ಫೆ.15 ಅರ್ಕ ಶ್ರೀ ಗುಳಿಗ ಕೊರಗಜ್ಜ ಕ್ಷೇತ್ರದಲ್ಲಿ ವರ್ಷಾವಧಿ ನೇಮೋತ್ಸವ

0

ಪುತ್ತೂರು: ಕಾರಣಿಕದ ಕ್ಷೇತ್ರಗಳಲ್ಲಿ ಒಂದಾದ ಕೊಡಿಪಾಡಿ ಗ್ರಾಮದ ಅರ್ಕ ಶ್ರೀ ಗುಳಿಗ ಕೊರಗಜ್ಜ ಕ್ಷೇತ್ರದಲ್ಲಿ ಫೆ.15ರಿಂದ ಫೆ.16ರ ವರೆಗೆ ಗುಳಿಗ ಕೊರಗಜ್ಜ ದೈವದ ವರ್ಷಾವಧಿ ನೇಮೋತ್ಸವ, ತಂಬಿಲ, ಅಗೇಲು ಸೇವೆಗಳು ನಡೆಯಲಿದೆ.

ಫೆ.15ರಂದು ಬೆಳಿಗ್ಗೆ ಮಹಾಗಣಪತಿಹೋಮ, ಸ್ಥಳಶುದ್ದಿ, ದೈವಗಳಿಗೆ ಪರ್ವ ನಡೆಯಲಿದೆ. ರಾತ್ರಿ ಗಂಟೆ 7ರಿಂದ ಗುಳಿಗ ದೈವದ ನೇಮ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಬಳಿಕ ಕೊರಗಜ್ಜ ದೈವದ ನೇಮ ನಡೆಯಲಿದೆ. ಫೆ.16ರಂದು ಸಾಯಂಕಾಲ ಗುಳಿಗ ದೈವದ ತಂಬಿಲ, ರಾತ್ರಿ ಕೊರಗಜ್ಜ ದೈವದ ಆಗೇಲು ಸೇವೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಕ್ಷೇತ್ರದ ಆರಾಧಕರಾದ ಸುಕುಮಾರ ಅಂಚನ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here