ಪುತ್ತೂರು: ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ನಾಲ್ಕರ ರೋಟರಿ ಕ್ಲಬ್ ಪುತ್ತೂರು ಸಿಟಿಗೆ ರೋಟರಿ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ಫೆ.11 ರಂದು ಅಧಿಕೃತ ಭೇಟಿ ನೀಡಿ ಕ್ಲಬ್ ನ ಸಾಮಾಜಿಕ ಚಟುವಟಿಕೆಗಳಿಗೆ ಚಾಲನೆ ನೀಡಲಿದ್ದಾರೆ.
ಬೆಳಿಗ್ಗೆ ವಿವೇಕಾನಂದ ಕಾಲೇಜ್ ಕ್ರಾಸ್ ನಲ್ಲಿ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರನ್ನು ರೋಟರಿ ಸಿಟಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಸ್ವಾಗತಿಸಿದ ಬಳಿಕ ವಿವೇಕಾನಂದ ಕಾಲೇಜು ಸಮೀಪದ ನಿವೇದಿತಾ ಶಿಶು ಮಂದಿರದಲ್ಲಿ ಆಟದ ಸಲಕರಣೆಗಳ ಉದ್ಘಾಟನೆ, ಪರ್ಲಡ್ಕ ಬೈಪಾಸ್ ಜಂಕ್ಷನ್ ನಲ್ಲಿನ ಬಸ್ ತಂಗುದಾಣದ ಉದ್ಘಾಟನೆ, ಮೌಂಟನ್ ವ್ಯೂ ಶಾಲೆಯ ಗ್ರಂಥಾಲಯದ ಉದ್ಘಾಟನೆ, ಮುಂಡೂರು ಬಳಿಯ ಬಸ್ಸು ತಂಗುದಾಣದ ಉದ್ಘಾಟನೆ, ಮುಂಡೂರು ಎಸ್.ಡಿ.ಪಿ ರೆಮಿಡೀಸ್ ಗೆ ಭೇಟಿ ನೀಡಲಿದ್ದಾರೆ. ಅಪರಾಹ್ನ ಕ್ಲಬ್ ಅಸೆಂಬ್ಲಿ ನಡೆಸಿ ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ರವರು ಭಾಗವಹಿಸಲಿದ್ದಾರೆ.
ಸಂಜೆ ಸೈನಿಕ್ ಭವನ್ ರಸ್ತೆಯ ರೋಟರಿ ಮನೀಷಾ ಸಭಾಂಗಣದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರೊಂದಿಗೆ ರೋಟರಿ ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ಜಯರಾಮ್ ರೈ, ವಲಯ ಸೇನಾನಿ ಶ್ರೀಮತಿ ಗ್ರೇಸಿ ಗೊನ್ಸಾಲ್ವಿಸ್ ರವರು ಉಪಸ್ಥಿತಲಿರುವರು ಎಂದು ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಮೊಹಮ್ಮದ್ ಸಾಹೇಬ್, ಕಾರ್ಯದರ್ಶಿ ರಾಮಚಂದ್ರರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.