ನೆಲ್ಯಾಡಿ: ನೆಲ್ಯಾಡಿ ಗ್ರಾಮದ ಪಡ್ಪಗುಡ್ಡೆ ನಿವಾಸಿ, ನೆಲ್ಯಾಡಿ ಸೈಂಟ್ ಚಾರ್ಜ್ ವಿದ್ಯಾಸಂಸ್ಥೆಯ ನಿವೃತ್ತ ಸಿಬ್ಬಂದಿ ಜೋಸೆಫ್ ಡಿ’ಸೋಜಾರವರ ಪತ್ನಿ ಕ್ರಿಸ್ತಿನಾ (61ವ.)ರವರು ಫೆ.3ರಂದು ಬೆಳಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಹೃದಯಾಘಾತಕ್ಕೆ ಒಳಗಾಗಿ ನಿಧನರಾದರು ಎಂದು ವರದಿಯಾಗಿದೆ. ಮೃತರು ಪತಿ ಜೋಸೆಫ್ ಡಿ.ಸೋಜ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.