ಪುತ್ತೂರು: ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ಜಾತ್ರೋತ್ಸವ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆಯಿತು. ಫೆ.7 ರಂದು ಸಾಮೂಹಿಕ ಪ್ರಾರ್ಥನೆ,ಪುಣ್ಯಾಹ, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ , ಪರಿವಾರ ದೇವರುಗಳ ಪ್ರತಿಷ್ಠಾ ದಿನದ ಪೂಜೆ, ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು.
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈಯವರು ಅನ್ನದಾನದ ಸೇವಾಕರ್ತರಾಗಿದ್ದರು. ಸಂಜೆ ದೀಪರಾಧನೆ, ತಾಯಂಬಕ ಸೇವೆ, ರಂಗಪೂಜೆ, ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ, ಶ್ರೀ ಭೂತಬಲಿ, ವಸಂತ ಕಟ್ಟೆ ಪೂಜೆ, ಸುಡುಮದ್ದು ಪ್ರದರ್ಶನ, ಅನ್ನಸಂತರ್ಪಣೆ ನಡೆಯಿತು. ಗ್ರಾಮಸ್ಥರು ಮತ್ತು ಪರವೂರ ದಾನಿಗಳು ಅನ್ನದಾನದ ಸೇವಾಕರ್ತರಾಗಿದ್ದರು.
![](https://puttur.suddinews.com/wp-content/uploads/2025/02/038cd2fd-6741-403c-835b-25573b8a6aad.jpg)
ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ವೆಂಕಪ್ಪ ಶೆಟ್ಟಿ ಸವಣೂರುಗುತ್ತು, ದೇವಾಲಯದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಬಡೆಕಿಲ್ಲಾಯ, ಅರ್ಚಕ ನಾರಾಯಣ ಬಡೆಕಿಲ್ಲಾಯ, ಜಾತ್ರೋತ್ಸವ ಸಮಿತಿಯ ಕಾರ‍್ಯದರ್ಶಿ ಬೆಳಿಯಪ್ಪ ಗೌಡ ಚೌಕಿಮಠ, ಕೋಶಾಧಿಕಾರಿ ರವೀಂದ್ರನಾಥ ರೈ ನೋಲ್ಮೆ, ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ ಸುಣ್ಣಾಜೆ, ಪ್ರಧಾನ ಕಾರ‍್ಯದರ್ಶಿ ರಾಘುವ ಗೌಡ ಸವಣೂರು, ಶ್ರೀ ಶಿರಾಡಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಪ್ರಜ್ವಲ್ ಕೆ.ಆರ್ ಕೋಡಿಬೈಲು, ಪುರಂದರ ಬಾರಿಕೆ, ಅಧ್ಯಕ್ಷ ಪ್ರಕಾಶ್ ಮಾಲೆತ್ತಾರು, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಮುಖ್ಯಕಾರ‍್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಆಶ್ವಿನ್ ಎಲ್.ಶೆಟ್ಟಿ, ಟ್ರಸ್ಟಿ ರಶ್ಮಿ ಅಶ್ವಿನ್ ಶೆಟ್ಟಿ ಸವಣೂರು, ವೀರಮಂಗಲ ಪಿಎಂಶ್ರೀ ಶಾಲಾ ಮುಖ್ಯಗುರು ತಾರಾನಾಥ ಸವಣೂರು ಹಾಗೂ ಸವಣೂರುಗುತ್ತು ಕುಟುಂಬಸ್ಥರು, ಊರ-ಪರವೂರ ಭಕ್ತಾಧಿಗಳು ಭಾಗವಹಿಸಿದರು.