ಪುತ್ತೂರು: ಫೆ.22-23ರಂದು ನಡೆಯಲಿರುವ ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಬಿಡುಗಡೆ, ಸ್ವಯಂ ಸೇವಕರಿಗೆ ಶ್ರೀ ನಳೀಲು ಸುಬ್ರಹ್ಮಣ್ಯ ಕ್ಷೇತ್ರದ ವತಿಯಿಂದ ಟೀ ಶರ್ಟ್ ವಿತರಣೆಯು ಫೆ.2 ರಂದು ನಳೀಲು ಶ್ರೀ ಕ್ಷೇತ್ರದಲ್ಲಿ ನಡೆಯಿತು.
ಕ್ಷೇತ್ರದ ಪ್ರಧಾನ ಅರ್ಚಕ ಪ್ರವೀಣ್ ಶಂಕರ ಭಟ್ ಆಮಂತ್ರಣವನ್ನು ದೇವರ ನಡೆಯಲ್ಲಿಟ್ಟು ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸುಮಾರು 80 ಮಂದಿ ಸ್ವಯಂ ಸೇವಕರಿಗೆ ಟೀ ಶರ್ಟ್ ನೀಡಲಾಯಿತು.
ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು , ಕಾರ್ಯಾಲಯ ಸಮಿತಿಯ ಸುರೇಶ್ ರೈ ವಿಟ್ಲ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ರೈ ನಡುಕೂಟೇಲು, ಉಪಾಧ್ಯಕ್ಷ ಸುಬ್ರಾಯ ಗೌಡ ಪಾಲ್ತಾಡಿ, ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಸುರೇಶ್ಚಂದ್ರ ರೈ ಪಾಲ್ತಾಡಿ, ಮೊಕ್ತೇಸರರಾದ ನಾರಾಯಣ ರೈ ಮೊದೆಲ್ಕಾಡಿ,ಮೋಹನದಾಸ್ ರೈ, ಸತೀಶ್ ರೈ ನಳೀಲು, ಪ್ರವೀಣ್ ಕುಮಾರ್ ರೈ ನಳೀಲು, ಜಾತ್ರಾ ಸಮಿತಿ ಪ್ರ.ಕಾರ್ಯದರ್ಶಿ ಪ್ರವೀಣ್ ಚೆನ್ನಾವರ, ಜತೆ ಕಾರ್ಯದರ್ಶಿ ಕಿರಣ್ ಪ್ರಸಾದ್ ಕೆ., ಡಾ.ವೀಣಾ ಸಂತೋಷ್ ರೈ ,ಗ್ರಾ.ಪಂ.ಸದಸ್ಯ ತಾರನಾಥ ಬೊಳಿಯಾಲ ಮೊದಲಾದವರು ಉಪಸ್ಥಿತರಿದ್ದರು.