ಪುತ್ತೂರು : ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಅಭಿವೃದ್ಧಿಗೆ ಅಡ್ಡಿಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಪದಾಧಿಕಾರಿಗಳು ಪುತ್ತೂರು ನಗರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಾಜ್ಯದಲ್ಲಿಯೇ ಕಾರಣಿಕ ಕ್ಷೇತ್ರವೆಂದು ಪ್ರಸಿದ್ಧಿ ಪಡೆದಿದೆ. ಲಕ್ಷಾಂತರ ಭಕ್ತಾದಿಗಳನ್ನು ಹೊಂದಿರುವ ಪವಿತ್ರ ಕ್ಷೇತ್ರವಾಗಿರುತ್ತದೆ. ಇಲ್ಲಿನ ಭಕ್ತಾದಿಗಳ ಅವಶ್ಯಕತೆಗಳಿಗನುಸಾರವಾಗಿ ದೇವಳವನ್ನು ಅಭಿವೃದ್ಧಿಯ ದೃಷ್ಟಿಯಿಂದ ಪುತ್ತೂರು ಶಾಸಕರ ಮಾರ್ಗದರ್ಶನದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯವರು ಅನೇಕ ಯೋಜನೆಗಳನ್ನು ರೂಪಿಸಿಕೊಂಡು ದೇವಳದ ಪಾವಿತ್ರ್ಯತೆಗೆ ಧಕ್ಕೆಯಾಗದ ರೀತಿಯಲ್ಲಿ ಸರಕಾರದ ಅನುದಾನವನ್ನು ಬಳಸಿಕೊಂಡು ದೇವಳವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿರುತ್ತಾರೆ. ಅಲ್ಲದೆ, ಅತಿಕ್ರಮಿಸಿಕೊಂಡಿರುವ ದೇವಳದ ಭೂಮಿಯನ್ನು ಸ್ವಾಧಿನ ಪಡಿಸಿಕೊಳ್ಳಲು ಮಾತುಕತೆಗಳು ನಡೆದಿರುತ್ತದೆ. ಆದರೆ ಕೆಲವು ಸ್ಥಾಪಿತ ಹಿತಾಸಕ್ತಿಗಳು ದೇವಳದ ಭೂಮಿಯನ್ನು ಅತಿಕ್ರಮಿಸಿ ಕೊಂಡು ಅಭಿವೃದ್ಧಿಯ ಯೋಜನೆಗೆ ಅಡ್ಡಿಪಡಿಸುತ್ತಿದ್ದಾರೆ ಇವರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ದೇವಳದ ಅಭಿವೃದ್ಧಿಗೆ ಸಹಕರಿಸುವ ನೆಲೆಯಲ್ಲಿ ವ್ಯವಸ್ಥಾಪನಾ ಸಮಿತಿಯವರಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಅಲ್ಲದೆ ಈ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿ ಶ್ರಮಿಸುತ್ತಿರುವ ಪುತ್ತೂರು ಶಾಸಕರಿಗೆ ಮತ್ತು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಮತ್ತು ಸಮಿತಿಯವರಿಗೆ ಸೂಕ್ತ ರಕ್ಷಣೆಯನ್ನು ನೀಡಬೇಕೆಂದು ಪುತ್ತೂರು ನಗರ ಠಾಣೆಯ ಇನ್ಸ್ಪೆಕ್ಟರ್ ಜಾನ್ಸನ್ ಡಿಸೋಜಾ ರವರಿಗೆ ಮನವಿ ಸಲ್ಲಿಸಲಾಯಿತು. ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಸಂಚಾಲಕರಾದ ವಸಂತ ಕುಮಾರ್ ರೈ, ಉಪಾಧ್ಯಕ್ಷರಾದ ಶಿವರಾಮ ಆಳ್ವ, ಚಿನ್ನಪ್ಪ ಪೂಜಾರಿ ಮುರ, ನಿರಂಜನ ರೈ ಮಠಂತಬೆಟ್ಟು ಪದಾಽಕಾರಿಗಳಾದ ರೋಷನ್ ರೈ ಬನ್ನೂರು, ರಂಜಿತ್ ಬಂಗೇರ, ಪ್ರವೀಣ್ ನಾಯಕ್ ಶಶಿಕಿರಣ ರೈ ನೂಜಿಬೈಲು, ನವೀನ್ ಚಂದ್ರ ನಾಕ್ ಮಂಜುನಾಥ ಗೌಡ ಬನ್ನೂರು ಸಹಿತ ಪದಾಽಕಾರಿಗಳು, ಸದಸ್ಯರುಗಳು ಮನವಿ ಸಲ್ಲಿಕೆ ಸಂದರ್ಭ ಉಪಸಿತರಿದ್ದರು.