಿಂದ ದರ್ಶನ ಬಲಿ, ಬಟ್ಟಲು ಕಾಣಿಕೆ, ಅಪರಾಹ್ನ ೩ರಿಂದ ದೈವಗಳ ತಂಬಿಲ, ಸಂಜೆ ೬ರಿಂದ ಭಜನಾ ಸಂಕೀರ್ತನೆ, ಸಾಂಸ್ಕೃತಿಕ ಕಾರ್ಯಕ್ರಮ, ೭ಕ್ಕೆ ಕದಿಕೆ ಚಾವಡಿಯಲ್ಲಿ ಮಕರ ತೋರಣ ಏರಿಸುವುದು, ರಾತ್ರಿ ರಂಗಪೂಜೆ
- ಪೋಳ್ಯ ಶ್ರೀ ಲಕ್ಷ್ಮೀ ವೆಂಕಟರಮಣ ಮಠದಲ್ಲಿ ಜಾತ್ರೋತ್ಸವ
- ಅನಂತಾಡಿ ಶ್ರೀ ಉಳ್ಳಾಲ್ತಿ ವೈದ್ಯನಾಥೇಶ್ವರ, ಹೊಸಮ್ಮ ಶ್ರೀ ಬ್ರಹ್ಮಬೈದರ್ಕಳ ಗರಡಿ, ಅಣ್ಣಪ್ಪ ಪಂಜುರ್ಲಿ ಪರಿವಾರ ದೈವಗಳ ಕ್ಷೇತ್ರ ಬಾಕಿಲಗುತ್ತುವಿನಲ್ಲಿ ಬೆಳಿಗ್ಗೆ ೯ಕ್ಕೆ ಶ್ರೀ ಕೊರಗಜ್ಜ ಕೋಲ
- ಬಡಗನ್ನೂರು ಗ್ರಾಮ ಪಟ್ಟೆ ತರವಾಡು ಮನೆಯಲ್ಲಿ ಬೆಳಿಗ್ಗೆ ೭ರಿಂದ ಧರ್ಮದೈವ ಶ್ರೀ ರುದ್ರಚಾಮುಂಡಿ ನೇಮೋತ್ಸವ, ಮಧ್ಯಾಹ್ನ ೧೨.೩೦ರಿಂದ ಅನ್ನಸಂತರ್ಪಣೆ, ಗುಳಿಗ ದೈವದ ಕೋಲ
ಶುಭಾರಂಭ
ಪುತ್ತೂರು ಚೇತನಾ ಆಸ್ಪತ್ರೆ ಹತ್ತಿರ, ಈಸ್ಟರ್ನ್ ಕಾಂಪ್ಲೆಕ್ಸ್‌ನಲ್ಲಿ ಬೆಳಿಗ್ಗೆ ೯.೩೦ಕ್ಕೆ ಸಿಟಿ ಟ್ರೇಡರ್‍ಸ್ ಶುಭಾರಂಭ
ಶುಭವಿವಾಹ
ಪುತ್ತೂರು ಸಾಲ್ಮರ ಕೊಟೇಚಾ ಹಾಲ್‌ನಲ್ಲಿ ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ರೆಂಜ ಮಾಧವ ಪೂಜಾರಿಯವರ ಪುತ್ರಿ ಸ್ವಾತಿ ಮತ್ತು ಗುಂಡಿದೊಟ್ಟು ಡೊಂಬಯ ಪೂಜಾರಿಯವರ ಪುತ್ರ ಪುರುಷೋತ್ತಮ್‌ರವರ ವಿವಾಹ