ಪುತ್ತೂರು: ಕುರಿಯ ದ.ಕ.ಜಿ.ಪಂ.ಸ.ಉ.ಹಿಪ್ರಾ ಶಾಲಾ ಎಸ್‌ಡಿಎಂಸಿ ಪುನಾರಚನೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಆರ್ಯಾಪು ಗ್ರಾ.ಪಂ. ಅಧ್ಯಕ್ಷೆ ಗೀತಾರವರ ಉಪಸ್ಥಿತಿಯಲ್ಲಿ ನೂತನ ಅಧ್ಯಕ್ಷರು ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಎಸ್‌ಡಿಎಂಸಿ ಯ ನಾಮ ನಿರ್ದೇಶನ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯ ಬೂಡಿಯಾರು ಪುರುಷೋತ್ತಮ ರೈ, ಗ್ರಾಮ ಪಂಚಾಯತ್ ಸದಸ್ಯರಾದ ಕಲಾವತಿ, ಯಾಕುಬ್ ಕುರಿಯ ಹಾಗೂ ನಾಗೇಶ್ ಉಪಸ್ಥಿತರಿದ್ದರು.
ಎಸ್‌ಡಿಎಂಸಿ ನೂತನ ಅಧ್ಯಕ್ಷರಾಗಿ ಅಬ್ದುಲ್ ಜಬ್ಬಾರ್ ಎಂ ಎಸ್ ಹಾಗೂ ಉಪಾಧ್ಯಕ್ಷರಾಗಿ ಮಿನಾಕ್ಷಿ ರವರನ್ನು ಆಯ್ಕೆ ಮಾಡಲಾಯಿತು.
ಎಸ್‌ಡಿಎಂಸಿ ಸದಸ್ಯರಾಗಿ ಸುಂದರ, ಸುಜಾತ, ಕುಸುಮ, ಸುಶೀಲ, ಇಂದಿರಾ, ನೆಸೀಮ, ಅಬೂಬಕ್ಕರ್, ಶಿವರಾಮ, ಫಾತಿಮಾ, ಜುಬೈದ, ಸೆಬಿನಾ, ಅಸ್ಮ, ಸುಮಯ್ಯ, ಗಣೇಶ್, ರಮ್ಯ, ಸುಮಾರವರನ್ನು ಆಯ್ಕೆ ಮಾಡಲಾಯಿತು.
ಪ್ರಭಾರ ಮುಖ್ಯಶಿಕ್ಷಕ ನವೀನ್ ಕುಮಾರ್ ಕೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕಿ ದಿವ್ಯಜ್ಯೋತಿ ಕೆ ಕಾರ್ಯಕ್ರಮ ನಿರೂಪಿಸಿ, ಕವಿತಾ ಪಿ ಎನ್ ವಂದಿಸಿದರು. ಎಸ್‌ಡಿಎಂಸಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.