ಶತಮಾನದ ಹೊಸ್ತಿಲಲ್ಲಿರುವ ಬೆಟ್ಟಂಪಾಡಿ ಹಿ.ಪ್ರಾ.ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ 1-7ನೇ ತರಗತಿಗಳಿಗೆ ದಾಖಲಾತಿ ಆಂದೋಲನ

0

ಪುತ್ತೂರು: ಶತಮಾನದ ಹೊಸ್ತಿಲಲ್ಲಿರುವ ಬೆಟ್ಟಂಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೨೪-೨೫ನೇ ಸಾಲಿಗೆ ಎಲ್‌ಕೆಜಿ, ಯುಕೆಜಿ ಹಾಗೂ ೧ರಿಂದ ೭ನೇ ತರಗತಿಗೆ ವಿದ್ಯಾರ್ಥಿಗಳ ಪ್ರವೇಶಾತಿಗೆ ಶಾಲಾ ಮಕ್ಕಳ ದಾಖಲಾತಿ ಆಂದೋಲನ ಮಾಡಲಾಯಿತು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸೌಮ್ಯಶ್ರೀ ವಿ. ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದರು. ದಾಖಲಾತಿ ಆಂದೋಲನ ಸಮಿತಿಯ ಅಧ್ಯಕ್ಷ ಜಗನ್ನಾಥ ರೈ ಕೊಮ್ಮಂಡ, ಜೊತೆ ಕಾರ್ಯದರ್ಶಿ ಶೇಷನ್ ಪಾರ, ಸಮಿತಿಯ ಸದಸ್ಯರುಗಳಾದ ಪ್ರಭಾಕರ ರೈ ಬಾಜುವಳ್ಳಿ, ಅಬ್ದುಲ್ ಲತಿಫ್, ಉಚಿತ್ ಕುಮಾರ್ ಬದಿನಾರು, ಬಿ.ಎ ಮಹಮ್ಮದ್ ಕುಂಞಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಕಾವೇರಿ, ಸರೋಜಿನಿ, ಪೂಜಾ, ತಿಮ್ಮಪ್ಪ ಶೆಟ್ಟಿ, ಹಿರಿಯ ವಿದ್ಯಾರ್ಥಿ ಲಿಂಗಪ್ಪ, ಅಶ್ರಫ್ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ ಉಪಸ್ಥಿತರಿದ್ದರು.

ಸಮಿತಿ ಸದಸ್ಯರುಗಳು ಮನೆ ಮನೆ ಭೇಟಿ ಮಾಡಿ ಪೋಷಕರ ಮನವೊಲಿಸಿ ಎಲ್‌ಕೆಜಿ, ಯುಕೆಜಿ ಹಾಗೂ ೧ರಿಂದ ೭ನೇ ತರಗತಿಗಳವರೆಗೆ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡುವಂತೆ ವಿನಂತಿಸಿದರು. ಇಲಾಖೆಯ ಉಚಿತ ಸೌಲಭ್ಯಗಳ ಹಾಗೂ ಶಿಕ್ಷಣದ ಬಗ್ಗೆ ಇಲಾಖೆಯ ಸಿಆರ್.ಪಿ ಪರಮೇಶ್ವರಿ ಮಾಹಿತಿ ನೀಡಿದರು. ಪ್ರಭಾರ ಮುಖ್ಯ ಶಿಕ್ಷಕಿ ಮಮತಾ ಸ್ವಾಗತಿಸಿ ಹಿರಿಯ ಶಿಕ್ಷಕಿ ಪುಷ್ಪ ಕೆ.ಆರ್ ವಂದಿಸಿದರು.

LEAVE A REPLY

Please enter your comment!
Please enter your name here