*ಪ್ರೋ ವಾಲಿಬಾಲ್ ಪಂದ್ಯಾಟ | ಸ್ಥಳೀಯರಿಗೆ ಆಟೋಟ ಸ್ಪರ್ಧೆ
*ಸನ್ಮಾನ ಸಮಾರಂಭ, ಸಹಾಯಧನ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ
ಕಾಣಿಯೂರು: ಜೋಕಾಲಿ ಬಳಗ ಕೃಷ್ಣಾಪುರ, ಕಾೖಮಣ ಇದರ 25ನೇ ವರ್ಷದ ಬೆಳ್ಳಿಹಬ್ಬದ ಪ್ರಯುಕ್ತ ಆಯ್ದ ಸ್ಥಳೀಯ ಆಟಗಾರರ ನಿಗದಿತ 7 ತಂಡಗಳ ಪ್ರೋ ವಾಲಿಬಾಲ್ ಪಂದ್ಯಾಟ,
ಸ್ಥಳೀಯರಿಗೆ ಆಟೋಟ ಸ್ಪರ್ಧೆ, ಸನ್ಮಾನ ಸಮಾರಂಭ, ಸಹಾಯಧನ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮವು ಫೆ 15, 16ರಂದು ಕಾೖಮಣ ಕೃಷ್ಣಾಪುರ ಜೋಕಾಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಫೆ 15ರಂದು ಬೆಳಿಗ್ಗೆ ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅರ್ಚಕ ಈಶ್ವರಚಂದ್ರ ಭಟ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಜೋಕಾಲಿ ಬಳಗದ ಅಧ್ಯಕ್ಷ ಚಂದ್ರ
ಶೇಖರ ಮುಂಡಾಳ ಅಧ್ಯಕ್ಷತೆ ವಹಿಸಲಿದ್ದಾರೆ. ದ.ಕ ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಸೇರಿದಂತೆ ಹಲವಾರು ಮಂದಿ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಫೆ 16ರಂದು ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜೋಕಾಲಿ ಬಳಗದ ಅಧ್ಯಕ್ಷ ಚಂದ್ರಶೇಖರ ಮುಂಡಾಳ ಅವರು ವಹಿಸಲಿದ್ದಾರೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೋಟ್ಯಾಡಿ ಅವರು ಸೇರಿದಂತೆ ಹಲವಾರು ಮಂದಿ ಗಣ್ಯರು ಅತಿಥಿಗಳಾಗಿ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯ ಎಲುಬು ಮತ್ತು ಮೂಲೆ ತಜ್ಞ ಡಾ| ಅಜಯ್, ಜಾನಪದ ರಾಜ್ಯ ಪ್ರಶಸ್ತಿ ಪುರಸ್ಕೃತ ಡೊಂಬಯ್ಯ ಅಜಲಾಯ, ನಿವೃತ್ತ ಸೈನಿಕರಾದ ರಾಮಕೃಷ್ಣ ಮರಕ್ಕಡ, ಶೀನಪ್ಪ ಗೌಡ ಅಲಾಜೆ ಬಾರಿಕೆ, ಪವರ್ ಮ್ಯಾನ್ ಗಳಾದ ಸಂತೋಷ್ ಲಂಬಾಣಿ, ಶಿವಾನಂದ ರಂಗಣ್ಣನವರ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಜೋಕಾಲಿ ಬಳಗದ ಹಿರಿಯ ಪದಾಧಿಕಾರಿಗಳಿಗೆ ಮತ್ತು ಹಿರಿಯ ಆಟಗಾರರಿಗೆ ಗೌರವಾರ್ಪಣೆ ನಡೆಯಲಿದೆ. ಬಳಿಕ ರಾತ್ರಿ ಪಟ್ಲ ಸತೀಶ್ ಶೆಟ್ಟಿಯವರ ಹಿನ್ನಲೆ ಗಾಯನದಲ್ಲಿ ಶ್ರೀದುರ್ಗಾ ಕಲಾತಂಡ ಪುಗರ್ತೆ ಕಲಾವಿದೆರ್ ಬಟ್ಲ ಮೈರ ಕೇಪು ಅಭಿನಯಿಸುವ ಅದ್ಧೂರಿ ಭಕ್ತಿ ಪ್ರಧಾನ ತುಳು ನಾಟಕ, ಕಲ್ಜಿಗದ ಕಾಳಿ ಮಂತ್ರದೇವತೆ ನಡೆಯಲಿದೆ ಎಂದು ಜೋಕಾಲಿ ಬಳಗದ ಪದಾಧಿಕಾರಿಗಳು ತಿಳಿಸಿದ್ದಾರೆ.