ಇಂದಿನ ಕಾರ್ಯಕ್ರಮ(07/02/2025)

0

ಪುತ್ತೂರು ಅಮರ ಜವಾನ್ ಜ್ಯೋತಿ ಬಳಿ ಬೆಳಿಗ್ಗೆ ೧೦.೩೦ರಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಿ ಅಭಿವೃದ್ಧಿಗೆ ಅಡ್ಡಿಪಡಿಸಿದ ಬಿಜೆಪಿ ವಿರುದ್ದ ಕಾಂಗ್ರೆಸ್ ಪ್ರತಿಭಟನೆ
ಪಾಲೆತ್ತಡ್ಕ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಬಂಟ್ರ ೧ನೇ ವಾರ್ಡ್, ಕೆರ್ಮಾಯಿ ಹಿ.ಪ್ರಾ. ಶಾಲೆಯಲ್ಲಿ ಅಪರಾಹ್ನ ೧೨ಕ್ಕೆ ೧೦೨ನೇ ನೆಕ್ಕಿಲಾಡಿ ೨ನೇ ವಾರ್ಡ್, ನಡುಮಜಲು ಅಂಗನವಾಡಿ ಕೇಂದ್ರದಲ್ಲಿ ೨ಕ್ಕೆ ೧೦೨ನೇ ನೆಕ್ಕಿಲಾಡಿ ೧ನೇ ವಾರ್ಡ್‌ನ ವಾರ್ಡುಸಭೆ
ಐತ್ತೂರು ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ಬೆಳಿಗ್ಗೆ ೧೧ಕ್ಕೆ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ
ಐತ್ತೂರು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಐತ್ತೂರು ೩ನೇ ವಾರ್ಡ್, ನಲ್ಯಡ್ಕ ಹಿ.ಪ್ರಾ. ಶಾಲೆಯಲ್ಲಿ ಅಪರಾಹ್ನ ೧೨ಕ್ಕೆ ಐತ್ತೂರು ೧ನೇ ವಾರ್ಡ್, ಐತ್ತೂರು ಹಿ.ಪ್ರಾ. ಶಾಲೆಯಲ್ಲಿ ೨ಕ್ಕೆ ಐತ್ತೂರು ೨ನೇ ವಾರ್ಡ್‌ನ ವಾರ್ಡುಸಭೆ
ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ೯.೪೫ಕ್ಕೆ ಕಟೀಲು ಮೇಳದ ಶ್ರೀ ದೇವರ ಪೂಜೆ, ೧೦ಕ್ಕೆ ಲಲಿತಾ ಸಹಸ್ರನಾಮ ಪಾರಾಯಣ, ೧೧ಕ್ಕೆ ಧಾರ್ಮಿಕ ಸಭೆ, ೧೨ಕ್ಕೆ ಶ್ರೀ ಚಂಡಿಕಾ ಹವನದ ಪೂರ್ಣಾಹುತಿ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಸಂಜೆ ೬ರಿಂದ ಪಡುಮಲೆ ಶ್ರೀ ಕಟೀಲು ಮೇಳದ ಯಕ್ಷಗಾನ ಬಯಲಾಟ-ಶ್ರೀ ದೇವಿ ಮಹಾತ್ಮೆ
ಬುಡೇರಿಯಾ ಶ್ರೀ ದೇವಿ ಉಳ್ಳಾಲ್ತಿ, ಉಳ್ಳಾಕ್ಲು ದೈವಗಳ ಕ್ಷೇತ್ರದಲ್ಲಿ ಬೆಳಿಗ್ಗೆ ೭ರಿಂದ ಗಣಪತಿ ಹೋಮ, ೮.೩೦ರಿಂದ ನವಗ್ರಹಶಾಂತಿ ಸಹಿತ ಶನಿಶಾಂತಿ ಹೋಮ, ಶನೈಶ್ಚರ ಕಲ್ಪೋಕ್ತ ಪೂಜೆ, ನಾಗ ದೇವರಿಗೆ ನವಕ ಕಲಶಾಭಿಷೇಕ, ನಾಗರಾಜ ಕಲ್ಪೋಕ್ತ ಪೂಜೆ, ಕಲಶಾಭಿಷೇಕ, ತಂಬಿಲ, ಮಧ್ಯಾಹ್ನ ೧೨.೩೦ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ೬.೩೦ರಿಂದ ಆಶ್ಲೇಷ ಬಲಿ, ರಾತ್ರಿ ೮ರಿಂದ ರಂಗಪೂಜೆ
ಚಾರ್ವಾಕ, ದೈಪಿಲದಲ್ಲಿ ಶ್ರೀ ಶಿರಾಡಿ ರಾಜನ್ ದೈವ ಮತ್ತು ಚಕ್ರವರ್ತಿ ಕೊಡಮಣಿತ್ತಾಯ ದೈವಗಳ ನೇಮೋತ್ಸವ, ಬೆಳಿಗ್ಗೆ ೮ಕ್ಕೆ ಸ್ಥಳ ಶುದ್ಧಿ, ಗಣಹೋಮ, ಸಂಜೆ ೬ಕ್ಕೆ ಭಂಡಾರ ತೆಗೆಯುವುದು
ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ತಂತ್ರಿಗಳ ಆಗಮನ, ಪುಣ್ಯಾಹ, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಪರಿವಾರ ದೇವರುಗಳ ಪ್ರತಿಷ್ಠಾದಿನದ ಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ, ಸಂಜೆ ೬ರಿಂದ ದೀಪಾರಾಧನೆ, ತಾಯಂಬಕ ಸೇವೆ, ರಂಗಪೂಜೆ, ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ, ಶ್ರೀ ಭೂತಬಲಿ, ವಸಂತ ಕಟ್ಟೆ ಪೂಜೆ, ಸುಡುಮದ್ದು ಪ್ರದರ್ಶನ, ಅನ್ನಸಂತರ್ಪಣೆ
ಗಾಳಿಮುಖ ಪುದಿಯವಳಪ್ಪು ಮಖಾವಿನ ಎದುರುಗಡೆ ಖಿಳರ್ ಮೈದಾನದಲ್ಲಿ ಸಂಜೆ ೭ಕ್ಕೆ ಮಖಾಂ ಉರೂಸ್ ಉದ್ಘಾಟನೆ
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ದತ್ತಾಂಜನೇಯ ಕ್ಷೇತ್ರದಲ್ಲಿ ಬೆಳಿಗ್ಗೆ ೯ಕ್ಕೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ೧೧ರಿಂದ ಧರ್ಮಸಭೆ, ಅಪರಾಹ್ನ ೩ರಿಂದ ತಾಲೀಮು ಪ್ರದರ್ಶನ, ಸಾಂಸ್ಕೃತಿಕ ವೈವಿಧ್ಯ, ೫ರಿಂದ ನೃತ್ಯ ರಂಜಿನಿ, ರಾತ್ರಿ ೭ರಿಂದ ಶ್ರೀ ದತ್ತಾಂಜನೇಯ ದೇವರ ರಥೋತ್ಸವ
ಅನಂತಾಡಿ ಶ್ರೀ ಉಳ್ಳಾಲ್ತಿ ವೈದ್ಯನಾಥೇಶ್ವರ, ಹೊಸಮ್ಮ ಶ್ರೀ ಬ್ರಹ್ಮಬೈದರ್ಕಳ ಗರಡಿ, ಅಣ್ಣಪ್ಪ ಪಂಜುರ್ಲಿ ಪರಿವಾರ ದೈವಗಳ ಕ್ಷೇತ್ರ ಬಾಕಿಲಗುತ್ತುವಿನಲ್ಲಿ ನವಕ ಕಲಶ ಶುದ್ದ ಹೋಮ
ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನ ಚಿತ್ತರಿಗೆಯಲ್ಲಿ ಬೆಳಿಗ್ಗೆ ೮ರಿಂದ ಗಣಪತಿ ಹೋಮ, ನವಚಂಡಿಕಾ ಹೋಮ, ಕಲಶಾಭಿಷೇಕ, ಪಂಚಪರ್ವ, ಸಂಜೆ ೫ರಿಂದ ಭಜನೆ, ೬ಕ್ಕೆ ಶ್ರೀ ದುರ್ಗಾ ನಮಸ್ಕಾರ ಪೂಜೆ, ಅಲಂಕಾರ ಪೂಜೆ
ವಿಟ್ಲ ಮಠದಹಿತ್ಲು ಶ್ರೀ ನಾಗ, ಶ್ರೀ ಜಟಾಧಾರಿ, ರಾಜನ್ ದೈವ ಗುಳಿಗ ದೈವ ಸಾನಿಧ್ಯದಲ್ಲಿ ಬೆಳಿಗ್ಗೆ ೮ಕ್ಕೆ ಶ್ರೀ ಗಣಪತಿ ಹೋಮ, ನಾಗದೇವರಿಗೆ ತಂಬಿಲ ಸೇವೆ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಸಂಜೆ ೪ರಿಂದ ಶ್ರೀ ಜಟಾಧಾರಿ ದೈವದ ಭಂಡಾರ ಆಗಮನ, ನವಕ ಕಲಶಾಭಿಷೇಕ, ಸಂಜೆ ೬.೩೦ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ೯ರಿಂದ ಸಭಾ ಕಾರ್ಯಕ್ರಮ, ೧೦ಕ್ಕೆ ಜಟಾಧಾರಿ ದೈವದ ಭಂಡಾರ ಮೈಮೆ ಗದ್ದೆಗೆ ಆಗಮನ, ಕಲ್ಜಿಗದ ಕಾಳಿ ಮಂತ್ರದೇವತೆ ತುಳು ನಾಟಕ, ೨ರಿಂದ ಜಟಾಧಾರಿ ದೈವದ ಮೈಮೆ
ಕೋಡಿಂಬಾಡಿ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೯ಕ್ಕೆ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ, ಅಪರಾಹ್ನ ೨.೩೦ರಿಂದ ಶೈಕ್ಷಣಿಕ ಕಾರ್ಯಕ್ರಮ, ಸಂಜೆ ೬.೩೦ರಿಂದ ಸಾರ್ವಜನಿಕ ಸಭಾ ಕಾರ್ಯಕ್ರಮ
ಉಪ್ಪಿನಂಗಡಿ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಬೆಳಿಗ್ಗೆ ೯.೩೦ಕ್ಕೆ ಅವಭೃತ ಅಭಿಷೇಕ, ೧೦ಕ್ಕೆ ಅವಭೃತೋತ್ಸವ ಹೊರಡುವುದು, ಅಪರಾಹ್ನ ೨.೩೦ಕ್ಕೆ ಧ್ವಜ ಅವರೋಹಣ, ಯಜ್ಷಮಂಟಪ ವಿಸರ್ಜನೆ, ಸಂಪ್ರೋಕ್ಷಣೆ, ಸಂಜೆ ೬.೩೦ಕ್ಕೆ ಮಹಾಪೂಜೆ, ರಾತ್ರಿ ೧೦ಕ್ಕೆ ಸಮಾರಾಧನೆ, ೧೧ಕ್ಕೆ ರಾತ್ರಿಪೂಜೆ, ರಾತ್ರಿ ಉತ್ಸವ
ಕೊಣಾಲು ಗ್ರಾಮದ ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ೫.೩೦ರಿಂದ ಮಹಾಗಣಪತಿ ಹೋಮ, ೧೦ರಿಂದ ಭಜನೆ, ೧೧.೩೦ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಸಂಜೆ ೫ರಿಂದ ಸಂಗೀತ ಕಾರ್ಯಕ್ರಮ, ೫.೩೦ರಿಂದ ದೀಪಾರಾಧನೆ, ಅಂಕುರ ಪೂಜೆ, ದುರ್ಗಾಪೂಜೆ, ೬.೩೦ರಿಂದ ಸಭಾ ಕಾರ್ಯಕ್ರಮ, ರಾತ್ರಿ ೯ರಿಂದ ಯಕ್ಷಗಾನ ನಾಟ್ಯ ವೈಭವ
ಸರ್ವೆ ಗ್ರಾಮದ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದದಲ್ಲಿ ಮಧ್ಯಾಹ್ನ ೧೨.೩೦ಕ್ಕ ಮಹಾಪೂಜೆ, ಸಂಜೆ ೫ರಿಂದ ದೇವಳದ ಪರಿವಾರ ದೈವಗಳ (ಪಿಲಿಭೂತ, ರಕ್ತೇಶ್ವರಿ, ಶಿರಾಡಿ ದೈವ, ಕುಪ್ಪೆ ಪಂಜುರ್ಲಿ) ಭಂಡಾರ ತೆಗೆಯುವುದು, ೬ಕ್ಕೆ ಅಡ್ಕರೆಗುಂಡಿಯಿಂದ ದೇವಳದ ಕಾವಲು ದೈವ ಗುಳಿಗನ ಭಂಡಾರವನ್ನು ಮೆರವಣಿಗೆಯಲ್ಲಿ ತರುವುದು, ರಾತ್ರಿ ೮ಕ್ಕೆ ಅನ್ನಸಂತರ್ಪಣೆ, ೯ರಿಂದ ದೈವಗಳಿಗೆ ನೇಮ
ಬನ್ನೂರು ಹನಫಿ ಜುಮ್ಮಾ ಮಸೀದಿಯ ವಠಾರದಲ್ಲಿ ವಾರ್ಷಿಕ ಜಲಾಲಿಯ್ಯ ದ್ಸಿಕ್ರ್ ಮಜ್ಲೀಸ್, ಧಾರ್ಮಿಕ ಮತ ಪ್ರವಚನ
ಇರ್ದೆ ಗ್ರಾಮ ಬಾಲ್ಯೊಟ್ಟುಗುತ್ತು ತರವಾಡು ಮನೆಯಲ್ಲಿ ರಾತ್ರಿ ೭ಕ್ಕೆ ಗೋಪಾಲಕ್ಷೇತ್ರ ಶ್ರೀ ವಿಷ್ಣುಮೂರ್ತಿ ದೇವರಿಗೆ ಕಾರ್ತಿಕ ಪೂಜೆ, ದೈವದ ತಂಬಿಲ, ಶ್ರೀ ಕ್ಷೇತ್ರದಿಂದ ದೈವದ ಭಂಡಾರ ಬಾಲ್ಯೊಟ್ಟುಗುತ್ತು ತರವಾಡು ಮನೆಗೆ ಆಗಮನ, ಅನ್ನಸಂತರ್ಪಣೆ
ದರ್ಬೆತ್ತಡ್ಕ ಸ.ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ವಾರ್ಷಿಕ ಶಿಬಿರದ ಉದ್ಘಾಟನೆ
ನೂಜಿಬಾಳ್ತಿಲ ಗ್ರಾಮದ ಬಳಕ್ಕ ಕುಟುಂಬದ ನೂತನ ತರವಾಡು ಮನೆಯಲ್ಲಿ ದೈವಗಳ ನೇಮೋತ್ಸವ


ಶುಭಾರಂಭ
ಕಲ್ಲಾರೆ ಇಎನ್‌ಟಿ ಡಾ. ರಾಮ್‌ಮೋಹನ್ ಕ್ಲಿನಿಕ್ ಬಳಿ ಬೆಳಿಗ್ಗೆ ೯.೩೦ಕ್ಕೆ ವಿಷನ್ ಐ ಕೇರ್ ಕಂಪ್ಯೂಟರೀಕೃತ ಕಣ್ಣಿನ ಪರೀಕ್ಷಾ ಕೇಂದ್ರದ ಸಹಸಂಸ್ಥೆ ಶುಭಾರಂಭ
ದರ್ಬೆ ಅವೆನ್ಯೂ ಕಂಪ್ಯೂಟರ್‍ಸ್‌ನಲ್ಲಿ ದಶಮಾನೋತ್ಸವ ಸಂಭ್ರಮದ ಪ್ರಯುಕ್ತ ನವೀಕರಣಗೊಂಡು ಶುಭಾರಂಭ
ಆಲಂಕಾರು ಕಾಲೇಜು ರೋಡ್, ಜಿ.ಎಲ್. ಕಾಂಪ್ಲೆಕ್ಸ್ ಬಿಲ್ಡಿಂಗ್ ಗ್ರೌಂಡ್ ಫ್ಲೋರ್‌ನಲ್ಲಿ ಬೆಳಿಗ್ಗೆ ಸ್ಪರ್ಶ ಕ್ಲಿನಿಕ್ ಶುಭಾರಂಭ


ಬ್ರಹ್ಮೋಪದೇಶ
ಪುತ್ತೂರು ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಲಕ್ಷ್ಮೀದೇವಿ ಬೆಟ್ಟದಲ್ಲಿ ಪುತ್ತೂರು ಲಕ್ಷ್ಮೀದೇವಿ ಬೆಟ್ಟ ಕೃಷ್ಣಪ್ರಸಾದ್‌ರವರ ಪುತ್ರ ಲಕ್ಷ್ಮೀ ಅರ್ಪಣ್‌ರವರ ಬ್ರಹ್ಮೋಪದೇಶ


ಶುಭವಿವಾಹ
ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ ರೆಂಜ ಶೇಷಪ್ಪ ಪೂಜಾರಿಯವರ ಪುತ್ರ ವಿಶು ಮತ್ತು ತೋಕೂರು ದಿ| ಟಿ. ಎಚ್. ಆನಂದರವರ ಪುತ್ರಿ ಅಶ್ವಿನಿಯವರ ವಿವಾಹ ಹಾಗೂ ಮಧ್ಯಾಹ್ನ ಪಣಂಬೂರು ಜೆ.ಎನ್.ಸಿ. ಹಾಲ್‌ನಲ್ಲಿ ಔತಣ ಕೂಟ
ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಶ್ರೀದೇವಿ ಭವನದಲ್ಲಿ ಪುಣಚ ಗ್ರಾಮದ ಕೆಲ್ಲಾಳಿ ಶಿವಪ್ಪ ನಾಯ್ಕರ ಪುತ್ರಿ ಯಶ್ವಿನಿ ಹಾಗೂ ಪುಣಚ ಗ್ರಾಮದ ಪಾರ್ತಿಮೂಲೆ ಬಾಲಪ್ಪ ನಾಯ್ಕರ ಪುತ್ರ ಮಂಜುನಾಥ ರವರ ವಿವಾಹ.


ಗೃಹಪ್ರವೇಶ
ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಕನ್ನಯ ಎಂಬಲ್ಲಿ ಜೀವನ ಜ್ಯೋತಿ ನಿಲಯದ ಗೃಹಪ್ರವೇಶ
ಕಡಬ ತಾಲೂಕು ಕೊಂಬಾರು ಗ್ರಾಮದ ಪೂಯಿಲ ಎಂಬಲ್ಲಿ ಆಶೀರ್ವಾದ್ ನಿಲಯದ ಗೃಹಪ್ರವೇಶ

LEAVE A REPLY

Please enter your comment!
Please enter your name here