ರಾಮಕುಂಜೇಶ್ವರ ಕಿಂಡರ್‌ಗಾರ್ಟನ್‌ನಲ್ಲಿ ಕಿಡ್ಸ್ ಫೆಸ್ಟ್

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಕಿಂಡರಗಾರ್ಟನ್‌ನಲ್ಲಿ ಫೆ.8ರಂದು ಕಿಡ್ಸ್ ಫೆಸ್ಟ್(ಮಕ್ಕಳ ಹಬ್ಬ) ವಿಜ್ರಂಭಣೆಯಿಂದ ನಡೆಯಿತು.


ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ, ವಿಶೇಷ ಆಹ್ವಾನಿತರಾಗಿ ಆಗಮಿಸಿದ ಪುತ್ತೂರು ಮಹಾಲಿಂಗೇಶ್ವರ ಐಟಿಐನ ನಿವೃತ್ತ ಪ್ರಾಂಶುಪಾಲ ಭವಾನಿಶಂಕರ್ ಗೌಡ, ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜಿನ ಉಪನ್ಯಾಸಕ ಚೇತನ್ ಆನೆಗುಂಡಿ, ಆತೂರು ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೀರಜ್‌ಕುಮಾರ್ ರೈ, ಕೊಯಿಲ ಗ್ರಾ.ಪಂ.ಅಧ್ಯಕ್ಷೆ ಪುಷ್ಪಾಸುಭಾಶ್ ಶೆಟ್ಟಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜಯಕರ ರೈ ಬುಡಲೂರು, ಮೆಸ್ಕಾಂ ಆಲಂಕಾರು ಶಾಖಾ ಜೆಇ ಪ್ರೇಮ್ ಕುಮಾರ್, ವಿಶ್ರಾಂತ ಪ್ರಾಂಶುಪಾಲ ವಿಠಲ ರೈ ಆಲಂಕಾರು, ಆಲಂಕಾರಿನ ಹೋಟೆಲ್ ಉದ್ಯಮಿ ರತೀಶ್ ಪೂಜಾರಿ, ಸಂಸ್ಥೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಹರೀಶ್ ಬಾರಿಂಜ ಅವರು ದೀಪ ಬೆಳಗಿಸಿ ಕಿಡ್ಸ್ ಫೆಸ್ಟ್‌ಗೆ ಚಾಲನೆ ನೀಡಿದರು.


ಮಕ್ಕಳಿಗಾಗಿ ಆಯೋಜಿಸಿದ್ದ ನಂಬರ್ ಶೂಟ್, ಬ್ಲೋವಿಂಗ್ ಬಬಲ್ಸ್, ಬಾಲ್ ಇನ್‌ದ ಬಕೆಟ್, ಫೀಡ್‌ದ ರಾಬೀಟ್, ಡ್ರಾಯಿಂಗ್ ಮತ್ತು ಪೈಂಟಿಂಗ್ ಹೀಗೆ ವಿವಿಧ ರೀತಿಯ ಸ್ಪರ್ಧೆಗಳಲ್ಲಿ ಪುಟಾಣಿಗಳು ತಮ್ಮ ಹೆತ್ತವರೊಂದಿಗೆ ಭಾಗವಹಿಸಿ ಸಂಭ್ರಮಿಸಿದರು. ವಿಶೇಷ ಆಕರ್ಷಣೆಯಾಗಿ ನಡೆದ ಆಹಾರ ಮೇಳದಲ್ಲಿ ಪೋಷಕರೇ ತಯಾರಿಸಿದ ಲೇಖನ ಸಾಮಾಗ್ರಿಗಳು, ಎಳ್ಳು-ಪುನರ್ಪುಳಿ ಜ್ಯೂಸ್, ಕಸ್ಟರ್ಡ್ ಜ್ಯೂಸ್, ಸಿಹಿ ಖಾದ್ಯಗಳು, ಕಲ್ಲಂಗಡಿ, ಫೈನಾಫಲ್, ಪಾನಿಪುರಿ, ಮಸಾಲ್ ಪುರಿ, ತರಕಾರಿಗಳು, ಫ್ರುಟ್ಸ್ ಸಲಾಡ್, ಗುಲಾಬ್ ಜಾಮೂನ್ ಹೀಗೆ ವಿವಿಧ ಬಗೆಯ ಆಹಾರ ಪದಾರ್ಥಗಳ ಮಾರಾಟವು ಭರ್ಜರಿಯಾಗಿ ನಡೆಯಿತು. ಮಕ್ಕಳ ಜೊತೆ ಪೋಷಕರು ಸೇರಿ ಸುಮಾರು 37,475 ರೂಪಾಯಿಗಳ ಆಹಾರ ಪದಾರ್ಥ ಮಾರಾಟ ಮಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ಆನಂದ್ ಎಸ್.ಟಿ., ವ್ಯವಸ್ಥಾಪಕ ರಮೇಶ್ ರೈ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಯು.ಎನ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಲೋಹಿತಾ ಎ ಹಾಗೂ ಸಂಸ್ಥೆಯ ಶಿಕ್ಷಕ-ಶಿಕ್ಷಕೇತರ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here