ರಾಮಕುಂಜ: ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ಪ್ರಯುಕ್ತ ಶ್ರೀ ದೇವರ ಬ್ರಹ್ಮರಥೋತ್ಸವ ಫೆ.12ರಂದು ರಾತ್ರಿ ವಿಜ್ರಂಭಣೆಯಿಂದ ನಡೆಯಿತು.
ಬೆಳಿಗ್ಗೆ ದೇವರ ಬಲಿ ಹೊರಟು ಉತ್ಸವ ನಡೆಯಿತು. ನಂತರ 48 ತೆಂಗಿನಕಾಯಿಗಳ ಶ್ರೀ ಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ ನಡೆಯಿತು. ರಾತ್ರಿ ಬಲಿ ಹೊರಟು ಉತ್ಸವ, ಬ್ರಹ್ಮರಥೋತ್ಸವ, ಶ್ರೀ ಭೂತಬಲಿ, ಶಯನೋತ್ಸವ ನಡೆಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಗುರುಪ್ರಸಾದ ರಾಮಕುಂಜ, ಸದಸ್ಯರೂ ಆದ ಅರ್ಚ ಅನಂತ ಉಡುಪ, ಸದಸ್ಯರಾದ ಕರುಣಾಕರ ಯು.ದೊಡ್ಡ ಉರ್ಕ, ಗುರುವಪ್ಪ ಕುಂಡಾಜೆ, ಶೈಲಜಾ ಬಿ.ಆಳ್ವ ಗುತ್ತುಮನೆ, ಪುಷ್ಪಾವತಿ ಜಯಪ್ರಕಾಶ್ ಬಾರಿಂಜ, ಜಗದೀಶ ಶೆಟ್ಟಿ ಅಂಬಾಬೀಡು, ಮಹೇಶ್ ಬಿ.ಬಾಂತೊಟ್ಟು, ಜಗದೀರ್ಶ ಎ.ಅಜ್ಜಿಕುಮೇರು, ಉತ್ಸವ ಸಮಿತಿ ಅಧ್ಯಕ್ಷ ಮಾಧವ ಆಚಾರ್ಯ ಇಜ್ಜಾವು, ಕಾರ್ಯದರ್ಶಿ ಸತೀಶ್ ಭಟ್ ಎಂ., ಉಪಾಧ್ಯಕ್ಷರಾದ ನಾರಾಯಣ ಭಟ್ ತೋಟ, ಸೇಸಪ್ಪ ರೈ ಬಾಂತೊಟ್ಟು, ರಾಧಾಕೃಷ್ಣ ಕೆ.ಎಸ್., ದಿವಾಕರ ರಾವ್ ಪಂಚವಟಿ, ಧರ್ಮಪಾಲ ರಾವ್ ಕಜೆ, ರಾಮ ಭಟ್ ಬೃಂದಾವನ, ತಿಮ್ಮಪ್ಪ ಗೌಡ ಆನ ಹಾಗೂ ಉತ್ಸವ ಸಮಿತಿ ಸದಸ್ಯರು ಸೇರಿದಂತೆ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.
ಯಕ್ಷಗಾನ:
ರಾತ್ರಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮೂಲ್ಕಿ ಇವರಿಂದ ಮಹಿಮೆದ ಉಳ್ಳಾಲ್ತಿ ಯಕ್ಷಗಾನ ಬಯಲಾಟ ನಡೆಯಿತು.