ನೆಲ್ಯಾಡಿ: ಬಜತ್ತೂರು ಗ್ರಾಮದ ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೆ ಹಾಗೂ ದೈವಗಳ ನೇಮೋತ್ಸವ ಫೆ.12 ಹಾಗೂ 13ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಫೆ.11ರಂದು ಬೆಳಿಗ್ಗೆ ಕಾಣಿಕೆ ಡಬ್ಬಿ, ಬಲಿವಾಡ ಸಹಿತ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ಕಾಂಚನ ಬಸ್ನಿಲ್ದಾಣದಿಂದ ದೇವಸ್ಥಾನದ ತನಕ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಫೆ.12ರಂದು ಬೆಳಿಗ್ಗೆ 8.45ಕ್ಕೆ ಗೊನೆ ಮುಹೂರ್ತ ನಡೆಯಲಿದೆ. 9.30ರಿಂದ ಬಜತ್ತೂರು, ಕಾಂಚನ, ಪದಕ ದೈವಗಳಿಗೆ ತಂಬಿಲ ಮತ್ತು ಬಜತ್ತೂರು ಗುತ್ತಿನ ನಾಗತಂಬಿಲ, ಬೆಳಿಗ್ಗೆ 10ಕ್ಕೆ ತೋರಣ ಮುಹೂರ್ತ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7ಕ್ಕೆ ಚಕ್ರವರ್ತಿ ಕೊಡಮಣಿತ್ತಾಯ ಮತ್ತು ಗ್ರಾಮ ದೈವವಾದ ಶಿರಾಡಿ ದೈವಗಳ ಭಂಡಾರ ತರುವುದು, ರಾತ್ರಿ 8ಕ್ಕೆ ಶ್ರೀ ದೇವರಿಗೆ ರಂಗಪೂಜೆ ಹಾಗೂ ಪಂಜುರ್ಲಿ ಮತ್ತು ಗ್ರಾಮ ದೈವಗಳಿಗೆ ಕೊಡಿನಾಡಿನಲ್ಲಿ ತಂಬಿಲ, ಪ್ರಸಾದ ವಿತರಣೆ, ರಾತ್ರಿ 8.30ಕ್ಕೆ ಶ್ರೀ ದೇವರ ಬಲಿ ಹೊರಡುವುದು, ಅಶ್ವತ್ಥ ಕಟ್ಟೆಪೂಜೆ, ಉತ್ಸವ, ವಸಂತ ಕಟ್ಟೆಪೂಜೆ, ನೃತ್ಯ ಬಲಿ ನಡೆಯಲಿದೆ. ರಾತ್ರಿ 9ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ಫೆ.13ರಂದು ಬೆಳಿಗ್ಗೆ 8ಕ್ಕೆ ಗಣಪತಿ ಹೋಮ, ಕಲಶಾಭಿಷೇಕ, ಗಣಪತಿ ದೇವರಿಗೆ ಅಪ್ಪಸೇವೆ, ಬೆಳಿಗ್ಗೆ 9ರಿಂದ ಶ್ರೀ ದೇವರ ದರ್ಶನ ಬಲಿ, ಉತ್ಸವ, ಬಟ್ಟಲು ಕಾಣಿಕೆ ನಡೆಯಲಿದೆ. ಮಧ್ಯಾಹ್ನ ೧೨ಕ್ಕೆ ಕಲಶಾಭಿಷೇಕ, ಮಹಾಪೂಜೆ, ಪಂಜುರ್ಲಿ ದೈವಕ್ಕೆ ತಂಬಿಲ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ೭ಕ್ಕೆ ಶ್ರೀ ದೇವರಿಗೆ ರಂಗಪೂಜೆ, ವರ್ಣರ ಪಂಜುರ್ಲಿ ದೈವಕ್ಕೆ ತಂಬಿಲ ಮತ್ತು ಭಂಡಾರ ತೆಗೆಯುವುದು, ದೇವರ ಪ್ರಸಾದ ವಿತರಣೆ, ರಾತ್ರಿ ೯ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ೧೦ಕ್ಕೆ ವರ್ಣರ ಪಂಜುರ್ಲಿ, ಚಕ್ರವರ್ತಿ ಕೊಡಮಣಿತ್ತಾಯ, ಗ್ರಾಮ ದೈವ ಶಿರಾಡಿ ದೈವಗಳ ನೇಮೋತ್ಸವ ನಡೆಯಲಿದೆ. ಫೆ.೧೪ರಂದು ಅಪರಾಹ್ನ ದೊಂಪದ ಬಲಿಯ ಮಾರಿ ಪೂಜೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ:
ಫೆ.೧೩ರಂದು ಸಂಜೆ ೬.೪೫ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದ್ದು ಪ್ರಣಮ್ಯ ಭಟ್(ಹಾಡುಗಾರಿಕೆ), ಅನುಶ್ರೀ ಎಂ.(ವಯಲಿನ್), ತಮನ್ ಎಕ್ಕಡ್ಕ(ಮೃದಂಗ) ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ರಾತ್ರಿ ೭.೩೦ರಿಂದ ಹೊಸಗದ್ದೆ ಹಾಗೂ ಅಯೋಧ್ಯಾನಗರ ಸರಕಾರಿ ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.