ಅಧ್ಯಕ್ಷ ಗೋಪಾಲಕೃಷ್ಣ ವೀರಮಂಗಲ, ಕಾರ್ಯದರ್ಶಿ ಭಾರತಿ ಕಾಡಮನೆ
ಪುತ್ತೂರು:ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನೂತನವಾಗಿ ಪ್ರಾರಂಭಗೊಂಡ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯ ಅಧ್ಯಕ್ಷರಾಗಿ ನೃತ್ಯಗುರು ವಿದ್ವಾನ್ ಗೋಪಾಲಕೃಷ್ಣ ವೀರಮಂಗಲ, ಕಾರ್ಯದರ್ಶಿಯಾಗಿ ಭಾರತಿ ಕಾಡಮನೆ ಹಾಗೂ ಗೌರವಾಧ್ಯಕ್ಷರಾಗಿ ದೇವಸ್ಥಾನದ ಅರ್ಚಕ ರಾಧಾಕೃಷ್ಣ ಶಗ್ರಿತ್ತಾಯವರು ಆಯ್ಕೆಯಾಗಿದ್ದಾರೆ.
ಸಮಿತಿ ಉಪಾಧ್ಯಕ್ಷರಾಗಿ ಸುಂದರ ಕುಲಾಲ್, ಜತೆ ಕಾರ್ಯದರ್ಶಿಯಾಗಿ ಪವಿತ್ರ ಹೊಸಮನೆ, ಕೋಶಾಧಿಕಾರಿಯಾಗಿ ಉಮೇಶ್ ಗೌಡ ಹೊಸಮನೆ, ಸದಸ್ಯರಾಗಿ ಸುಬ್ರಹ್ಮಣ್ಯ ಭಟ್, ಹರೀಶ್ ಮಣ್ಣಗುಂಡಿ, ಯಮುನಾ ರಘುಚಂದ್ರ, ಲೇಖಾ ಗುತ್ತು, ಶಾಂತರಾಮ ತೋಟದಮೂಲೆ, ಶಿವರಾಮ ಪಿಲಿಂಗೂರು, ಸಂದೀಪ್ ಕಾಂತಿಲ, ಸ್ಮಿತಾ ಜಯಪ್ರಕಾಶ್, ಕುಸುಮಾ, ಪುಷ್ಪಾಕರ ಗೌಡ, ಶಿವನೀತ್, ಪ್ರಶಾಂತಿ, ಹರ್ಷಗುತ್ತು, ವಿಶ್ವನಾಥ ಗುತ್ತು, ರಾಜೇಶ್ ಪೆಲತ್ತಡಿ ಹಾಗೂ ಶರತ್ ಗಾನಂತಿ ಆಯ್ಕೆಯಾಗಿದ್ದಾರೆ.
ದೇವಸ್ಥಾನದ ಅರ್ಚಕ ರಾಧಾಕೃಷ್ಣ ಶಗ್ರಿತ್ತಾಯರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಾರತಿ ಕಾಡಮನೆ ಸ್ವಾಗತಿಸಿದರು. ಸಂದೀಪ್ ಕಾಂತಿಲ ವಂದಿಸಿದರು. ಗೋಪಾಲಕೃಷ್ಣ ವೀರಮಂಗಲ ಕಾರ್ಯಕ್ರಮ ನಿರೂಪಿಸಿದರು.