ಫೆ.15: ಯುವಶಕ್ತಿ ಕಡೇಶಿವಾಲಯ ವತಿಯಿಂದ ‘ಸಂತೃಪ್ತಿ’ ಕಾರ್ಯಕ್ರಮ

0

ನೂತನ ಶಾಲಾ ಕೊಠಡಿಗಳ ಉದ್ಘಾಟನೆ, ರಕ್ತದಾನ ಶಿಬಿರ, ಟೀಮ್ ವೈಎಸ್‍ಕೆ ವೆಬ್ ಸೈಟ್ ಚಾಲನೆ, ಸೇವಾಲಕ್ಷ್ಯ -ನೂರು ಲಕ್ಷ, ಸಭೆ ಸನ್ಮಾನ ಸಮಾರಂಭ, ಯುವರತ್ನ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

ಪುತ್ತೂರು: ಯುವಶಕ್ತಿ ಕಡೇಶಿವಾಲಯ(ರಿ) ಇದರ ವತಿಯಿಂದ ‘ಸಂತೃಪ್ತಿ’ ಎನ್ನುವ ವಿನೂತನ ಕಾರ್ಯಕ್ರಮ ಇದೇ ಬರುವ ಫೆ.15 ರಂದು ಕಡೇಶಿವಾಲಯ ಸರಕಾರಿ ಹಿರಿಯ ಪ್ರಾಥಾಮಿಕ ಶಾಲೆ ಪೆರ್ಲಾಪು ಇಲ್ಲಿ ನಡೆಯಲಿದೆ.

ನೂತನ ಶಾಲಾ ಕೊಠಡಿಗಳ ಉದ್ಘಾಟನೆ, ರಕ್ತದಾನ ಶಿಬಿರ, ಟೀಮ್ ವೈಎಸ್‍ಕೆ ವೆಬ್ ಸೈಟ್ ಚಾಲನೆ, ಸೇವಾಲಕ್ಷ್ಯ -ನೂರು ಲಕ್ಷ, ಸಭೆ ಸನ್ಮಾನ ಸಮಾರಂಭ, ಯುವರತ್ನ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.


ಬೆಳಗ್ಗೆ ಗಣಹೋಮ ನಡೆದು ಬಳಿಕ ರಕ್ತದಾನ ಶಿಬಿರ, ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಸಮಾರಂಭ, ಸಾಯಿಶಕ್ತಿ ಬಳಗ ಮಂಗಳೂರು ಇವರಿಂದ ಅದ್ಧೂರಿ ರಂಗವಿನ್ಯಾಸದ ತುಳು ಜಾನಪದ ಸಿನಿನಾಟಕ ʼಜೋಡು ಜೀಟಿಗೆʼ ನಡೆಯಲಿದೆ.


ಕಾರ್ಯಕ್ರಮದಲ್ಲಿ ಸಭಾಧ್ಯಕ್ಷರಾದ ಯುಟಿ ಖಾದರ್, ಶಾಸಕ ರಾಜೇಶ್ ನಾಯ್ಕ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಹಾಗೂ ಮತ್ತಿತರರು ಗಣ್ಯಾತಿ ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರವಿ ಕಟಪಾಡಿ, ಅನೀಶ್ ಪೂಜಾರಿ, ಲೋಕಯ್ಯ ಶೇರಾ ಹಾಗೂ ರೋಹಿತ್ ಮಾರ್ಲಾ ಅವರಿಗೆ ಯುವರತ್ನ ಪ್ರಶಸ್ತಿ ಪ್ರದಾನ ನಡೆಯಲಿದೆ.

LEAVE A REPLY

Please enter your comment!
Please enter your name here