ಇಂದು ಸಂಜೆ ದಿ ಪುತ್ತೂರು ಕ್ಲಬ್‌ ನಿಂದ ʼಸುಹಾನ ಸಫರ್‌ʼ ಸಾಂಸ್ಕೃತಿಕ ಕಾರ್ಯಕ್ರಮ

0

ಪುತ್ತೂರು: ದಿ ಪುತೂರು ಕ್ಲಬ್‌ ವತಿಯಿಂದ ಸುಹಾನ ಸಫರ್‌ ಎಂಬ ಶಿರ್ಷಿಕೆಯಡಿ ಹಳೆ ಹಿಂದಿ ಹಾಡುಗಳ ಸುಮಧುರತೆಯೊಂದಿಗೆ ಹಾಡು, ಹಾಗೂ ಇನ್ನೀತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡ ಕಾರ್ಯಕ್ರಮ ಇಂದು(ಫೆ.8) ಸಂಜೆ 7ರಿಂದ 9.30ರವರೆಗೆ ಪುತ್ತೂರು ಕ್ಲಬ್‌ ನಲ್ಲಿ ನಡೆಯಲಿದೆ.

ಸೀನಿಯರ್‌ ಕೆಟಗರಿ ಎಟೆರ್‌ ನಲ್‌ ವಾಯ್ಸ್‌ ಆಫ್‌ ಡಾಕ್ಟರ್ಸ್‌ ವರ್ಡ್‌ ವೈಡ್‌ ಸೀಸನ್‌-2ರ ದ್ವಿತೀಯ ಪ್ರಶಸ್ತಿ ವಿಜೇತ ಡಾ. ಕುಂಬ್ಳೆ ಅನಂತ್‌ ಪ್ರಭು ಅವರಿಂದ ಸಂಗೀತ ಕಾರ್ಯಕ್ರಮ, ನೀರೂಪಕ, ಮಿಮಿಕ್ರಿಯ ಕುಂಬ್ಳೆ ನರಸಿಂಹ ಪ್ರಭು, ಹಾಗೂ ಜೊತೆಗಾರರಾಗಿ ಪವಿತ್ರ ರೂಪೇಶ್‌, ವಿದ್ಯಾ ಸುವರ್ಣ, ಉಮಕಾಂತ್‌ ನಾಯಕ್‌ ಅವರಿಂದ ಕಾರ್ಯಕ್ರಮ ನಡೆಯಲಿದೆ.

ಇನ್ನು ರಾಜೇಶ್‌ ಭಾಗವತ್‌ ಮತ್ತು ತಂಡ ಮುಲ್ಕಿ ಇವರ ವತಿಯಿಂದ ಆರ್ಕೆಸ್ಟ್ರಾದಲ್ಲಿ ರಂಜಿಸಲು ಬರಲಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here