ಪುತ್ತೂರು: ವೈದ್ಯಕೀಯ ರಂಗದ ಜನರಲ್ ಮೆಡಿಸಿನ್ ವಿಭಾಗದಲ್ಲಿ ಎಂ.ಡಿ ಪದವಿಗೆ ಡಾ.ಝಕೀಯರವರು ಭಾಜನರಾಗಿದ್ದಾರೆ.
ಮಂಗಳೂರಿನ ಯೇನಪೋಯ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಹಾಗೂ ಎಂ.ಡಿ ಪದವಿಯನ್ನು ಡಾ.ಝಕೀಯರವರು ಪಡೆದುಕೊಂಡಿದ್ದು, ಅವರು ತಮ್ಮ ಪ್ರೌಢಶಿಕ್ಷಣವನ್ನು ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿದ್ದರು. ಡಾ.ಝಕೀಯರವರು ತಂದೆ ಝಕೀರ್ ಹುಸೈನ್, ತಾಯಿ ಆಸ್ಮಾ ಎಂ.ಜಿ, ಪತಿ ಮೊಯ್ದಿನ್ ಮುನ್ಝೀರ್ ರವರೊಂದಿಗೆ ಬೆಳ್ತಂಗಡಿ ತಾಲೂಕಿನ ಕರಾಯ ಎಂಬಲ್ಲಿ ವಾಸ್ತವ್ಯ ಹೊಂದಿದ್ದಾರೆ.