ರಾಮಕುಂಜ: ಕೊಯಿಲ ಗ್ರಾ.ಪಂ.ನ 2024-25ನೇ ಸಾಲಿನ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ ಫೆ.11ರಂದು ಬೆಳಿಗ್ಗೆ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ಗ್ರಾ.ಪಂ.ಅಧ್ಯಕ್ಷೆ ಪುಷ್ಪ ಸುಭಾಶ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪೆರಾಬೆ ಗ್ರಾ.ಪಂ. ಪುನರ್ ವಸತಿ ಕಾರ್ಯಕರ್ತ ಮುತ್ತಪ್ಪ ಅವರು ವಿಕಲಚೇತನರ ಹಾಗೂ ಹಿರಿಯ ನಾಗರಿಕ ಇಲಾಖೆ ಯೋಜನೆಗಳ ಮಾಹಿತಿ ನೀಡಿದರು. ಸೆಲ್ಕೋ ಸೋಲಾರ್ನ ಚಿದಾನಂದ ಅವರು ಸೋಲಾರ್ ಆಧಾರಿತ ಸ್ವ ಉದ್ಯೋಗದಲ್ಲಿ ವಿಕಲಚೇತನರಿಗೆ ಶೇ.50 ರಿಯಾಯಿತಿ ಸಿಗಲಿದೆ ಎಂದರು.

ಪಿಡಿಒ ಸಂದೇಶ್ಕುಮಾರ್ ಅವರು ಮಾತನಾಡಿ, ವಿಕಲಚೇತನರಿಗೆ ಅನುಕಂಪ ಬೇಡ. ವಿಕಲಚೇತನರಿಗೆ ಎಲ್ಲಾ ಕ್ಷೇತ್ರದಲ್ಲೂ ಸಮಾನ ಅವಕಾಶ ದೊರೆಯಬೇಕು ಎಂಧರು. ವಿಕಲಚೇತನರ ಆರೈಕೆದಾರರ ಪ್ರೋತ್ಸಾಹ ಧನ, ಹಿರಿಯ ನಾಗರಿಕರ ಗುರುತು ಚೀಟಿಯ ಕುರಿತು ಮಾಹಿತಿ ನೀಡಿದರು. ಉಪಾಧ್ಯಕ್ಷ ಯತೀಶ್ ಕುಮಾರ್, ಗ್ರಾ.ಪಂ.ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುನರ್ವಸತಿ ಕಾರ್ಯಕರ್ತೆ ಆತಿಕ್ಕಮ್ಮ ಸಹಕರಿಸಿದರು. ವಿಕಲಚೇತನರು, ವಿಕಲಚೇತನರ ಪೋಷಕರು ಉಪಸ್ಥಿತರಿದ್ದರು.