ಪುತ್ತೂರು: ಕಳೆದ 23 ವರ್ಷಗಳಲ್ಲಿ ಸುಗಮ ಸಂಗೀತ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲೇ ವಿಶೇಷವಾದ ಛಾಪನ್ನು ಮೂಡಿಸಿರುವ ಖ್ಯಾತ ಗಾಯಕ ಡಾ. ಕಿರಣ್ ಕುಮಾರ್ ಗಾನಸಿರಿ ಸಾರಥ್ಯದ ಗಾನಸಿರಿ ಕಲಾಕೇಂದ್ರದ ಪುತ್ತೂರು ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ “ಗಾನಸಿರಿ ಪುತ್ತೂರ ಸಂಗೀತ ಹಬ್ಬ” ಫೆಬ್ರವರಿ 15 ಶನಿವಾರ ಮತ್ತು 16 ಆದಿತ್ಯವಾರ ಅಪರಾಹ್ನ 2:30 ರಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಲಿದೆ.

ಫೆಬ್ರವರಿ 15ರಂದು 3:00 ಕ್ಕೆ ಸರಿಯಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಇವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ.
ಬಳಿಕ 3.15 ರಿಂದ ರಾತ್ರಿ 8:15 ರವರೆಗೆ ನಿರಂತರವಾಗಿ ಗಾನಸಿರಿಯ ಅತಿ ಕಿರಿಯ 60 ಜನ ಪುಟಾಣಿಗಳು “ಗಾನಸಿರಿ ಚಿಣ್ಣರ ಸಂಗೀತ ಹಬ್ಬ” ಕಾರ್ಯಕ್ರಮದಲ್ಲಿ ಸುಮಧುರವಾದ ಗೀತೆಗಳನ್ನು ಹಾಡಿ ರಂಜಿಸಲಿದ್ದಾರೆ….
ಫೆಬ್ರವರಿ 16ರಂದು ಅಪರಾಹ್ನ 2.00 ರಿಂದ ರಾತ್ರಿ 8.30 ರವರೆಗೆ ಗಾನ ಸಿರಿಯ ಜೂನಿಯರ್ ಹಾಗೂ ಸೀನಿಯರ್ ವಿಭಾಗದ 65 ಜನ ಪ್ರತಿಭಾನ್ವಿತ ವಿದ್ಯಾರ್ಥಿಗಳು “ಸುಗಮ ಸಂಗೀತೋತ್ಸವ” ಕಾರ್ಯಕ್ರಮದಲ್ಲಿ ಭಕ್ತಿ ಗೀತೆಗಳು, ಕನ್ನಡದ ಕವಿಗಳ ಭಾವಗೀತೆಗಳು, ಜನಪದ ಗೀತೆಗಳು, ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ.
ಗುರು ಡಾ .ಕಿರಣ್ ಕುಮಾರ್ ಗಾನಸಿರಿ ನಿರ್ದೇಶನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ, ಹಿಮ್ಮೇಳ ಕಲಾವಿದರಾಗಿ ಡಾ. ದಿನೇಶ್ ರಾವ್ ಸುಳ್ಯ, ಸುಹಾಸ್ ಹೆಬ್ಬಾರ್ ಮಣಿಯ, ಸುದರ್ಶನ್ ಆಚಾರ್ಯ ಜ್ಯೋತಿಗುಡ್ಡೆ ಭಾಗವಹಿಸಲಿದ್ದಾರೆ.ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ಸುಗಮ ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗಾನಸಿರಿಯ ಪ್ರಕಟಣೆ ತಿಳಿಸಿದೆ…